CONNECT WITH US  

ಯೋಧರ ಸಮಸ್ಯೆ ನಿವಾರಣೆಗೆ ಸ್ಪಂದನ

ಶಹಾಪುರ: ತಾಲೂಕಿನ ಸಗರ ಗ್ರಾಮ ಜಿಲ್ಲೆಯಲ್ಲಿಯೇ ಹೆಚ್ಚು ಯೋಧರನ್ನು ದೇಶಕ್ಕಾಗಿ ನೀಡಿದ ಗ್ರಾಮವಾಗಿದ್ದು, ನನ್ನ ಕ್ಷೇತ್ರದಲ್ಲಿ ನಮ್ಮ ತಾಲೂಕಿನ ಗ್ರಾಮವೊಂದರ ಹತ್ತಾರು ಜನ ಯೋಧರಾಗಿದ್ದಾರೆ ಎಂಬುದು ನಮಗೂ ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ತಾಲೂಕಿನ ಸಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸಲಾದ ಹುತಾತ್ಮ ಯೋಧ ಸುಭಾಶ್ಚಂದ್ರ ಮಡಿವಾಳ ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಧರು ದೇಶದ ಗಡಿ ಪ್ರದೇಶದಲ್ಲಿ ಹಗಲು ರಾತ್ರಿ ಚಳಿ ಮಳೆ ಎನ್ನದೆ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ದೇಶ ರಕ್ಷಣೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುತ್ತಾರೆ. ಅವರು
ಶ್ರದ್ಧಾ ಪೂರ್ವಕವಾಗಿ ತಮ್ಮ ಜೀವ ತೊರೆದು ಕಾಯಕದಲ್ಲಿ ಮಗ್ನರಾಗಿರುವ ಕಾರಣ ನಾವೆಲ್ಲರೂ ಇಲ್ಲಿ ಆರಾಮವಾಗಿ ಬದಕಲು ಸಾಧ್ಯವಾಗಿದೆ.

ಗ್ರಾಮದ ಸುಭಾಶ್ಚಂದ್ರ ಯೋಧ ಗಡಿ ಪ್ರದೇಶದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ವೀರ ಮರಣವನ್ನು ಅಪ್ಪಿದ್ದಾರೆ. ದೇವರು ಅವರ ಕುಟುಂಬವನ್ನು ಚೆನ್ನಾಗಿ ಇಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಸ್ಮಾರಕಕ್ಕೆ ಹೂಗುತ್ಛ ಅರ್ಪಿಸಿ ಮಾತನಾಡಿದ ಕಮಾಂಡೋ ಟಿ. ವಿಶ್ವನಾಥ, ಕೇಂದ್ರ ಸರ್ಕಾರದ ಸೂಚನೆಯಂತೆ, ಆಯಾ ಹುತಾತ್ಮ ಯೋಧರ ಗ್ರಾಮದಲ್ಲಿ ಹುತಾತ್ಮ ಯೋಧ ಅಕ್ಷರ ಅಭ್ಯಾಸ ಮಾಡಿದ ಶಾಲೆ ಇದ್ದರೆ, ಆ ಶಾಲೆಯ ಆವರಣದಲ್ಲಿ ಸ್ಥಳೀಯ ಹುತಾತ್ಮ ಯೋಧರ ಸ್ಮಾರಕ ಅಥವಾ ಪ್ರತಿಮೆ ನಿರ್ಮಾಣ ಮಾಡುವ ಯೋಜನೆ
ರೂಪಿಸಲಾಗಿದೆ. 

ಅದರಂತೆ ಈ ಗ್ರಾಮದಲ್ಲಿ ಹುತಾತ್ಮ ಯೋಧ ಸುಭಾಶ್ಚಂದ್ರ ಮಡಿವಾಳರ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಇದರ ಜವಾಬ್ದಾರಿಯನ್ನು ಕಮಾಂಡೋ ಟೀಂ ರಚಿಸಿದ್ದು, ಅವರಿಗೆ ಒಪ್ಪಿಸಲಾಗಿದೆ. ಕೇಂದ್ರ ಸರ್ಕಾರ ರೂಪಿಸಿದ
ನಿಯಮನುಸಾರ ಈ ಭಾಗದ ಕಮಾಂಡೋ ಟೀಂ ನ ಮುಖ್ಯಸ್ಥ ನಾನಾಗಿದ್ದು, ಆಯಾ ಯೋಧರ ಸ್ಥಳೀಯ
ಶಾಲೆ ಗುರುತಿಸಿ ಮಾಹಿತಿ ಪಡೆದುಕೊಂಡು, ಆ ಜಿಲ್ಲೆಯ ಜಿಲ್ಲಾ ಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮತ್ತು ತಾಲೂಕು ದಂಡಾಧಿಕಾರಿಗಳಿಗೆ ಮಾಹಿತಿ ನೀಡಿ ಈ ಕಾರ್ಯ ಮಾಡಲಾಗಿದೆ. ಸ್ಮಾರಕ ನಿರ್ಮಾಣಕ್ಕೆ ಶಾಲೆಯ ಮುಖ್ಯಗುರುಗಳು ಸಿಬ್ಬಂದಿ ಮತ್ತು ಗ್ರಾಮಸ್ಥರು ಸೇರಿದಂತೆ ಶಾಲಾ ಮಕ್ಕಳು ಸಹಕಾರಿ ನೀಡಿದ್ದಾರೆ ಎಂದರು.

ಸ್ಥಳೀಯ ಯೋಧರಾದ ದೇವಿಂದ್ರ ಮರ್ಸ, ಮಲ್ಲಿಕಾರ್ಜುನ ಮರ್ಸ ಮತ್ತು ತಹಶೀಲ್ದಾರ್‌ ಸಂಗಮೇಶ ಜಿಡಗಾ, ಸಿಪಿಐ ನಾಗರಾಜ ಜಿ, ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಹೋತಪೇಟ, ಪಿಎಸ್‌ಐ ತಿಪ್ಪಣ್ಣ ರಾಠೊಡ ಸೇರಿದಂತೆ ಹುತಾತ್ಮ ಯೋಧ ಸುಭಾಶ್ಚಂದ್ರ ಪತ್ನಿ ಗಂಗಮ್ಮ ಮತ್ತು ಗ್ರಾಮಸ್ಥರು ಇದ್ದರು. ಮುಂಚಿತವಾಗಿ ಸ್ಮಾರಕಕ್ಕೆ ವಿಶೇಷವಾಗಿ
ಪೂಜೆ ಸಲ್ಲಿಸಲಾಯಿತು.

ಇಂದು ಹೆಚ್ಚು ಓದಿದ್ದು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 12:35pm

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top