CONNECT WITH US  

ಕಾಂಗ್ರೆಸ್‌ ಕುತಂತ್ರದಿಂದ ಸೋಲು: ಬಾಬುರಾವ್‌

ಸೈದಾಪುರ: ಕಾಂಗ್ರೆಸ್‌ನ ಸ್ವಾರ್ಥ ವ್ಯಕ್ತಿಗಳ ಕುತಂತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣ
ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಬಾಬುರಾವ್‌ ಚಿಂಚನಸೂರ ಹೇಳಿದರು.

ತೋರಣತಿಪ್ಪ ಗ್ರಾಮದಲ್ಲಿ ರವಿವಾರ ಹಮ್ಮಿಕೊಂಡಿದ್ದ ಆಂಜನೇಯ ಸ್ವಾಮಿ ನೂತನ ರಥ ಉದ್ಘಾಟಿಸಿ ವಿಶೇಷ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಬಾಬುರಾವ್‌ ಗೆದ್ದರೆ ಕ್ಯಾಬಿನೆಟ್‌ ದರ್ಜೆಯ ಪ್ರಭಾವಿ ಮಂತ್ರಿ ಆಗುತ್ತಾರೆ ಎಂಬ ಹೊಟ್ಟೆಕಿಚ್ಚಿನಿಂದ ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲಾಗಿದೆ ಎಂದು ಅಸಮಧಾನ ಹೊರಹಾಕಿದರು. ಐದು ಬಾರಿ ಚುನಾವಣೆಯಲ್ಲಿ ಗೆದ್ದ ತಮ್ಮನ್ನು ತೆಗೆದು ಮೊದಲ ಸಲ ಗೆದ್ದ ಮಗನನ್ನು ಮಂತ್ರಿ ಮಾಡಿದ್ದಾರೆ. ಹೀಗಾಗಿ ಕುಟುಂಬ ರಾಜಕಾರಣದಿಂದ ದೇಶದ ಉದ್ಧಾರ ಅಸಾಧ್ಯ ಎಂದು ತಿಳಿದು ಬಿಜೆಪಿ ಪಕ್ಷ ಸೇರಿರುವುದಾಗಿ ತಿಳಿಸಿದರು.

ತಮ್ಮ ರಾಜಕೀಯ ಅನುಭವ ಹಾಗೂ ಸೇವೆಯನ್ನು ಗಮನಿಸಿ ಬಿ.ಎಸ್‌. ಯಡಿಯೂರಪ್ಪ ಅವರು, ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಪಕ್ಷದ ವಿಶ್ವಾಸ ಗಳಿಸುತ್ತೇನೆ ಎಂದರು. ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವುದೇ ತಮ್ಮ ಮುಂದಿರುವ ಗುರಿ, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೋಲಿ ಸಮಜದ ಮುಖಂಡ ರಾಮಣ್ಣ ನಾಯ್ಕೋಡಿ, ಶೇಷಪ್ಪ ಪ್ಯಾಟಿ, ಅಶೋಕ ಕಲಾಲ್‌, ಆಂಜನೇಯ, ಸಣ್ಣ ಭೀಮರೆಡ್ಡಿ ಕಲಾಲ್‌, ಶಂಕ್ರಪ್ಪ ಬೋಯಿನ್‌ ಇದ್ದರು. 


Trending videos

Back to Top