CONNECT WITH US  

ಸುಳ್ಳು ಹತ್ತಿಕ್ಕಿ ಸತ್ಯಸಂಗತಿ ಬೆಂಬಲಿಸಿ

ಸುರಪುರ: ಮಾಧ್ಯಮಗಳು ಬಂಡವಾಳ ಶಾಹಿಗಳ ಕಪಿಮುಷ್ಟಿಲ್ಲಿವೆ. ಹೀಗಾಗಿ ವಾಸ್ತವಿಕ ವರದಿ ಪ್ರಕಟವಾಗುತ್ತಿಲ್ಲ. ಕಾರಣ ಸುಳ್ಳ ಸುದ್ದಿಗಳನ್ನು ಹತ್ತಿಕ್ಕಿ ವಾಸ್ತವ ಸಂಗತಿಗಳ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬಂಡಾಯ ಸಾಹಿತಿ ಬಂಜಗೆರೆ ಜಯಪ್ರಕಾಶ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಬಹುತ್ವ ಭೂಮಿಕೆ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಸಾಂಸ್ಕೃತಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯುನ್ಮಾನ ಮಾಧ್ಯಮ ತೀರಾ ಹಗ್ಗದ ಪ್ರಚಾರಕ್ಕೆ ಒತ್ತು ನೀಡುತ್ತಿವೆ. ಬೆಳಂಬೆಳಗ್ಗೆ ಪಂಚಾಗ, ಭವಿಷ್ಯ, ವಾಸ್ತು, ಹೋಮ ವಾಮಾಚಾರದಂತ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ. ಕಾರಣ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುವುದು ಆರೋಗ್ಯಕರ ಎಂದರು.

ಈಚೆಗೆ ಕೆಲವರು ಗೋವು ರಕ್ಷಣೆ ನೆಪದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ. ಈ ದೇಶದಲ್ಲಿ ಬಹು ಜಾತಿ ಮತ್ತು ಬಹುಸಂಸ್ಕೃತಿ ಇದೆ ಅನ್ನುವುದು ಅವರಿಗೆ ಅರಿವಿಲ್ಲ. ಗೋವನ್ನು ದೇವರು ಎಂದು ನೋಡುವುದಾರೇ ಮರ ಗಿಡಗಳನ್ನು ಕಡಿಯುವುದು ಸಸ್ಯಗಳನ್ನು ಹಾಳು ಮಾಡಿ ಔಷಧಿಗೆ ಬಳಸುವುದು ಹಿಂಸೆ ಅಲ್ಲವೆ. ಗೋವು ರಕ್ಷಣೆ ನೆಪದಲ್ಲಿ ದಲಿತ ಹಿಂದುಳಿದ ಅಲ್ಪ ಸಂಖ್ಯಾತರ ಆಹಾರ
ಸಂಸ್ಕೃತಿಗೆ ಕಡಿವಾಣ ಹಾಕಲು ಯತ್ನಿಸಿದರೆ ಸಹಿಸುವುದಿಲ್ಲ. ನಿಮ್ಮ ಹಟ್ಟ ಹಾಸ ನೋಡಿ ತೆಪ್ಪಗಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಗೋವು ಮಾಂಸ ಭಕ್ಷಣೆ ಇಂದು ನಿನ್ನೆಯದಲ್ಲ. ಆದಿಕಾಲದಿಂದ ಆಹಾರವಾಗಿ ಬಳಸಲಾಗಿದೆ. 11ನೇ ಶತಮಾನದ ಮೊದಲು ಪುರೋಹಿತ ವರ್ಗ ಯಜ್ಞ ಯಾಗಗಲ್ಲಿ ಧನಗಳನ್ನು ಅರ್ಪಿಸಿ ಮಾಂಸ ತಿನ್ನುತ್ತಿದ್ದರು. ಈ ಬಗ್ಗೆ ದಾಖಲೆ ಸಿಗುತ್ತವೆ. ಹೀಗಾಗಿ ಪುರೋಹಿತರೆ ನಿಜವಾದ ಮಾಂಸಹಾರಿಗಳು ಮತ್ತು ದಲಿತರಾಗಿದ್ದರು ಎಂದು ಪ್ರತಿಪಾದಿಸಿದರು. ವೇದಿಕೆ ತಾಲೂಕು ಅಧ್ಯಕ್ಷ ಶಿವುಕುಮಾರ ಅಮ್ಮಾಪುರ, ಗೌರವಾಧ್ಯಕ್ಷ ಕೈದಾಳು ಕೃಷ್ಣಮೂರ್ತಿ, ಸಂಚಾಲಕ ಬಲಭೀಮ ದೇಸಾಯಿ ವೇದಿಕೆಯಲ್ಲಿದ್ದರು.

Trending videos

Back to Top