CONNECT WITH US  

ಎನ್ನಾರೈ ಪೊಲೀಸ್‌ ಅಧಿಕಾರಿ ಹೀರೋ

ಡಿ.26ರಂದು ಅಕ್ರಮ ವಲಸೆಗಾರರು ಸಿಂಗ್‌ ರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು

ವಾಷಿಂಗ್ಟನ್‌: ಕ್ಯಾಲಿಫೋರ್ನಿಯಾದಲ್ಲಿ ಕೆಲ ದಿನಗಳ ಹಿಂದೆ ಹತ್ಯೆಗೀಡಾದ ಭಾರತೀಯ ಮೂಲದ ಪೊಲೀಸ್‌ ಅಧಿಕಾರಿ ರೊನಿಲ್‌ ರಾನ್‌ ಸಿಂಗ್‌ (33)ಅಮೆರಿಕದ ಹೀರೋ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ.

ಡಿ.26ರಂದು ಅಕ್ರಮ ವಲಸೆಗಾರರು ಸಿಂಗ್‌ ರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಸಿಂಗ್‌ ಕುಟುಂಬ ಸದಸ್ಯರ ಜತೆಗೆ ಭೇಟಿಯಾದಾಗ ಅವರು ಈ ಮಾತು ಹೇಳಿದ್ದಾರೆ. ಅಮೆರಿಕದ ಹೀರೋ ರೊನಿಲ್‌ರ ಜೀವ ತೆಗೆದವರಿಗೆ ದೇಶದಲ್ಲಿರುವ ಹಕ್ಕಿಲ್ಲ ಎಂದು ಗುಡುಗಿದ್ದಾರೆ.

ಕ್ರಿಸ್‌ಮಸ್‌ ವೇಳೆ ಇಂಥ ಘೋರ ದುರಂತ ನಡೆದದ್ದು ಖಂಡನೀಯ ಎಂದಿದ್ದಾರೆ. ಇದೇ ವೇಳೆ ಅಕ್ರಮ ವಲಸಿಗರನ್ನು ತಡೆಯಲು ಮೆಕ್ಸಿಕೋ ಗಡಿಯಲ್ಲಿ ತಡೆಗೋಡೆ ನಿರ್ಮಿಸಲು 4.17 ಲಕ್ಷ ಕೋಟಿ ರೂ. (5.7 ಬಿಲಿಯನ್‌ ಡಾಲರ್‌) ಬಿಡುಗಡೆ ಮಾಡುವಂತೆ ಡೆಮಾಕ್ರಾಟ್‌ ಸಂಸದರಿಗೆ ಅವರು ಮನವಿ ಮಾಡಿದ್ದಾರೆ.

ಮಾನವೀಯತೆ ಮತ್ತು ಭದ್ರತಾ ಸವಾಲು ನಿಯಂತ್ರಿಸಲು ಅದು ನೆರವಾಗಲಿದೆ ಎಂದಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿ ಸಿದಂತೆ ಆರ್ಥಿಕ ಬಿಕ್ಕಟ್ಟು ಎದುರಾಗಿರುವಾಗಲೇ ಟ್ರಂಪ್‌ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

Trending videos

Back to Top