ಉಗ್ರ ಮಸೂದ್ ಅಜರ್ ಕಪ್ಪು ಪಟ್ಟಿಗೆ: ಚರ್ಚೆಗೆ ಸಿದ್ಧ ಎಂದ ಚೀನ
Team Udayavani, Mar 16, 2019, 11:34 AM IST
ಬೀಜಿಂಗ್ : ಪಾಕಿಸ್ಥಾನದ ಜೈಶ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ನಿಷೇಧಿತ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಸಲುವಾಗಿ ಭಾರತ ಸಹಿತ ಎಲ್ಲ ಹಿತಾಸಕ್ತ ರಾಷ್ಟ್ರಗಳೊಂದಿಗೆ ಚರ್ಚಿಸಲು ತಾನು ಸಿದ್ದ ಎಂದು ಚೀನ ಇಂದು ಹೇಳಿದೆ.
ಎರಡು ದಿನಗಳ ಹಿಂದಷ್ಟೇ ಚೀನ, ಜೈಶ್ ಉಗ್ರ ಮಸೂದ್ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ವಿಶ್ವಸಂಸ್ಥೆಯ ಠರಾವನ್ನು ನಿರಂತರ ನಾಲ್ಕನೇ ಬಾರಿಗೆ ತಾಂತ್ರಿಕ ನೆಪದಲ್ಲಿ ವಿಫಲಗೊಳಿಸಿತ್ತು. ಇಂದು ಅದು ಬದಲಾದ ನಿಲುವನ್ನು ಬಾಯಿ ಉಪಚಾರಕ್ಕೆ ಎಂಬಂತೆ ವ್ಯಕ್ತಪಡಿಸಿರುವಂತಿದೆ.
40 ಭಾರತೀಯ ಯೋಧರನ್ನು ಬಲಿ ಪಡೆಯಲಾಗಿದ್ದ ಪುಲ್ವಾಮಾ ಉಗ್ರ ದಾಳಿ ತನ್ನದೇ ಕೃತ್ಯವೆಂದು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೊಣೆ ಹೊತ್ತಿರುವುದರಿಂದ ಮಸೂದ್ ನನ್ನು ಕಪ್ಪುಪಟ್ಟಿಗೆ ಸೇರಿಸುವ ದಿಶೆಯಲ್ಲಿ ತಾನು ಭಾರತ ಸಹಿತ ಇತರ ದೇಶಗಳೊಂದಿಗೆ ಮಾತುಕತೆಗೆ ಸಿದ್ಧ ಎಂದು ಚೀನ ಹೇಳಿರುವಲ್ಲಿ ಅದು ಜಾಗತಿಕ ಒತ್ತಡಕ್ಕೆ ಮಣಿದಿರುವಂತಿದೆ ಎಂದು ತಿಳಿಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ