ಕೋಮಾದಿಂದ ಎದ್ದಾಗ ಗರ್ಭಿಣಿ!
Team Udayavani, Feb 23, 2019, 12:30 AM IST
ಲಂಡನ್: ಇಂಗ್ಲೆಂಡ್ನಲ್ಲಿ 18 ವರ್ಷದ ಎಬೋನಿ ಸ್ಟೀವನ್ಸನ್ ಎಂಬ ಯುವತಿ ವಿಚಿತ್ರ ಸನ್ನಿವೇಶವೊಂದರಲ್ಲಿ ಸಿಲುಕಿಕೊಂಡಿದ್ದಳು. ಒಂದು ದಿನ ವಿಪರೀತ ತಲೆನೋವು ಬಂದು, ಆಸ್ಪತ್ರೆಗೆ ಸೇರಿಸಿದ್ದಾಗ, ಹಠಾತ್ ಕೋಮಾಗೆ ಹೋಗಿದ್ದಳು. ಪರೀಕ್ಷಿಸಿದಾಗ ಆಕೆ ಗರ್ಭಿಣಿ ಎಂಬುದು ತಿಳಿದುಬಂದಿದೆ. ಭ್ರೂಣ ಅದಾಗಲೇ 3.50 ಕಿಲೋ ಬೆಳೆದಿತ್ತು.
ಆಕೆ ಕೋಮಾದಿಂದ ಎದ್ದ ತಕ್ಷಣ ಸಿಸೇರಿಯನ್ ಮೂಲಕ ಪ್ರಸವವಾಗಬೇಕು ಎಂದು ವೈದ್ಯರು ಹೇಳಿದರೆ, ಆಕೆಗೆ ಅಚ್ಚರಿ. ಯಾಕೆಂದರೆ ಇಷ್ಟೂ ದಿನ ಆಕೆಯ ಋತುಸ್ರಾವ ನಿಂತಿರಲಿಲ್ಲ. ಹೀಗಾಗಿ ಗರ್ಭಿಣಿಯಾಗಿರುವ ಅನು ಮಾನವೂ ಆಕೆಗೆ ಬಂದಿರಲಿಲ್ಲ.ಕಾರಣ ಹುಡುಕಿದ ವೈದ್ಯರಿಗೆ ಇದು ಯೂಟರಸ್ ಡಿಡೆಲ್ಫಿಸ್ ಎಂದು ತಿಳಿಯಿತು. ಇಂತಹ ಸಮಸ್ಯೆಯಿರುವವರಲ್ಲಿ 2 ಗರ್ಭಕೋಶ ಇರುತ್ತದೆ. ಒಂದು ಗರ್ಭಕೋಶದಲ್ಲಿ ಭ್ರೂಣ ಬೆಳೆಯುತ್ತಿದ್ದರೆ ಇನ್ನೊಂದು ಸಾಮಾನ್ಯವಾಗಿ ಕೆಲಸ ಮಾಡುತ್ತಿರುತ್ತದೆ. ಎಬೊನಿಯಲ್ಲಿ ಸಾಮಾನ್ಯ ಗರ್ಭಕೋಶದ ಹಿಂಬದಿ ಮತ್ತೂಂದು ಗರ್ಭಕೋಶ ಇತ್ತು. ಅದರಲ್ಲಿ ಭ್ರೂಣ ಬೆಳೆದಿದೆ. ಸಿಸೇರಿಯನ್ ನಂತರ ಮಗು ಹಾಗೂ ತಾಯಿ ಸುರಕ್ಷಿತವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!