CONNECT WITH US  

ಶಹಾಪುರ: ಡಿಸೇಲ್‌ ಟ್ಯಾಂಕರ್‌ ಪಲ್ಟಿ

ಶಹಾಪುರ: ಚಾಲಕನ ನಿಯಂತ್ರಣ ತಪ್ಪಿ ಡಿಸೇಲ್‌ ಟ್ಯಾಂಕ್‌ ವಾಹನವೊಂದು ರಸ್ತೆ ಮೇಲೆ ಪಲ್ಟಿಯಾದ ಘಟನೆ ತಾಲೂಕಿನ ಹುಲಕಲ್‌ ಗ್ರಾಮ ಸಮೀಪ ಹೆದ್ದಾರಿ ಮೇಲೆ ಶುಕ್ರವಾರ ಸಂಜೆ ನಡೆದಿದೆ.

ರಾಯಚೂರಿನಿಂದ ಕಲಬುರಗಿಗೆ ಹೊರಟಿದ್ದ ಡಿಸೇಲ್‌ ಟ್ಯಾಂಕ್‌ ಹುಲಕಲ್‌ ಗ್ರಾಮದ ಹತ್ತಿರ ಹೆದ್ದಾರಿ ಪಕ್ಕಕ್ಕೆ ಉರುಳಿದೆ. ಡಿಸೇಲ್‌ ಟ್ಯಾಂಕ್‌ ಬೀಳೂತ್ತಿದ್ದಂತೆ ಸೋರಿಕೆ ಆಗುತ್ತಿರುವ ಡಿಸೇಲ್‌ ತುಂಬಿಸಿಕೊಳ್ಳಲು ಜನ ಮುಗಿ ಬಿದ್ದಿದ್ದಾರೆ. ಅಪಾರ ಪ್ರಮಾಣದ ಡಿಸೇಲ್‌ ಸೋರಿಕೆಯಾಗಿದ್ದು, ಜನ ಪ್ರಾಣ ಅಪಾಯ ಅರಿಯದೆ ಡಿಸೇಲ್‌ ತುಂಬಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ವಿಷಯ ತಿಳಿದ ಬೀ. ಗುಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿದ್ದಾರೆ. ಅಲ್ಲದೆ ತಕ್ಷಣ ಅಗ್ನಿಶಾಮಕ ದಳದವರಿಗೆ ಕರೆಯಿಸಿ, ರಸ್ತೆ ಮೇಲೆ ಸುರಿದ ಡಿಸೇಲ್‌ ಮೇಲೆ ನೀರುಣಿಸಿದ್ದಾರೆ. ನಂತರ ಮಣ್ಣು ಸುರಿಸುವ ಮೂಲಕ ಅಪಾಯದ ಮಟ್ಟವನ್ನು ನಿಯಂತ್ರಿಸುವಲ್ಲಿ ಜಾಣ್ಮೆ ಕ್ರಮ ಕೈಗೊಂಡಿದ್ದಾರೆ.

ಗುರುವಾರ ತಾಲೂಕಿನ ದೋರನಹಳ್ಳಿ ಗ್ರಾಮದ ಹತ್ತಿರ ರಸ್ತೆಗೆ ಉರುಳಿದ್ದ ಕಬ್ಬಿನ ಲಾರಿಯಿಂದ ಇಡಿ ಕಬ್ಬುಗಳನ್ನು ಜನ ಬಂಡಿ, ಬೈಕ್‌ ಮೇಲೆ ಹೊತ್ತೂಯ್ದಿದ್ದರು. ಇಂದು ಡಿಸೇಲ್‌ ಕದ್ದು ಒಯ್ಯುತ್ತಿರುವುದು ವಿಷಾಧದ ಸಂಗತಿ. ಇಂತಹ ಸಮಯದಲ್ಲಿ ಸ್ವಲ್ಪ ಬೆಂಕಿ ಕಿಡಿ ಹೊತ್ತಿ ಉರಿದಿದ್ದರೆ, ಡಿಸೇಲ್‌ಗಾಗಿ ಬಡಿದಾಡುತ್ತಿದ್ದವರ ಹೆಣವು ಗುರುತಿಸಲು
ಆಗದಂತ ದುರಂತ ಸಂಭವಿಸುವ ಸಾಧ್ಯತೆ ಉಂಟು. ಆದರೆ ಅಂತಹ ಘಟನೆ ನಡೆಯದಿರುವುದು ಸಮಾಧಾನ ತಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದೇವು. ಡಿಸೇಲ್‌ ಸೋರಿಕೆ ಸ್ಥಿತಿ ನೋಡಿ. ಮೊದಲು ಜನರನ್ನು ಚದುರಿಸಿ,
ಮಣ್ಣು ಎರಚಿದೇವು. ಅಗ್ನಿಶಾಮಕ ದಳದವರನ್ನು ಕರಿಸಿ, ನೀರುಣಿಸುವ ಮೂಲಕ ಅಪಾಯದ ಮುನ್ಸೂಚನೆ
ತಡೆಯಲು ಪ್ರಯತ್ನಿಸಿದೇವು. ವಾಹನದ ಚಾಲಕ, ಕ್ಲೀನರ್‌ಗೆ ಯಾವುದೇ ಗಾಯಗಳಾಗಿಲ್ಲ.
 ಹಣಮಂತ್ರಾಯ,  ಎಎಸ್‌ಐ 

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top