CONNECT WITH US  

ಪುರಾಣದಿಂದ ಆಧ್ಯಾತ್ಮಿಕ ಒಲವು

ಶಹಾಪುರ: ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಮನುಷ್ಯನ ಮಾನಸಿಕ ಸ್ಥಿತಿ ಸಮತೋಲನೆಕ್ಕೆ ಬರುವದಲ್ಲದೆ,
ಆಧ್ಯಾತ್ಮಕತೆ ಒಲವು ಮೂಡಲಿದೆ ಎಂದು ದೋರನಹಳ್ಳಿ ಹಿರೇಮಠದ ವೀರಮಹಾಂತ ಶಿವಾಚಾರ್ಯರು ಹೇಳಿದರು. ತಾಲೂಕಿನ ದೋರನಹಳ್ಳಿ ಗ್ರಾಮದ ಬೆಟ್ಟದ ಮಹಾಂತೇಶ್ವರ ಜಾತ್ರಾ ನಿಮಿತ್ತವಾಗಿ ಗುಡ್ಡಾಪುರದ ಶಿವಶರಣೆ ಶ್ರೀದಾನಮ್ಮದೇವಿ ಪುರಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿವಶರಣರ ಅನುಭವಾಮೃತ ಆಲಿಸುವುದರಿಂದ ಮಾನಸಿಕ ನೆಮ್ಮದಿ ಮೂಡುವುದಲ್ಲದೆ ಮನುಷ್ಯ ಸ್ಥಿತಪ್ರಜ್ಞೆನಾಗುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ಪುರಾಣ ಮತ್ತು ಪ್ರವಚನ ಆಲಿಸಬೇಕು. ಪ್ರವಚನ ಕೇಳುವುದರಿಂದ ಆತ್ಮವಲೋಕನ, ಚಿಂತನೆ ಕಾರ್ಯಕ್ಕೆ ಜ್ಞಾನ ಸಮಯ ನೀಡಲಿದೆ. ಹೀಗಾಗಿ ನಾಗರಿಕರು ಪ್ರವಚನ ಆಲಿಸಲು ತಮ್ಮ ಜತೆ ಕುಟುಂಬ ಸಮೇತರಾಗಿಸಬೇಕು ಎಂದರು. 

ಹಿತ್ತಲ ಶಿರೂರು ಶರಣುಕುಮಾರ ಶಾಸ್ತ್ರಿ ಜ. 30ರಿಂದ ಫೆ. 12ರವರೆಗೆ ಪ್ರವಚನ ನಡೆಯಲಿದೆ. ಸರ್ವರೂ ಭಾಗವಹಿಸಬೇಕು ಎಂದರು. ಅಲ್ಲದೆ ಫೆ. 8ರಂದು ಜಂಗಮ ವಟುಗಳಿಗೆ ಅಯ್ನಾಚಾರ ಮತ್ತು ಶಿವದೀಕ್ಷೆ ಕಾರ್ಯಕ್ರಮ, ಫೆ. 9ರಂದು ಮುತ್ತೆ$çದೆಯರಿಗೆ ಶ್ರೀಮಠದಿಂದ ಉಡಿ ತುಂಬುವ ಕಾರ್ಯ, ಫೆ. 8ರಂದು ಗದಗ ಜಾನಪದ ಖ್ಯಾತ ಕಲಾವಿದರಿಂದ ವಿಶೇಷ ಕಲಾ ಪ್ರದರ್ಶನ ನಡೆಯಲಿದೆ.

ಫೆ. 13ರಂದು ಶ್ರೀಮಠದಿಂದ ಪ್ರತಿವರ್ಷದಂತೆ ಸಾಮೂಹಿಕ ಮದುವೆ ನಡೆಯಲಿವೆ. ಫೆ. 14ರಂದು ಇಡಿ ರಾತ್ರಿ ಪಲ್ಲಕ್ಕಿ ಸೇವೆ ನಡೆದು ಮರುದಿನ ಫೆ. 15ರಂದು ಬೆಟ್ಟದ ಮಹಾಂತೇಶ್ವರ ಭವ್ಯ ರಥೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ. 

ವೇದಿಕೆಯಲ್ಲಿ ತಾಲೂಕಿನ ಸಗರ ಗ್ರಾಮದ ಒಕ್ಕಲಗೇರ ಹಿರೇಮಠದ ಮರಳಮಹಾಂತ ಶಿವಾಚಾರ್ಯರು, ನಾಗಠಾಣ ಮಠದ ಸೋಮೇಶ್ವರ ಶಿವಾಚಾರ್ಯರು, ದೋರನಹಳ್ಳಿ ಚಿಕ್ಕಮಠದ ಶಿವಲಿಂಗರಾಜದೇಶಿಕೇಂದ್ರ ಶಿವಾಚಾರ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀಮಠದ ವೀರಮಹಾಂತ ಶಿವಾಚಾರ್ಯರು ವಹಿಸಿದ್ದರು. ಗ್ರಾಮದ ಅನೇಕ ಗಣ್ಯರು ಮಹಿಳೆಯರು ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


Trending videos

Back to Top