CONNECT WITH US  

ವರಿಷ್ಠರು ಒಪ್ಪಿದರೆ ಬಾದಾಮಿಯಲ್ಲಿ ಪ್ರಚಾರ

ಕಕ್ಕೇರಾ: ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸಂಪೂರ್ಣ ಹಿನ್ನೆಡೆಯಾಗಲಿದೆ. ಒಂದು ವೇಳೆ ಬಿಜೆಪಿ ವರಿಷ್ಠರು ಅನುಮತಿ ನೀಡಿದರೆ ಬಾದಾಮಿಗೆ ಹೋಗಿ ಪ್ರಚಾರ ಮಾಡಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ರಾಜುಗೌಡ ಹೇಳಿದರು.

ಪಟ್ಟಣದ ಪುರಸಭೆ ವ್ಯಾಪ್ತಿಯ ನಿಂಗಾಪುರ ಗ್ರಾಮದಲ್ಲಿ ಮತಯಾಚನೆ ವೇಳೆ ಕಾಂಗ್ರೆಸ್‌ ಕೆಲ ಕಾರ್ಯಕರ್ತರನ್ನು
ಭಾರತೀಯ ಜನತಾ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಮುಕ್ತ
ಕರ್ನಾಟಕ ನಿರ್ಮಾಣವಾಗಲಿದೆ. ಕಾಂಗ್ರೆಸ್‌ನವರು ಐದು ವರ್ಷಗಳಲ್ಲಿ ಬರೀ ಸುಳ್ಳು ಆಶ್ವಾಸನೆಗಳನ್ನೇ ನೀಡುತ್ತಾ
ಬರುತ್ತಿದ್ದಾರೆ ಎಂದು ಹರಿಹಾಯ್ದರು. 

ಈ ಹಿಂದೇ ಅಧಿಕಾರದಲ್ಲಿದ್ದಾಗ ತಾಲೂಕಿನ ಪ್ರತಿಯೊಂದು ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ
ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜನರ ಸೇವೆಗೆ ಸದಾ ಸಿದ್ದ ಎಂದರು.
 
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಬಸವರಾಜ ಸ್ಥಾವರಮಠ, ಕಲೀಲ ಅಹ್ಮದ್‌ ದಖನಿ, ರಾಮಯ್ಯ ಶೆಟ್ಟಿ, ನಿಂಗಣ್ಣ ಚಿಂಚೋಡಿ, ದ್ಯಾವಣ್ಣ ಮಲಗಲದಿನ್ನಿ, ಅಮರಣ್ಣ ಹುಡೇದ್‌, ಮಲ್ಲೇಶ ಪಾಟೀಲ್‌, ಪರಮಣ್ಣ ಪೂಜಾರಿ, ದಶರಥ ಆರೇಶಂಕರ, ಸೋಮಣ್ಣನಾಯಕ ಹವಾಲ್ದಾರ್‌, ಭೀಮಣ್ಣಗೌಡ ಹಳ್ಳಿ, ಅಯ್ಯಣ್ಣ ಚಿಂಚೋಡಿ, ಭೀಮನಗೌಡ ಬೈಲಾಪುರ, ಚಿದಾನಂದ ಕಮತಗಿ, ತಿರುಪತಿ ಪವಾರ್‌, ಶಾಂತಪ್ಪ ತಾಳಿಕೋಟಿ ಇದ್ದರು.

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top