CONNECT WITH US  

ಅಪಘಾತ ವಲಯ ಪರಿಶೀಲಿಸಿದ ಅಧಿಕಾರಿಗಳ ತಂಡ

ಯಾದಗಿರಿ: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ ಸ್ಥಳ ಎಂದು ಹೆಸರಾಗಿರುವ ತಾಲೂಕಿನ ಹತ್ತಿಕುಣಿ ಗ್ರಾಮದ ಹತ್ತಿರದ ಸೌದಾಗರ್‌ ಕ್ರಾಸ್‌ ತಿರುವು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಸುರಕ್ಷತಾ ಇಲಾಖೆ ಅಧೀಕ್ಷಕ ಅಭಿಯಂತರ ರವಿಕಾಂತ ನೇತೃತ್ವದ ಅಧಿಕಾರಿಗಳು ನೀಡಿ ಪರಿಶೀಲಿಸಿದರು.

ರಾಯಚೂರು-ವನಮಾರಪಲ್ಲಿ ರಾಜ್ಯ ಹೆದ್ದಾರಿಯ 15ರ ಮಾರ್ಗಮಧ್ಯೆ ಸೌದಾಗರ ತಿರುವು ಅರಣ್ಯ ಪ್ರದೇಶದಲ್ಲಿ ಬರುವ ಸ್ಥಳವನ್ನು ಸಂಪೂರ್ಣ ವೀಕ್ಷಿಸಿದ ಅಧಿಕಾರಿಗಳು ಸ್ಥಳದಲ್ಲಿದ್ದ ಗ್ರಾಮಸ್ಥರಿಂದ ಇಲ್ಲಿಯವರೆಗೆ ಸಂಭವಿಸಿದ ಅಪಘಾತ ಘಟನೆಗಳ ಮಾಹಿತಿ ಸಂಗ್ರಹಿಸಿದರು.

ಸ್ಥಳದಲ್ಲಿದ್ದ ವಲಯ ಅರಣ್ಯಾಧಿಕಾರಿ ವೀರಣ್ಣ ಹಾಗೂ ಗುತ್ತಿಗೆದಾರ ಸಾಹೇಬಗೌಡ ಪಾಟೀಲ ಕದರಾಪುರ ಜತೆ ಚರ್ಚಿಸಿ ಕಾಮಗಾರಿ ಕ್ರಿಯಾಯೋಜನೆ ತಯಾರಿಸುವ ಮುನ್ನ ಇಲ್ಲಿ ಅನುಸರಿಸಬೇಕಾದ ನಿಯಮ ಹಾಗೂ ಕ್ರಮ ಕುರಿತು ಸಮಾಲೋಚಿಸಿ ಮಂಜೂರಾತಿ ನೀಡಿ ಆದಷ್ಟು ಬೇಗನೆ ಕೆಲಸ ಕೈಗೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಯತ್ನಿಸಲಾಗುವುದು ಎಂದು ಹೇಳಿದರು. ಅರಣ್ಯಾಧಿಕಾರಿ ವೀರಣ್ಣ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಕಾಮಗಾರಿ ಬಗ್ಗೆ ನೀವು ನೀಲನಕ್ಷೆ ತಯಾರಿಸಿ ನಮಗೆ ನೀಡಿದ ನಂತರ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ಸ್ಥಳ ನೀಡಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಸುರಕ್ಷತಾ ಇಲಾಖೆ ಸಹಾಯಕ ಅಭಿಯಂತರ ರಂಗನಾಥ, ಇಲ್ಲಿ ಕಾಮಗಾರಿ ಕೈಗೊಳ್ಳುವುದು
ಅವಶ್ಯಕವಾಗಿದೆ. ಇಲಾಖೆಯಲ್ಲಿ ಹಣದ ಕೊರತೆ ಇಲ್ಲ. ಕೂಡಲೇ ಕ್ರಿಯಾಯೋಜನೆ ತಯಾರಿಸಲಾಗುವುದು ಎಂದು
ಮಾಹಿತಿ ನೀಡಿದರು. ಇಲಾಖೆ ಸಮಾಲೋಚಕ ರಂಗನಾಥ, ಅರಣ್ಯ ಇಲಾಖೆ ಎಂ.ಡಿ. ರಹಿಮಾನ್‌, ಹತ್ತಿಕುಣಿ ಗ್ರಾಮದ ಅಮೃತರಡ್ಡಿ
ಪಾಟೀಲ, ಭೀಮರಡ್ಡಿ ರಾಂಪುರಹಳ್ಳಿ, ರವಿ ಮಾಲಿಪಾಟೀಲ, ವೆಂಕಟರಡ್ಡಿ ಕೌಳೂರು, ಶಂಕ್ರಪ್ಪ ಬಾಚವಾರ, ರವಿ ಎಲೆØàರಿ
ಇದ್ದರು.

Trending videos

Back to Top