CONNECT WITH US  

ಚೀನಾದಿಂದ ಬೃಹತ್‌ ಬಾಂಬ್‌

ಬೀಜಿಂಗ್‌: ವಿಶ್ವದ ಅತ್ಯಂತ ದೊಡ್ಡ ಬಾಂಬ್‌ ಅನ್ನು ನಾವು ತಯಾರಿಸಿದ್ದೇವೆ ಎಂದು ಚೀನಾ ಹೇಳಿಕೊಂಡಿದ್ದು, ಇದು ಅಮೆರಿಕ ಅಭಿವೃದ್ಧಿ ಪಡಿಸಿದ ಬೃಹತ್‌ ಬಾಂಬ್‌ ಮಾದರಿಯದ್ದು ಎಂದು ಹೇಳಲಾಗಿದೆ. ಅಲ್ಲದೆ ಇದು ಅಣ್ವಸ್ತ್ರರಹಿತ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ.

ರಕ್ಷಣಾ ಉಪಕರಣ ತಯಾರಕ ನೊರಿಂಕೋ ಮೊದಲ ಬಾರಿಗೆ ಈ ಬಾಂಬ್‌ ಅಭಿವೃದ್ಧಿಪಡಿಸಿದೆ. ಈ ಬಾಂಬ್‌ ಪ್ರಯೋಗ ಯಶಸ್ವಿಯಾಗಿ ಮಾಡಲಾಗಿದ್ದು, ಎಚ್‌6ಕೆ ಬಾಂಬರ್‌ನಿಂದ ಎಸೆಯಲಾಗಿದೆ. ಇದರಿಂದ ಭಾರಿ ಪ್ರಮಾಣದ ನ್ಪೋಟ ಸಂಭವಿಸಿದೆ ಎಂದು ನೊರಿಂಕೊ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ. ಇದೇ ಮೊದಲ ಬಾರಿಗೆ ವಿಡಿಯೋವನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕಳೆದ ವರ್ಷವಷ್ಟೇ ಅಫ್ಘಾನಿಸ್ತಾನದಲ್ಲಿ ಉಗ್ರರ ನೆಲೆಗಳ ಮೇಲೆ ಅಮೆರಿಕ ಜಿಬಿಯು 43ಬಿ ಬಾಂಬ್‌ ಅನ್ನು ಎಸೆದಿತ್ತು. ಇದನ್ನು "ಎಲ್ಲ ಬಾಂಬ್‌ಗಳ ತಾಯಿ' ಎಂದೇ ಕರೆಯಲಾಗಿತ್ತು.
 

Trending videos

Back to Top