ಅಟಲ್‌ ಮಾತುಗಳೇ ಸಂಘಟನೆಗೆ ಟಾನಿಕ್‌


Team Udayavani, Aug 17, 2018, 10:43 AM IST

yad-1.jpg

ಸುರಪುರ: ಮಾಜಿ ಪ್ರಧಾನಿ, ದಿವಂಗತ ಅಟಲ ಬಿಹಾರಿ ವಾಜಪೇಯಿ ಅತ್ಯಂತ ಭಾವುಕ ಜೀವಿ. ಆಶು ಕವಿ. ಅನೇಕ ಕವನ ರಚಿಸಿದ್ದಾರೆ. ಅವರ ಕವಿತೆಗಳನ್ನು ಲತಾ ಮಂಗೇಶ್ಕರ್‌ ಹಾಡಿದ್ದಾರೆ ಎಂದು ನಗರದ ಖ್ಯಾತ ಗಾಯಕ ಶ್ರೀಹರಿರಾವ ಆದವಾನಿ ಸ್ಮರಿಸಿದ್ದಾರೆ. ವಾಜಪೇಯಿ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಶ್ರೇಷ್ಠ ಸಂಸದೀಯ ಪಟುವಾಗಿದ್ದರು.

ನಿರರ್ಗಳ ಮಾತನಾಡುತ್ತಿದ್ದರು. ಅವರ ಮಾತು ಕೇಳುವುದೇ ಒಂದು ಆನಂದ. ವಾಜಪೇಯಿ ಅವರೊಡನೆ ಎರಡು ಬಾರಿ
ಭೇಟಿಯಾಗುವ ಅವಕಾಶ ದೊರೆತದ್ದು ಮರೆಯುವಂತಿಲ್ಲ. ಆ ಕ್ಷಣಗಳನ್ನು ನನ್ನ ಜೀವನದಲ್ಲಿ ಸುವರ್ಣಾಕ್ಷರಗಳಿಂದ ಬರೆದು
ಇಡುವಂತಹವು ಎಂದು ಸ್ಮರಿಸಿದ್ದಾರೆ.  1991ರಲ್ಲಿ ವಿಜಯಪುರಕ್ಕೆ ವಾಜಪೇಯಿ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ಸುರಪುರದಿಂದ ಕೆಲ ಹಿರಿಯರೊಂದಿಗೆ ನಾನೂ ಪ್ರಚಾರ ಸಭೆಗೆ ಹೋಗಿದ್ದೆ. ಸಭೆಗೆ ಮುನ್ನಾ ನನಗೆ ಹಾಡು ಹಾಡುವ ಅವಕಾಶ ದೊರಕಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಹೇ ಜನ್ಮ ಭೂಮಿ ಭಾರತ ಎಂಬ ಹಿಂದಿ ಹಾಡು ಹಾಡಿದ್ದೆ. ವಾಜಪೇಯಿ ನನ್ನನ್ನು ಹತ್ತಿರ ಕರೆದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಅದು ನನಗೆ ದೊರೆತ ದೊಡ್ಡ ಬಹುಮಾನ ಎಂದು ಸ್ಮರಿಸಿದ್ದಾರೆ.

1993ರಲ್ಲಿ ಇಲ್ಲಿನ ಪ್ರಭು ಕಾಲೇಜಿನಲ್ಲಿ ವಾಜಪೇಯಿ ಭಾಷಣ ಕೇಳಲು ಜನರು ನೆರೆದಿದ್ದರು. ಆಗಲೂ ನನಗೆ ಹಾಡು ಹಾಡಲು ಅವಕಾಶ ದೊರೆಯಿತು. ವಾಜಪೇಯಿ ನೀನು ವಿಜಯಪುರದಲ್ಲಿ ಹಾಡಿದ್ದೆ ಎಂದು ಹೇಳಿದ್ದು ಅವರ ಅದ್ಭುತ ಜ್ಞಾಪಕ ಶಕ್ತಿಗೆ ಸಾಕ್ಷಿ ಎಂದು ನುಡಿದಿದ್ದಾರೆ.

ಆ ಕಾರ್ಯಕ್ರಮದಲ್ಲಿ ಸುರಪುರದ ಅರಸ ರಾಜಾ ವೆಂಕಟಪ್ಪನಾಯಕ ತಾತಾ ಬಿಜೆಪಿ ಸೇರಿದ್ದರು. ಆ ಚುನಾವಣೆಯಲ್ಲಿ ಬಿಜೆಪಿಯಿಂದ ತಾತಾ ಸ್ಪರ್ಧಿಸಿದ್ದರು. ಹೀಗೆ ವಾಜಪೇಯಿ ಈ ಭಾಗದಲ್ಲಿ ಸಂಚರಿಸಿ ಬಿಜೆಪಿಗೆ ಸಂಚಲನ ಮೂಡಿಸಿದ್ದರು ಎಂದು ತಿಳಿಸಿದ್ದಾರೆ.

ವಾಜಪೇಯಿ ಸಾಮಾನ್ಯ ಕಾರ್ಯಕರ್ತರನ್ನು ಗುರುತು ಹಿಡಿಯುತ್ತಿದ್ದರು. ಅವರ ಒಂದೊಂದು ಮಾತು ಮಾಣಿಕ್ಯ. ಅವರ ಜತೆ ಎರಡು ಬಾರಿ ಅಮೂಲ್ಯ ಸಮಯ ಕಳೆದಿದ್ದು ನನ್ನ ಜೀವನ ಸಾರ್ಥಕಗೊಳಿಸಿದೆ ಎಂದು ಶ್ರೀಹರಿರಾವ ಹಳೆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 

ಆ ಸಂದರ್ಭದಲ್ಲಿ ಈ ಭಾಗದಲ್ಲಿ ಪಕ್ಷಕ್ಕೆ ಕಾರ್ಯಕರ್ತರೇ ಇರಲಿಲ್ಲ. ಎಲ್ಲೋ ಒಂದು ಕಡೆ ನಾಲ್ಕಾರು ಜನರು ಕೂಡಿ ಸಭೆ
ನಡೆಸುತ್ತಿದ್ದೇವು. ಅವರು ಆಗಮಿಸಿ ಪಕ್ಷಕ್ಕೆ ಜೀವ ತುಂಬಿದ್ದರು. ಅವರ ಮಾತುಗಳೇ ಪಕ್ಷ ಸಂಘಟನೆಗೆ ಪ್ರೇರಣೆಯಾಗಿತ್ತು.

ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದವು. ವಾಹನಗಳ ಸಂಚಾರಕ್ಕೆ ಸಾಕಷ್ಟು ತೊಂದರೆ ಇತ್ತು. ಅಂತಹ ಸಂದರ್ಭದಲ್ಲಿ ವಾಜಪೇಯಿ ಅವರು ರಸ್ತೆ ಮೂಲಕ ಅಂಬಾಸಿಡರ್‌ ಕಾರಿನಲ್ಲಿ ಸಂಚರಿಸಿ ರಾಯಚೂರು, ಕಲಬುರಗಿ ಜಿಲ್ಲೆಗಳಿಗೆ ಭೇಟಿ ನೀಡಿ ಪಕ್ಷ ಸಂಘಟಿಸಿರುವುದು ಇನ್ನೂ ಹಚ್ಚ ಹಸಿರಾಗಿದೆ. ರಾಯಚೂರಿನಲ್ಲಿ ಪ್ರಚಾರ ಮುಗಿಸಿಕೊಂಡು ಹುಣಸಗಿಗೆ ಬಂದಿದ್ದರು. ಆದರೆ ಮಳೆಯಿಂದ ಕಾರ್ಯಕ್ರಮ ನಡೆಯಲಿಲ್ಲ. ನಂತರ ಶ್ರೀ ಪ್ರಭು ಕಾಲೇಜಿಗೆ ಬಂದು ಪಕ್ಷ ಸಂಘಟನೆ ಕುರಿತು ಮಾತನಾಡಿದರು. ಅವರು ಬಂದು ಹೋದ ನಂತರವೇ ಈ ಭಾಗದಲ್ಲಿ ಪಕ್ಷ ಬೀಜಾಂಕುರಗೊಂಡು ಮೊಳೆಕೆಯೊಡಿಯಿತು. ಪಕ್ಷದ ಬೆಳವಣಿಗೆಯಲ್ಲಿ ಅವರ ಶ್ರಮ ಶ್ಲಾಘ‌ನೀಯವಾಗಿದೆ ಎಂದು ಸ್ಮರಿಸಿದರು.

ವಾಜಪೇಯಿ ನಿಧನಕ್ಕೆ ಕಣ್ವಮಠದ ಶ್ರೀ ಶೋಕ 
ಕಕ್ಕೇರಾ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿಧನದಿಂದಾಗಿ ದೇಶದ ಒಬ್ಬ ಸಂಸದೀಯ ಪಟುವನ್ನು ಅಗಲಿದಂತಾಗಿದೆ ಎಂದು ಹುಣಸಿಹೊಳೆ ಕಣ್ವಮಠದ ಶ್ರೀ ವಿದ್ಯಾವಾರಿದಿ ತೀರ್ಥ ಶ್ರೀಪಾದರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕಣ್ವಮಠದ ನಿಕಟ ಪೂರ್ವ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಭಾಸ್ಕರ ತೀರ್ಥ ಶ್ರೀಪಾದರನ್ನು ವಾಜಪೇಯಿ ಅವರು ದೆಹಲಿಯ ತಮ್ಮ ನಿವಾಸಕ್ಕೆ ಕರೆಸಿಕೊಂಡು ಪಾದಪೂಜೆ ಮಾಡಿದ್ದರು ಎಂದು ಸ್ಮರಿಸಿದರು. ಬಾಲಬ್ರಹ್ಮಚಾರಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ದೇಶದ ಮಹಾನ್‌ ನಾಯಕ ಮತ್ತು ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು ಮತ್ತು ಉತ್ತಮ ವಾಗ್ಮಿಗಳು ಹಾಗೂ ಕವಿಗಳಾಗಿದ್ದರು ಎಂದು ಬಣ್ಣಿಸಿದ್ದಾರೆ.

ರಾಜಕೀಯ ರಂಗದ ಅಜಾತ ಶತ್ರು 
ಸುರಪುರ: ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅಟಲ್‌ ಬಿಹಾರಿ ವಾಜಪೇಯಿ ರಾಜಕೀಯ ರಂಗದ ಅಜಾತ ಶತ್ರು. ಮರೆಯಲಾಗದ ಮಾಣಿಕ್ಯ ಎಂದು ಶಾಸಕ ನರಸಿಂಹನಾಯಕ (ರಾಜುಗೌಡ) ತಿಳಿಸಿದ್ದಾರೆ. ದೇಶದಲ್ಲಿ ಭಾರತೀಯ ಜನತಾ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರ ಅಮೋಘವಾಗಿದೆ. ಅವರ ತತ್ವ ಸಿದ್ಧಾಂತಗಳು ರಾಜಕೀಯ ಕ್ಷೇತ್ರದಲ್ಲಿ ಆದರ್ಶವಾಗಿವೆ ಎಂದು ಸ್ಮರಿಸಿದರು.

ಅಟಲಜೀ ವ್ಯಕ್ತಿತ್ವ ನನ್ನ ರಾಜಕೀಯ ಪ್ರವೇಶಕ್ಕೆ ಪ್ರೇರಣೆಯಾಗಿದೆ. 1993-94ರಲ್ಲಿ ವಾಜಪೇಯಿ ಹುಣಸಗಿ ಹಾಗೂ ಸುರಪುರಕ್ಕೆ ಆಗಮಿಸಿದ್ದರು. ದರಬಾರ ಅರಮನೆಗೆ ಭೇಟಿ ನೀಡಿದ್ದರು. ಪ್ರಭು ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಆ ನೆನಪು ಚಿರಸ್ಮರಣೀಯವಾಗಿ ಉಳಿದಿದೆ. ಅವರ ಅಗಲಿಕೆ ಪಕ್ಷಕ್ಕೂ ಮತ್ತು ದೇಶಕ್ಕೂ ತುಂಬಲಾಗದ ನಷ್ಟ ಎಂದು ಶೋಕ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಿಜೆಪಿ ತಾಲೂಕು ಘಟಕದ ಮಾಜಿ ಅಧ್ಯಕ್ಷ ಮಲ್ಲೇಶಿ ಪಾಟೀಲ ನಾಗರಾಳ ಸಂತಾಪ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsdasd

NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್‌ ನಿವಾಸಕ್ಕೆ ಬಂದ ಜಾಧವ್!

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ

Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.