Stadia : ಬ್ರೌಸರ್ ಆಧಾರಿತ ಗೂಗಲ್ ವಿಡಿಯೋ ಗೇಮ್ ಸ್ಟ್ರೀಮಿಂಗ್
Team Udayavani, Mar 20, 2019, 6:21 AM IST
ಸ್ಯಾನ್ ಫ್ರಾನ್ಸಿಸ್ಕೋ : Alphabet Inc ನ ಗೂಗಲ್ ಸಂಸ್ಥೆ “ಸ್ಟೇಡಿಯ” ಹೆಸರಿನ ಬ್ರೌಸರ್ ಆಧಾರಿತ ವಿಡಿಯೋ ಗೇಮ್ ಸ್ಟ್ರೀಮಿಂಗ್ ಸೇವೆಯನ್ನು ಆರಂಭಿಸಿದೆ.
ಗೂಗಲ್ ಕಂಪೆನಿಯು ತನ್ನ cloud ತಾಂತ್ರಿಕತೆ ಮತ್ತು ಡೇಟಾ ಸೆಂಟರ್ಗಳ ಜಾಗತಿಕ ಜಾಲವನ್ನು ಬಂಡವಾಳವಾಗಿರಿಸಿಕೊಂಡು ಈ ಸೇವೆಯನ್ನು ಆರಂಭಿಸಿದ್ದು ವಿಶ್ಯಾದ್ಯಂತದ ತರುಣ ಸಮುದಾಯವನ್ನು ತನ್ನ ಈ ಸೇವೆಯತ್ತ ಸೆಳೆದುಕೊಳ್ಳುವ ವಿಶಿಷ್ಟ ಯತ್ನ ಮಾಡಿದೆ.
ಗೂಗಲ್ನ ಈ ತಾಂತ್ರಿಕತೆಯಿಂದಾಗಿ ಬಳಕೆದಾರರು ತಮ್ಮ ಇಂಟರ್ನೆಟ್ ಬ್ರೌಸರ್ ಮೂಲಕ ಗೇಮ್ಗಳನ್ನು ಆಡಬಹುದಾಗಿದೆ ಮತ್ತು ಯಾವುದೇ ರೀತಿಯ ಕಂಟೆಂಟ್ ತಮ್ಮ ಉಪಕರಣಕ್ಕೆ ಡೌನ್ಲೋಡ್ ಆಗುವುದನ್ನು ಕಾಯ ಬೇಕಾಗಿರುವುದಿಲ್ಲ. ಹಾಗಾಗಿ ಅವರು ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡುವ ರೀತಿಯಲ್ಲೇ ಈ ಗೇಮ್ಗಳಿಗೆ ಪ್ರವೇಶ ಪಡೆಯಬಹುದಾಗಿರುತ್ತದೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಿನ್ನೆ ಮಂಗಳವಾರ ನಡೆದಿದ್ದ ಗೇಮ್ ಡೆವಲಪರ್ಸ್ ಕಾನ್ಫರೆನ್ಸ್ನಲ್ಲಿ ಪ್ರಧಾನ ಆಶಯ ಭಾಷಣ ಮಾಡಿದ ಗೂಗಲ್ ನ ಸುದ್ದಿ ಸೇವಾ ವಿಭಾಗದ ಉಪಾಧ್ಯಕ್ಷ ಫಿಲ್ ಹ್ಯಾರಿಸನ್ ಅವರು “ಸ್ಟೇಡಿಯ ಬಳಕೆದಾರರಿಗೆ ತತ್ಕ್ಷಣ ಗೇಮ್ ಪ್ಲೇ ಮಾಡುವುದಕ್ಕೆ ಅವಕಾಶ ಕಲ್ಪಿಸುತ್ತದೆ’ ಎಂದು ಹೇಳಿದರು.
ಗೂಗಲ್ ಈ ಸೇವೆಯ ಮೂಲಕ ಈ ವಾರ ವಿಡಿಯೋ ಗೇಮ್ ಉದ್ದಿಮೆಯ ಸುಮಾರು 25,000 ಜನರನ್ನು ಜತೆಯಾಗಿ ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ