CONNECT WITH US  

ಪ್ರಧಾನಿ ಮೋದಿ ಅರುಣಾಚಲ ಪ್ರದೇಶ ಭೇಟಿ : ಚೀನದ ಪ್ರಬಲ ಆಕ್ಷೇಪ

ಬೀಜಿಂಗ್‌ : ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಚೀನ ಪ್ರಬಲವಾಗಿ ಆಕ್ಷೇಪಿಸಿದೆ. 

'ನಾವಿನ್ನೂ ಸೂಕ್ಷ್ಮ ಸಂವೇದನೆಯ ಗಡಿ ರಾಜ್ಯ ಅರುಣಾಚಲಕ್ಕೆ ಮಾನ್ಯತೆ ನೀಡಿಲ್ಲ; ಆದುದರಿಂದ ಭಾರತೀಯ ನಾಯಕರು ಅಲ್ಲಿಗೆ ಹೋಗಕೂಡದು; ಹೋದಲ್ಲಿ ಉಭಯ ದೇಶಗಳ ನಡುವಿನ ಗಡಿ ವಿವಾದವು ಇನ್ನಷ್ಟು ಸಂಕೀರ್ಣ ರೂಪ ಪಡೆಯುವುದು' ಎಂದು ಚೀನ ಎಚ್ಚರಿಸಿದೆ. 

ಪ್ರಧಾನಿ ಮೋದಿ ಅವರು ಇಂದು ಶನಿವಾರ ಅರುಣಾಚಲ ಪ್ರದೇಶದಲ್ಲಿ 4,500 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ನನ್ನ ಸರಕಾರ ಈ ಈಶಾನ್ಯ ಗಡಿ ರಾಜ್ಯದೊಂದಿಗೆ ಸಂಪರ್ಕವನ್ನು ಸುಧಾರಿಸುವುದಕ್ಕೆ ಅತ್ಯಧಿಕ ಮಹತ್ವ ನೀಡುತ್ತಿದೆ ಎಂದು ಮೋದಿ ಹೇಳಿದ್ದಾರೆ. 


Trending videos

Back to Top