CONNECT WITH US  

ಪೌರತ್ವ ನಿಯಮ ರದ್ದತಿಗೆ ಮಸೂದೆ

ವಾಷಿಂಗ್ಟನ್‌: ಪ್ರತಿ ದೇಶಕ್ಕೆ ಶೇ. 7ರ ನಿಯಮದ ಆಧಾರದಡಿ ಅಮೆರಿಕದಲ್ಲಿರುವ ವಲಸಿಗರಿಗೆ ಗ್ರೀನ್‌ ಕಾರ್ಡ್‌ (ಅಮೆರಿಕ ಪೌರತ್ವ) ನೀಡುವ ನಿಯಮ ರದ್ದುಗೊಳಿಸುವ ಆಶಯದ 'ಅತ್ಯುನ್ನತ ಕೌಶಲ್ಯವುಳ್ಳ ವಲಸಿಗರ ಕಾಯ್ದೆ' ಮಸೂದೆಯನ್ನು ಅಮೆರಿಕ ಸಂಸತ್ತಿನಲ್ಲಿ ಗುರುವಾರ ಮಂಡಿಸಲಾಗಿದೆ.

ಮೇಲ್ಮನೆಯಲ್ಲಿ 'ಹೌಸ್‌ ಆಫ್ ಸೆನೆಟ್'ನಲ್ಲಿ ರಿಪಬ್ಲಿಕನ್‌ ಪಕ್ಷದ ಸಂಸದ ಮೈಕ್‌ ಲೀ ಮತ್ತು ಡೆಮಾಕ್ರಟಿಕ್‌ ಪಕ್ಷದ ಸಂಸದೆ ಹಾಗೂ ಅಧ್ಯಕ್ಷ ಪದವಿ ಆಕಾಂಕ್ಷಿಯಾದ ಕಮಲಾ ಹ್ಯಾರಿಸ್‌ ಈ ಮಸೂದೆ ಮಂಡಿಸಿದರು. ಸದ್ಯಕ್ಕೆ, ಪ್ರತಿ ದೇಶಕ್ಕೆ ಶೇ. 7 ಕೋಟಾದಡಿ, ವಾರ್ಷಿಕವಾಗಿ 1,40,00 ಗ್ರೀನ್‌ ಕಾರ್ಡ್‌ ನೀಡಲಾಗುತ್ತಿದೆ. ಹಾಗಾಗಿ, ವಲಸಿಗರು ಪೌರತ್ವಕ್ಕಾಗಿ ಸರಾಸರಿ 151 ವರ್ಷ ಕಾಯಬೇಕಿದೆ! ಹಾಗಾಗಿ, ಕೋಟಾ ಪದ್ಧತಿ ರದ್ದು ಮಾಡುವ ಉದ್ದೇಶವನ್ನು ಮಸೂದೆ ಹೊಂದಿದೆ. ಇದರಿಂದ, ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯರಿಗೂ ನೆರವಾಗಲಿದೆ.


Trending videos

Back to Top