ಸ್ತ್ರೀಯರ ಟಾ‹éಕಿಂಗ್ ಆ್ಯಪ್ ಬಗ್ಗೆ ಕಿಡಿ
Team Udayavani, Feb 10, 2019, 12:30 AM IST
ವಾಷಿಂಗ್ಟನ್: ಸೌದಿ ಅರೇಬಿಯಾದಲ್ಲಿ ಮಹಿಳೆಯರನ್ನು ಟ್ರ್ಯಾಕ್ ಮಾಡಲು ಅನುವು ಮಾಡುವ ಅಬ್ಶರ್ ಎಂಬ ಆ್ಯಪ್ಗೆ ಪ್ಲೇಸ್ಟೋರ್ನಲ್ಲಿ ಅವಕಾಶ ನೀಡಿದ್ದಕ್ಕೆ ಆ್ಯಪಲ್ ಹಾಗೂ ಗೂಗಲ್ ಸಂಸ್ಥೆಗಳ ವಿರುದ್ಧ ಮಾನವ ಹಕ್ಕುಗಳ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಬ್ಶರ್ ಅಪ್ಲಿಕೇಶನ್ನಲ್ಲಿ ತನ್ನ ಪತ್ನಿ ಎಲ್ಲಿದ್ದಾರೆ ಎಂಬುದನ್ನು ಪತಿ ತಿಳಿಯಬಹುದು. ಅಷ್ಟೇ ಅಲ್ಲ, ಪತ್ನಿ ಪ್ರಯಾಣ ಮಾಡಲು ಅನುಮತಿಯನ್ನೂ ನೀಡಬಹುದು. ಒಂದು ವೇಳೆ ಗಡಿಯಲ್ಲಿ ಪಾಸ್ಪೋರ್ಟ್ ಬಳಸಿದರೆ ಪತಿಗೆ ಸಂದೇಶ ರವಾನೆಯಾಗುತ್ತದೆ. ಈ ಆ್ಯಪ್ಗೆ ತನ್ನ ಅಪ್ಲಿಕೇಶನ್ ಸ್ಟೋರ್ನಲ್ಲಿ ಗೂಗಲ್, ಆ್ಯಪಲ್ ಅವಕಾಶ ನೀಡಬಾರದು ಎಂದು ಮಾನವ ಹಕ್ಕುಗಳ ರಕ್ಷಣಾ ಸಂಸ್ಥೆ ಆಮ್ನೆಸ್ಟಿ ಇಂಟರ್ನ್ಯಾಷನಲ್ ಆಗ್ರಹಿಸಿದೆ. ಆದರೆ ಈ ಆ್ಯಪ್ ಸೌದಿ ಸರಕಾರ ಅಭಿವೃದ್ಧಿ ಪಡಿಸಿದ್ದು, ಪುರುಷರ ಮೇಲ್ವಿಚಾರಣೆಯಲ್ಲಿ ಪ್ರಯಾಣ ಮಾಡುವುದು ಸೌದಿಯಲ್ಲಿ ಕಡ್ಡಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ