ಚೆನ್ನೆಮಣೆ ಹೋಯಿತು, ಮೊಬೈಲ್‌ ಗೇಮ್‌ ಬಂತು!

Team Udayavani, Apr 28, 2017, 3:45 AM IST

kids-aa.jpg

ನಾವೆಲ್ಲರೂ ಚಿಕ್ಕದಿರುವಾಗ ದಸರಾ ರಜೆ, ಬೇಸಿಗೆ ರಜೆಗಳೆಲ್ಲ ಬರುವುದೇ ಕಾಯುತ್ತ ಇದ್ದೆವು. ಬೇಸಿಗೆ ರಜೆ ಬರುವಾಗ ಶಾಲೆಯಲ್ಲಿ ಕೊಟ್ಟ ಹೋಮ್‌ವರ್ಕ್‌ ನ್ನೆಲ್ಲಾ ಪರೀಕ್ಷೆ ಆದ ತಕ್ಷಣ ಶಾಲೆಯಲ್ಲಿ ಹತ್ತು ದಿನ ಸುಮ್ಮನೆ ಶಾಲೆಗೆ ಬಂದು ಹೋಗುವುದಿರುತ್ತಲ್ಲ ಆ ಸಮಯದಲ್ಲಿ ಒಂದು ನಿಮಿಷಾನೂ ಬಿಡದೆ ರಜೆಗೆ ಅಂತ ಕೊಟ್ಟ ಹೋಮ್‌ವರ್ಕ್‌ನೆಲ್ಲಾ ಆ ಹತ್ತು ದಿನದಲ್ಲೇ ಮುಗಿಸಿಕೊಳ್ಳುತ್ತಿದ್ದೆವು. ನಂತರ ರಜೆ ಕೊಟ್ಟ ದಿನದಿಂದಲೇ ಅಕ್ಕ-ಪಕ್ಕದ ಮನೆಯ  ಫ್ರೆಂಡ್ಸ್‌ ಜೊತೆಗೆ ಮತ್ತು ರಜೆ ಎಂದು ನೆಂಟರ ಮನೆಗೆ ಬಂದವರು ಸ್ವಲ್ಪ ಜನ ಎಲ್ಲ ಸೇರಿ ಹೊಸ ಹೊಸ ಫ್ರೆಂಡ್ಸ್‌ ಎಲ್ಲಾ ಸಿಗುತ್ತಿದ್ದರು. ನಾವೆಲ್ಲರೂ ಸೇರಿಕೊಂಡು ದಿನಾಲೂ ಕರೆಂಟ್‌ ಇದ್ದರೆ ಟಿ.ವಿ. ನೋಡುತ್ತಿದ್ದೆವು. ಕರೆಂಟ್‌ ಇಲ್ಲ ಎಂದರೆ ಹೊರಗಡೆ ಬಂದು ಚಿನ್ನಿ-ದಾಂಡು-ಲಗೋರಿ-ಕವಡೆ-ಗೋಲಿ- ಚೆನ್ನೆಮಣೆ- ಕುಂಟಾಬಿಲ್ಲೆ ಆಡುತ್ತಿದ್ದೆವು.

ಮರಕ್ಕೆ ಅಮ್ಮನ ಸೀರೆಯನ್ನು ಕಟ್ಟಿ ಜೋಕಾಲಿ ಮಾಡಿಕೊಂಡು ತೂಗುತ್ತಿದ್ದೆವು. ಇವನ್ನೆಲ್ಲ ಆಡಿ ಮನೆಗೆ ಐದು-ಆರು ಗಂಟೆಗೆ ಹಿಂದಿರುಗುತ್ತಿದ್ದೆವು. ಅಪ್ಪ-ಅಮ್ಮ-ಅಜ್ಜಿ ಎಲ್ಲರೂ ಸಹ ಮನೆಗೆ ಬಂದ ತತ್‌ಕ್ಷಣ “ಇದೇನು ಇಷ್ಟು ಬಟ್ಟೆ ಮಣ್ಣು ಮಾಡಿಕೊಂಡು ಬಂದಿದ್ದೀಯಾ’ ಎಂದು ಬೈಯುತ್ತಿದ್ದರು. ಆದರೂ ಈ ಆಟಗಳಿಂದ ಏನೋ ಒಂಥರಾ ಸಂತೋಷ ಸಿಗುತ್ತಿತ್ತು. ಆದರೆ, ಈಗಿನ ಚಿಕ್ಕ ಚಿಕ್ಕ ಹಳ್ಳಿ ಮಕ್ಕಳು ಹೊರಗಡೆ ಹೋಗುವುದೇ ಕಮ್ಮಿ. ಕರೆಂಟ್‌ ಇದ್ದರೆ ಟಿ. ವಿ. ನೋಡುತ್ತಾರೆ. ಕರೆಂಟ್‌ ಇಲ್ಲ ಎಂದರೆ ಮೊಬೈಲ್‌ನಲ್ಲಿ ಗೇಮ್ಸ್‌ ಆಡ್ತಾರೆ. ಕೆಲವು ಸಲ ಕರೆಂಟ್‌ ಇದ್ರೂ ಸಹ ಕೈಯಲ್ಲೊಂದು ಮೊಬೈಲ್‌ ಇರುತ್ತೆ. ಟಿ.ವಿ. ಇದ್ರೂ ಅದರ ಪಾಡಿಗೆ ಅದು ಚಾಲೂ ಇರುತ್ತದೆ. ಮಕ್ಕಳು ಇವರ ಪಾಡಿಗೆ ಇವ್ರು ಮೊಬೈಲ್‌ನಲ್ಲಿ ಗೇಮ್ಸ್‌ ಆಡ್ತಾನೇ ಇರುತ್ತಾರೆ. “ಹೊರಗಡೆ ಹೋಗುವ ಬನ್ನಿ’ ಎಂದರೆ, “ಇಲ್ಲ ಸ್ವಲ್ಪ ಕೆಲಸ ಇದೆ’ ಎಂದು ಹೇಳ್ತಾರೆ. ಈ ಆಟಗಳ ಹೆಸರನ್ನೆಲ್ಲಾ ಹೇಳಿ ಆಟ ಆಡುವ ಬನ್ನಿ ಎಂದು ಹೇಳಿದರೆ, “ನಾನು ಬರುವುದಿಲ್ಲಪ್ಪಾ… ಅಪ್ಪ ಅಮ್ಮ ಬೈತಾರೆ ಬಟ್ಟೆ ಮಣ್ಣಾಗುತ್ತದೆ’ ಎಂದು ಹೇಳಿ ದೊಡ್ಡ ದೊಡ್ಡ ಮೊಬೈಲ್‌ ಹಿಡಿದು ಗೇಮ್ಸ್‌ ಆಡ್ತಾ ಇರ್ತಾರೆ. “ರಜೆ ಬಂತು, ಸ್ವಲ್ಪ ದಿನ ನೆಂಟರ ಮನೆಯಲ್ಲಿ ಹೋಗಿ ಇರ್ತೀಯಾ’ ಎಂದರೆ, “ಇಲ್ಲಪ್ಪಾ ಅಲ್ಲಿ ಆಟ ಆಡುವುದಕ್ಕೆ ಯಾರೂ ಮೊಬೈಲ್‌ ಕೊಡುವುದಿಲ್ಲ’ ಎಂದು ಹೋಗುವುದೇ ಇಲ್ಲ. ಅಪ್ಪಿತಪ್ಪಿ ಹೊರಟರೂ ಸಹ ಅಪ್ಪ-ಅಮ್ಮ ಜೊತೆಗೆ ಇರಲೇಬೇಕು. ಕಾರಣ,  ಮಗು ಕೇಳಿದಾಗಲೆಲ್ಲ ಮೊಬೈಲ್‌ ಕೊಟ್ಟು ಕೊಟ್ಟು ಮಕ್ಕಳನ್ನು ಮುದ್ದಾಗಿ ಸಾಕಿರುವುದು. ಆಗ ಮಕ್ಕಳು ಅಪ್ಪ ತೋಟದ ಕೆಲಸ ಮಾಡಿ ಮನೆಗೆ ಬಂದ ತಕ್ಷಣ, “ಅಪ್ಪಾ ಹೊರಗಡೆ ಹೋಗಿ ಆಟ ಆಡಿ ಬರುತ್ತೇನೆ’ ಎಂದು ಕೇಳುತ್ತಿದ್ದರು. ಈಗಿನ ಮಗು “ಅಪ್ಪಾ ಮೊಬೈಲ್‌ ಎಲ್ಲಿಟ್ಟಿದ್ದೀರಾ, ಸ್ವಲ್ಪ ಕೊಡಿ ಗೇಮ್ಸ್‌ ಆಡಿ ಕೊಡುತ್ತೇನೆ’ ಎಂದು ಕೇಳುತ್ತದೆ.

– ಸಿಂಚನಾ ಎಂ. ಆರ್‌.
ದ್ವಿತೀಯ ಬಿ. ಎ., ಎಂಜಿಎಂ ಕಾಲೇಜು, ಉಡುಪಿ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.