ಮನೆಗೆ ನಳ ಸಂಪರ್ಕ ಪಡೆಯಿರಿ

Team Udayavani, Dec 29, 2017, 3:31 PM IST

yad-1.jpg

ಯಾದಗಿರಿ: ನಗರಸಭೆ ಮೂಲಕ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಅದರಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆ ಸಹ ಒಂದಾಗಿದೆ. ಈ ಯೋಜನೆಗೆ ಸುಮಾರು 50 ಕೋಟಿ ರೂ. ವ್ಯಯಿಸಲಾಗಿದೆ. ಆದ್ದರಿಂದ ಪ್ರತಿಯೊಂದು ಮನೆಗೆ ನಳ ಸಂಪರ್ಕ ಪಡೆಯಬೇಕು ಎಂದು ನಗರಸಭೆ ಪೌರಾಯುಕ್ತ
ಸಂಗಪ್ಪ ಉಪಾಸೆ ಹೇಳಿದರು.

ನಗರದ ವಾರ್ಡ್‌ ನಂ. 14ರ ಅಸರ್‌ ಮೋಹಲ್ಲಾದ ಮಿಲನ್‌ ಫಂಕ್ಷನ್‌ ಹಾಲ್‌ನಲ್ಲಿ ಕರ್ನಾಟಕ ನಗರ ಮೂಲಸೌಕರ್ಯ
ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ, ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕೆ ಕಾರ್ಯಕ್ರಮ, ಯಾದಗಿರಿ ನಗರಸಭೆ ಹಾಗೂ ಕಲಬುರಗಿ ಗ್ರಾಮೀಣ ಮಹಿಳಾ ಅಭಿವೃದ್ಧಿ ಶಿಕ್ಷಣ ಸಂಸ್ಥೆ (ಗ್ರಾಮ್ಸ್‌), ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಮನೆ ನಳ ಸಂಪರ್ಕಗಳ ಪ್ರೇರಣೆ ಮಾಹಿತಿ, ಸಂವಹನ ಹಾಗೂ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೀರು ಸರಬರಾಜು ಹಾಗೂ ನೀರಿನ ದರದ ಕುರಿತು ಸಮುದಾಯಾದವರಿಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ
ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ನಗರಸಭೆ ಕಾರ್ಯಗಳು ನಮ್ಮ ಮನೆ ಕಾರ್ಯದಂತೆ
ಪ್ರೀತಿಯಿಂದ ಕಾಳಜಿ ಮಾಡಿದಾಗ ಮಾತ್ರ ನಗರ ಅಭಿವೃದ್ಧಿಯಾಗುತ್ತದೆ. ಅದರ ಜತೆಗೆ ನಗರಕ್ಕೂ ಕೂಡ
ಒಳ್ಳೆ ಹೆಸರು ಬರುತ್ತದೆ. ಇನ್ನೂ 6 ತಿಂಗಳಲ್ಲಿ ನಳ ಸಂಪರ್ಕ ಹೊಂದಿದ ಮನೆಗಳಿಗೆ ಶುದ್ಧವಾದ ಕುಡಿಯುವ ನೀರು
ಸರಬರಾಜು ಆಗುತ್ತದೆ ಎಂದು ಹೇಳಿದರು.

ಕೆಯುಐಡಿಎಫ್‌ಸಿ ಯೋಜನಾಧಿಕಾರಿ ಮಹೇಶಕುಮಾರ ಮಾತನಾಡಿ, ಕೆಯುಐಡಿಎಫ್‌ಸಿ- ಎನ್‌ಕೆಯುಎಸ್‌ಐಪಿ
ಯೋಜನೆ ಯಾದಗಿರಿ ನಗರಕ್ಕೆ ಬಂದಿರುವುದು ಸಂತೋಷದ ವಿಷಯ. ಕರ್ನಾಟಕದ 20,460 ಗ್ರಾಮಗಳಿಗೆ ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆಯಾಗುತ್ತಿದೆ. ಇದರಿಂದ ಹಲವಾರು ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಯಾದಗಿರಿ ನಗರದ ಪ್ರತಿಯೊಂದು ಕುಟುಂಬದವರು ಮನೆಗಳಿಗೆ ನಳ ಸಂಪರ್ಕ ಪಡೆದು ಅದಕ್ಕೆ ತಗಲುವ ಕರವನ್ನು ನಗರಸಭೆಗೆ ನೀಡಬೇಕು ಮತ್ತು ಮನೆ ನಳ ಸಂಪರ್ಕ ಪಡೆಯಲು ಕೆಯುಐಡಿ ಎಫ್‌ಸಿ-ಎನ್‌ಕೆಯುಎಸ್‌ಐಪಿ
ಕ್ಷೇತ್ರ ಮಟ್ಟದ ಸಿಬ್ಬಂದಿಗಳು ನಿಮ್ಮ ಮನೆಗೆ ಬಂದು ಅರ್ಜಿ ತುಂಬುವ ವಿಧಾನದ ಮಾಹಿತಿ ಸಹ ನೀಡುತ್ತಾರೆ ಎಂದು
ಹೇಳಿದರು.

ಯೋಜನಾ ಸಂಯೋಜಕರಾದ ದೇವೆಂದ್ರಪ್ಪ ಚಿಂತಕುಂಟಾ ಮಾತನಾಡಿ, ಯೋಜನೆ ಕುರಿತು ಸಮಗ್ರವಾದ ಮಾಹಿತಿ
ನೀಡುವುದರ ಜತೆಗೆ ಯೋಜನೆಗೆ ಸಂಬಂಧಿ ಸಿದ ಕೆಲವು ಕಿರು ಚಿತ್ರ ಸಹ ಪ್ರದರ್ಶಿಸಿದರು.

ನಗರಸಭೆ ಸದಸ್ಯರಾದ ತಸ್ಲಿಮ್‌ ಬಾನು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರ್ಯಪಾಲಕ ಅಭಿಯಂತರ
ಅಶೋಕ ಚಟ್ಟರ್ಕಿ, ಸಮುದಾಯ ಸಂಘಟನಾಧಿಕಾರಿ ಬಸಪ್ಪ ತಳವಡಿ, ವಕೀಲರಾದ ಶಫಿ ಅಹ್ಮದ್‌, ಎಂ.ಡಿ.ಇಸ್ಮಾಯಿಲ್‌, ಮಹಿಳಾ ಸಂಘದ ಮುಖಂಡರಾದ ಸಂಗೀತಾ ಇದ್ದರು. ಸಾಬಮ್ಮ ಪ್ರಾರ್ಥಿಸಿದರು. ದೇವಮ್ಮ ಅಬ್ಬೇತುಮಕೂರು ನಿರೂಪಿಸಿದರು. ಸಮುದಾಯ ಸಂಘಟಿಕರಾದ ಅವ್ವಮ್ಮ ವಂದಿಸಿದರು.

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ

Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Attempt to stop Vande Bharat train: Ka.ra.ve activists arrested

Yadagiri; ವಂದೇ ಭಾರತ್ ರೈಲು ತಡೆಯಲು ಯತ್ನ: ಕರವೇ ಕಾರ್ಯಕರ್ತರ ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.