CONNECT WITH US  

ಅಬುಧಾಬಿಯಲ್ಲಿ ಹಿಂದಿಗೆ ಮೂರನೇ ಭಾಷೆ ಸ್ಥಾನಮಾನ

ಸಾಂದರ್ಭಿಕ ಚಿತ್ರ.

ಅಬುಧಾಬಿ: ಅಬುಧಾಬಿಯ ನ್ಯಾಯಾಲಯದಲ್ಲಿ ಮೂರನೇ ಭಾಷೆಯನ್ನಾಗಿ ಹಿಂದಿಯನ್ನು ಸೇರಿಸಲಾಗಿದೆ. ಅರೇಬಿಕ್‌ ಹಾಗೂ ಇಂಗ್ಲಿಷ್‌ ಅನಂತರ ಹಿಂದಿ ಮೂರನೇ ಭಾಷೆಯಾಗಿರಲಿದ್ದು, ನ್ಯಾಯಾಲಯದ ತೀರ್ಪುಗಳು ಹಿಂದಿಯಲ್ಲೂ ಲಭ್ಯವಾಗಲಿವೆ. ಈ ಬಗ್ಗೆ ಅಬುಧಾಬಿ ನ್ಯಾಯಾಂಗ ಇಲಾಖೆ ಆದೇಶ ಹೊರಡಿಸಿದೆ. 

ಇದು ಹಿಂದಿ ಭಾಷಿಕರು ದೇಶದ ಕಾನೂನು, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಇನ್ನಷ್ಟು ಹೆಚ್ಚು ತಿಳಿವಳಿಕೆ ಹೊಂದಲು ನೆರವಾಗಲಿದೆ. ಅಬುಧಾಬಿಯಲ್ಲಿ 90 ಲಕ್ಷ ಜನರಿದ್ದು, ಶೇ. 36ರಷ್ಟು ಜನರು ವಿದೇಶಿಗರಿದ್ದಾರೆ. ಒಟ್ಟು ಜನಸಂಖ್ಯೆಯ ಪೈಕಿ ಶೇ. 30ರಷ್ಟು ಮಂದಿ ಭಾರತೀಯರೇ ಆಗಿದ್ದಾರೆ ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ. 

ಕ್ಲೇಮ್‌ಗಳು, ದೂರು ಮತ್ತು ವಿನಂತಿ ನಮೂನೆಗಳನ್ನು ಹಲವು ಭಾಷೆಗಳನ್ನು ನೀಡುವುದರಿಂದ ಜನರಿಗೆ ನೆರವಾಗಲಿದೆ. ಅಷ್ಟೇ ಅಲ್ಲ, ಕಾನೂನು ಪ್ರಕ್ರಿಯೆ ಇನ್ನಷ್ಟು ಪಾರದರ್ಶಕವಾಗಿರಲಿದೆ. ಆದರೆ ಭಾರತದಲ್ಲೇ ಈವರೆಗೂ ಪ್ರಾಂತೀಯ ಭಾಷೆಗಳಲ್ಲಿ ಕೋರ್ಟ್‌ನ ತೀರ್ಪುಗಳು, ದೂರುಗಳು ಹಾಗೂ ಇತರ ದಾಖಲೆಗಳನ್ನು ಸಲ್ಲಿಸಲು ಮತ್ತು ಪ್ರಾಂತೀಯ ಭಾಷೆಯಲ್ಲೇ ದಾಖಲೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ .
 


Trending videos

Back to Top