CONNECT WITH US  

ಗೋ ಉತ್ಪನ್ನಗಳ ಅರಿವು ಮುಖ್ಯ

ಯಾದಗಿರಿ: ಸ್ಪರ್ಧಾತ್ಮಕ ಯುಗದಲ್ಲಿ ನಾವು ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರೂ ನಮ್ಮ ಆರೋಗ್ಯ ಹಾಗೂ ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಾಗಿ ರೈತರು ಗೋ ಉತ್ಪನ್ನಗಳ ಕುರಿತು ಅರಿತುಕೊಳ್ಳುವುದು ಮುಖ್ಯವಾಗಿದೆ ಎಂದು ಕಲಬುರಗಿ ವಿಕಾಸ ಅಕಾಡೆಮಿ ಕೃಷಿ ವಿಭಾಗದ ಮುಖ್ಯಸ್ಥ ಶಾಂತರೆಡ್ಡಿ ವನಕೇರಿ ಹೇಳಿದರು.

ನಗರದ ಹೊರವಲಯದಲ್ಲಿರುವ ಬಯಲು ಆಂಜನೇಯ ದೇವಸ್ಥಾನ ಗೋಶಾಲೆಯಲ್ಲಿ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ರೈತರಿಗೆ ಗೋ ಉತ್ಪನ್ನಗಳ ತಯಾರಿಕಾ ಶಿಬಿರದಲ್ಲಿ ಅವರು ಮಾತನಾಡಿದರು. ಗೋವು ರೈತನ ಒಂದು ಭಾಗವಾಗಿದೆ. ಅದರಿಂದ ಸಿಗುವ ಉಪಯೋಗಗಳ ಮಾಹಿತಿ ಕೊರತೆ ಕಾಣುತ್ತೇವೆ. ಕಡಿಮೆ ವೆಚ್ಚದಲ್ಲಿ ರೈತ ತನ್ನ ಕುಟುಂಬಕ್ಕೆ ಬೇಕಾಗುವ ವಸ್ತುಗಳನ್ನು
ಹಾಗೂ ಕೃಷಿಗೆ ಬೇಕಾಗುವ ಔಷಧಿಗಳನ್ನು ಸ್ವತಃ ತಯಾರಿಸಿ ಬಳಕೆ ಮಾಡಿದಲ್ಲಿ ಅದು ಇತರರಿಗೆ ಮಾದರಿಯಾಗುತ್ತದೆ ಎಂದು ಹೇಳಿದರು.

ಅಕಾಡೆಮಿ ಪ್ರಮುಖರಾದ ಮಾರ್ಥಂಡ ಶಾಸ್ತ್ರಿ ಮಾತನಾಡಿ, ದೇಶದಲ್ಲಿ ಕೃಷಿಯಲ್ಲಿ ಅತಿಯಾದ ರಸಗೊಬ್ಬರ, ಔಷಧ ಗಳ
ಬಳಕೆಯಿಂದ ವಾತಾವರಣ ಕಲುಷಿತಗೊಂಡು ನಾವು ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ರೈತರು ಶಿಬಿರದಲ್ಲಿ ಶ್ರದ್ಧೆಯಿಂದ ಉತ್ಪನ್ನಗಳ ತಯಾರಿಕೆ ಕುರಿತು ಕೃಷಿ ತಜ್ಞರ ಪಾಠ ಆಲಿಸುವ ಜತೆಗೆ ಮುಂದೆ ತಾವೇ ರೈತರ ಗುಂಪು ರಚಿಸಿಕೊಂಡು ಉತ್ಪನ್ನಗಳನ್ನು ತಯಾರಿಸಿ ಸದೃಢ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.

ಅಕಾಡೆಮಿ ವತಿಯಿಂದ ರೈತರಿಗೆ ಅನುಕೂಲಕರವಾಗುವ ಹಲವಾರು ಶಿಬಿರಗಳನ್ನು ಈಗಾಗಲೇ ನಡೆಸಲಾಗಿದೆ.
ಅಲ್ಲದೇ ಪ್ರವಾಸಕ್ಕೆ ಕೂಡ ಕರೆದುಕೊಂಡು ಹೋಗಿ ಕೃಷಿ ಹಾಗೂ ತೋಟಗಾರಿಕೆ ಪ್ರಗತಿಪರ ರೈತರ ಜಮೀನಿನಲ್ಲಿ ಅವರಿಗೆ ಅಭಿವೃದ್ಧಿಗೆ ಪೂರಕವಾಗುವ ಮಾಹಿತಿ ನೀಡಲಾಗಿದೆ ಎಂದು ಹೇಳಿದರು. 

ಶಿಬಿರದಲ್ಲಿ ಕೃಷಿ ತಜ್ಞ ಮಹಾರಾಷ್ಟ್ರದ ನಾಂದೇಡದ ವಿಷ್ಣು ಬೋಸ್ಲೆ ಮಾತನಾಡಿ, ಮೊದಲು ರೈತರಿಗೆ ತಮ್ಮ ಸುತ್ತಮುತ್ತ
ಇರುವ ವನಸ್ಪತಿಗಳ ಪರಿಚಯ ಹಾಗೂ ಅದರ ಲಾಭಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ರೈತರಿಗೆ ಶೂನ್ಯ ಬಂಡವಾಳದಲ್ಲಿ ದಿನ ಬಳಕೆ ವಸ್ತುಗಳಾದ ಸಾಬೂನು, ಪೇಸ್ಟ್‌, ಸೌಂದರ್ಯ ವರ್ಧಕ ಪುಡಿ, ಶಾಂಪು,
ಅಗರಬತ್ತಿ, ದೇಹಕ್ಕೆ ಬಳಸುವ ಮಸಾಜ್‌ ಎಣ್ಣೆ, ಕೊಬ್ಬರಿ ಎಣ್ಣೆ, ಗಾಯದ ಔಷಧ , ಕಣ್ಣು, ಕಿವಿ, ಮೂಗಿನ ಔಷ ಧಿಗಳನ್ನು ಪ್ರಾತ್ಯಕ್ಷಿಕೆ ತಯಾರಿಸಿ ವಿವರಿಸಿದರು.
 
ಅಕಾಡೆಮಿ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ, ಸಿದ್ದಣ್ಣಗೌಡ ಕಾಡಂನೋರ, ಭದ್ರಿನಾರಾಯಣ ಭಟ್ಟಡ,
ಸೋಮಶೇಖರ ಮಣ್ಣೂರ, ಬುಗ್ಗಯ್ಯ ಕಲಾಲ, ಶರಣಪ್ಪಗೌಡ ರಾಮಸಮುದ್ರ, ಆರ್‌. ವಿಶ್ವನಾಥರೆಡ್ಡಿ ಅಬ್ಬೆತುಮಕೂರು,
ನೀಲಕಂಠರಾಯ ಯಲೆರಿ, ಮಾಣಿಕರಡ್ಡಿ ಕುರಕುಂದಿ, ಲಕ್ಷ್ಮಣ ಠಾಣಗುಂದಿ, ಸೋಮನಾಥರೆಡ್ಡಿ ಯಲೆರಿ, ಮಲ್ಲು
ಶಿವಪುರ, ತಿಪ್ಪಾರೆಡ್ಡಿ ಮಾಧ್ವಾರ, ಸಂಜಯ ಮುಂಡರಗಿ ಭಾಗಿಯಾಗಿದ್ದರು.  

Trending videos

Back to Top