ಅಳವಿನಂಚಲ್ಲಿ ಶಿವಶರಣ ಕಕ್ಕಯ್ಯ ಮಂದಿರ


Team Udayavani, Aug 27, 2018, 4:21 PM IST

yad-1.jpg

ಕಕ್ಕೇರಾ: 12ನೇ ಶತಮಾನ ಕುರಿತು ಅವಲೋಕಿಸಿದಾಗ ಶರಣರ ವಿಚಾರ-ಆಚಾರ, ದೇವಾಲಯ ನೆನಪಾಗುತ್ತವೆ. ಆದರೆ ಕಕ್ಕೇರಾದಲ್ಲಿ ವಿಶಿಷ್ಟವಾಗಿ ಶಿವಶರಣ ಡೋಹರ ಕಕ್ಕಯ್ಯ ದೇವಾಲಯ ಇದ್ದು, ಜೀರ್ಣೋದ್ಧಾರ ಇಲ್ಲದೆ
ಸೊರಗುತ್ತಿದೆ. 

ಹನ್ನೆರಡನೇ ಶತಮಾನದಲ್ಲಿ ಸ್ಥಾಪಿತವಾದ ಈ ದೇವಾಲಯ ನಿರ್ಲಕ್ಷ್ಯದಿಂದ ಶಿವಶರಣ ಡೋಹರ ಕಕ್ಕಯ್ಯ ಮಂದಿರ 12ನೇ ಶತಮಾನದ ಇತಿಹಾಸ ಮರೆಮಾಚುವ ಹಂತ ತಲುಪಿದೆ.

ಪ್ರತಿ ಹುಣ್ಣಿಮೆ ದಿನ ಪ್ರತಿಯೊಬ್ಬ ಶಿವಶರಣರ ಕುರಿತು ಅರಿವು-ಆಚಾರ ಕಾರ್ಯಕ್ರಮ ಹಮ್ಮಿಕೊಂಡು ಶರಣರ ವಚನ, ತತ್ವಾದರ್ಶಗಳ ಬಗ್ಗೆ ಭಕ್ತರಿಗೆ ಅರಿವು ಮೂಡಿಸಲಾಗುತ್ತಿದೆ. ಹೀಗಾಗಿ ಇಕ್ಕಟಾದ ದೇವಾಲಯದಲ್ಲಿಯೇ ಶಿವಶರಣ ಡೋಹರ ಕಕ್ಕಯ್ಯನವರ ದರ್ಶನ ಪಡೆಯುವ ಅನಿವಾರ್ಯತೆ ಭಕ್ತರಿಗೆ ತಪ್ಪಿಲ್ಲ.

ಪ್ರಸ್ತುತ ಶ್ರಾವಣ ಮಾಸದಂದು ಬಹುತೇಕ ಭಕ್ತರು ಶಿವನನ್ನು ಜಪಿಸುತ್ತಾರೆ. ಆದರೆ ದೇವಾಲಯ ಅಭಿವೃದ್ಧಿ ಕಂಡಿಲ್ಲ ಎನ್ನುವ ಭಾವನೆ ಭಕ್ತರಲ್ಲಿ ಮೂಡಿದೆ. ಆದ್ದರಿಂದ ಮುಜರಾಯಿ ಸಚಿವರಾದ ರಾಜಶೇಖರ ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಇತಿಹಾಸ ಸಾರುವ ಡೋಹರ ಕಕ್ಕಯ್ಯ ದೇವಾಲಯಕ್ಕೆ ಅನುದಾನ ನೀಡಿ ಅಭಿವೃದ್ಧಿಪಡಿಸಲು ಮುಂದಾಗಲಿ ಎನ್ನುವ ಆಸೆ ಇಲ್ಲಿನ ಭಕ್ತರದಾಗಿದೆ.

ಐತಿಹಾಸಿಕ ಹಿನ್ನೆಲೆ: ಬಸವ ಕಲ್ಯಾಣದಲ್ಲಿ ಕ್ರಾಂತಿ ಉಂಟಾದಾಗ ಅಂದಿನ ಬಸವವಾದಿ ಶರಣರಲ್ಲಿ ಚೆನ್ನಬಸವಣ್ಣ, ಶಿವಶರಣ ಡೋಹರ ಕಕ್ಕಯ್ನಾ ಹೀಗೆ ಅನೇಕ ಶರಣರು ಸ್ಥಳ ತೊರೆದು ಕಕ್ಕೇರಾ ಮಾರ್ಗವಾಗಿ ಉಳವಿ ಕಡೆಗೆ ಪ್ರಯಾಣಿಸಿದ್ದರಂತೆ. ತೀರಾ ಆಯಾಸವಾಗಿ ಶರಣ ಡೊಹರ ಕಕ್ಕಯ್ನಾ ಅವರು ಕಕ್ಕೇರಾದಲ್ಲಿ ವಿಶ್ರಾಂತಿಸಿ ಕಕ್ಕೇರಾದಲ್ಲಿ
ಲಿಂಗೈಕ್ಯರಾದರು ಎಂಬುದು ಚೆನ್ನಬಸವ ಪುರಾಣ ಗ್ರಂಥದಲ್ಲಿ ಉಲ್ಲೇಖ ಇದೆ. ಆದ್ದರಿಂದ ಕಕ್ಕೇರಾ ಎಂದಿರುವ ಊರಿನ ಹೆಸರು ಆಗಿನ ಮೊದಲು ಕಕ್ಕಯ್ಯ ಎಂದಿತ್ತು. ಕಾಲಕ್ರಮೇಣವಾಗಿ ಕಕ್ಕಯ್ಯ, ಕಕ್ಕೇರಿ, ಕಕ್ಕೇರಾ ಎಂದು ಇಂದಿಗೂ ಜನಮನಸಲ್ಲಿ ಉಳಿದಿದೆ.

ವೈಶಿಷ್ಟ್ಯ : ದೇವಾಲಯದ ಒಳ ಭಾಗವು 12 ಶತಮಾನದ ಮಾದರಿ ಅಂದರೆ ಕೂಡಲ ಸಂಗಮೇಶ್ವರ ಮಂದಿರದಂತೆ ಕಾಣಬಹುದು. ನಾಲ್ಕು ಕಂಬಗಳು ವರ್ಣಶೈಲಿಯೊಂದಿಗೆ ಕೆತ್ತಲಾಗಿದೆ. ಬೃಹತ್‌ ಲಿಂಗವಿದೆ. ಹೀಗಾಗಿ 12 ಶತಮಾನದಂದೇ ಈ ದೇವಾಲಯ ಸ್ಥಾಪಿಸಲಾಗಿದೆ ಎನ್ನಲಾಗುತ್ತಿದೆ. ಹಾಗೇ ದೇವಾಲಯದಲ್ಲಿ ಹಳೇ ಶಾಸನ ಲಿಪಿ ಇದೆ. ಎಣ್ಣೆ, ಮೇಣ ಮೆತ್ತಿ ಲಿಪಿ ಕಾಣದ ಸ್ಥಿತಿಯಲ್ಲಿದೆ. ಹಾಗೇ ಶಿವರಾತ್ರಿಯ ಹಬ್ಬದಂದು ಗ್ರಾಮಸ್ಥರಿಂದ ಅದ್ಧೂರಿಯಾಗಿ ಶಿವನ ಜಾಗರಣೆ ಮಾಡಲಾಗುತ್ತಿದೆ. ಪ್ರತಿ ಸೋಮವಾರ ಶಿವನಲಿಂಗಕ್ಕೆ ಭಕ್ತರು ಪೂಜೆ ನೆರವೇರಿಸುತ್ತಾರೆ.

ಬಾಲಪ್ಪ ಎಂ. ಕುಪ್ಪಿ

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewwqe

Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

1-adsdasd

NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್‌ ನಿವಾಸಕ್ಕೆ ಬಂದ ಜಾಧವ್!

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.