CONNECT WITH US  

ಯುವಕರು ದುಶ್ಚಟಗಳಿಂದ ದೂರವಿರಲಿ

ಯಾದಗಿರಿ: ನಗರದ ಚಂದ್ರಶೇಖರ ವಿದ್ಯಾಸಂಸ್ಥೆಯ ನ್ಯೂ ಕನ್ನಡ ಪದವಿ ಪೂರ್ವ ಕಾಲೇಜು ಮತ್ತು ಎನ್ನಸ್ಸೆಸ್‌ ಘಟಕ ವತಿಯಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ ಶಾಸ್ತ್ರಿಯವರ ಜಯಂತಿ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ರಾಘುನಾಥ ಪಾಟೀಲ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರೀಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗಾಂಧೀಜಿ ಆದರ್ಶ ತತ್ವಗಳನ್ನು ನಾವೆಲ್ಲರೂ ಪಾಲಿಸಿ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಇಂದಿನ ಯುವಕರು ದೇಶದ ಆಸ್ತಿ, ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ದೇಶದ ಪ್ರಗತಿಗೆ ತಮ್ಮದೆಯಾದ ಕೊಡುಗೆ ನೀಡಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜಪ್ಪ ಕೋನಿಮನಿ, ವೆಂಕಟರಾವ್‌ ಕುಲ್ಕರ್ಣಿ, ವಿನಸೇಂಟ್‌ ಪಾಲ್‌, ಎಂ. ಎಸ್‌. ಅಂಗಡಿ,  ಶಾಮರಾವ್‌, ಪ್ರಕಾಶರೆಡ್ಡಿ ಪಾಟೀಲ, ಎಸ್‌.ಎಸ್‌.ನಾಯಕ, ಶರಣಗೌಡ ಅಲ್ಲಿಪುರ ಇದ್ದರು.

ಸರ್ವಜ್ಞ ಕಾಲೇಜು: ಸರ್ವಜ್ಞ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ
ಶಾಸ್ತ್ರಿಯವರ ಜಯಂತಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಸರಕಾರಿ ಪದವಿ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕ ದೇವಿಂದ್ರಪ್ಪ ಹಳಿಮನಿ ಮಹಾತ್ಮ ಗಾಂಧೀಜಿ ಮತ್ತು ಲಾಲ ಬಹದ್ದೂರ್‌ ಶಾಸ್ತ್ರೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲ ಗಂಗಾಧರ ಬಡಿಗೇರ, ಕಾಲೇಜಿನ ಸಂಸ್ಥಾಪಕ ಚೆನ್ನಾರೆಡ್ಡಿ ಪಾಟೀಲ, ಗೀತಾ ಚೆನ್ನಾರೆಡ್ಡಿ ಪಾಟೀಲ, ಅಮೀನರೆಡ್ಡಿ, ವಿವೇಕನಂದ ಸ್ವಾಮಿ, ಗುರುರಾಜ ಕುಲ್ಕರ್ಣಿ, ರಾಜಶೇಖರ ದೇಸಾಯಿಮಠ, ಸಿದ್ರಾಮಪ್ಪ, ಹರ್ಷ ಪಾಟೀಲ್‌, ಜೋಹರಾ ಯಾಸ್ಮಿನ್‌ ಇದ್ದರು.

Trending videos

Back to Top