ಅಮ್ಮ ನಿನ್ನ ತೋಳಿನಲ್ಲಿ


Team Udayavani, Jan 26, 2018, 12:52 PM IST

26-40.jpg

ಅಮ್ಮ ಅನ್ನೋದು ಎರಡೇ ಅಕ್ಷರವಾದರೂ ಇನ್ನೂರು ಕೋಟಿ ಜನ್ಮವೆತ್ತಿ ಬಂದರೂ ಅದರ ಶಕ್ತಿಯನ್ನು ವಿವರಿಸಲಾಗದು. ನಾವು ದೇವಾಲಯಗಳಲ್ಲಿ ದೇವರನ್ನು ಎಲ್ಲಿ ಕಾಣುತ್ತೇವೆ? ಗರ್ಭಗುಡಿಯಲ್ಲಿ ಅಲ್ಲವೆ? ಹಾಗಾದರೆ ತಿಳಿಯದೇ, ಅಮ್ಮ ನಮಗೆ ಎಂತಹ ಬೆಚ್ಚಗಿನ ಆಶ್ರಯ ನೀಡಿ ಪೋಷಿಸುತ್ತಾಳೆಂದು? ಒಂಬತ್ತು ತಿಂಗಳು ಆ ಪುಟ್ಟ ಕಂದನನ್ನು ಹೊತ್ತು ಅದು ಮಾಡುವ ಕೀಟಲೆ ಮತ್ತು ಅದರ ಒದೆತದ ನೋವನ್ನು ಸಂತೋಷದಿಂದ ಸಹಿಸಿಯೂ ಸಹ ತನ್ನ ಜೀವವನ್ನು ಲೆಕ್ಕಿಸದೇ ಆ ಕಂದಮ್ಮನಿಗೆ ಜೀವ ನೀಡುವಳಲ್ಲ, ಆ ತಾಯಿ ನಮ್ಮ ಕಣ್ಣಿಗೆ ಕಾಣುವ ದೇವರಲ್ಲವೇ? ಆಹಾ! ಅಮ್ಮ ಅನ್ನೋ ಪದವನ್ನು ವಿವರಿಸೋದು ಅಷ್ಟೊಂದು ಸುಲಭವೇ?

    ಅಮ್ಮ ಅನ್ನೋ ಪದವನ್ನೇ ವಿವರಿಸಲಾಗುತ್ತಿಲ್ಲವೆಂದರೆ ಇನ್ನು ನನ್ನ ತಾಯಿಯನ್ನು ಅದ್ಹೇಗೆ ವಿವರಿಸಲಿ? ಕಂದನೆಂದರೆ ಅದೆಷ್ಟು ಇಷ್ಟವಮ್ಮ ನಿನಗೆ? ಮಗುವಿಗಾಗಿ ಹಪಹಪಿಸುತ್ತಿರುವ ಸಂದರ್ಭ ನಿನ್ನ ಗರ್ಭದಲ್ಲಿ ಮಗುವಾಗಿ ನಾನು ಚಿಗುರಿದೆ. ಅದೆಷ್ಟು ಸಂಭ್ರಮಿಸಿದೆಯಲ್ಲ ನೀನು! ನೀನು ಸಂತೋಷದಲ್ಲಿ ಹಾರಾಡುತ್ತಿರುವಾಗ ನಿನ್ನ ಹಿಡಿಯುವವರೇ ಇರಲಿಲ್ಲ. ಆದರೆ ನಿನಗೆ ನಾ ನೀಡಿದ್ದು ಬರೇ ನೋವಲ್ಲವೇ ಅಮ್ಮ? ನೀನು ಗರ್ಭವತಿಯಾದಾಗ ಅದೇನೆಲ್ಲ ತಿಂದು ನನ್ನ ಬೆಳೆಸಬೇಕು ಎಂದು ಬಯಸಿದ್ದೆಯೋ, ಹೇಗೆ ನನ್ನ ಬೆಳವಣಿಗೆಗೆ ಪೋಷಿಸಿದ್ದೆಯೋ ನಾ ಅರಿಯೆನಮ್ಮ. ಆದರೆ ನನ್ನ ಬೆಳವಣಿಗೆಯ ಪರಿ ಸರಿ ಇಲ್ಲದ ಕಾರಣ ನೀನು ಅನಾರೋಗ್ಯದಿಂದ ನರಳಿ ಬರೀ ನೀರು ಗಂಜಿಯಲ್ಲೇ ನನ್ನ ಪೋಷಿಸಿದೆಯಲ್ಲ, ನಿನ್ನಿಂದ ಅದು ಹೇಗೆ ಸಾಧ್ಯವಾಯ್ತು ಅಮ್ಮ? ಇನ್ನೇನು ನಿನ್ನ ಗರ್ಭದಲ್ಲಿ ಒಂಬತ್ತು ತಿಂಗಳ ಪ್ರಯಾಣ ಮುಗಿಸಿ ಹೊಸಪ್ರಪಂಚಕ್ಕೆ ಬಂದು ಕಣ್ಣು ತೆರೆಯಬೇಕೆನ್ನುವಷ್ಟರಲ್ಲಿ ನಿನ್ನ ಜೀವಕ್ಕೆ ಕಂಠಕವಾದೆನಲ್ಲಮ್ಮ. ಡಾಕ್ಟರ್‌ ಕೋಣೆಯಿಂದ ಹೊರಬಂದು, “”ಮಗು ಅಡ್ಡವಾಗಿ ಮಲಗಿದೆ, ಅಲ್ಲದೇ ಮಗುವಿನ ಕೊರಳಿಗೆ ತಾಯಿಯ ಕರುಳು ಸುತ್ತಿಕೊಂಡಿದೆ. ಇದಕ್ಕೆ ಕೂಡಲೇ ಆಪರೇಶನ್‌ ಆಗಲೇಬೇಕು” ಎನ್ನುತ್ತಾ ಅಪ್ಪನಿಗೆ ಒಂದು ಹಾಳೆ ಕೊಟ್ಟು “”ನಾವು ತಾಯಿ-ಮಗುವಲ್ಲಿ ಒಬ್ಬರನ್ನು ಮಾತ್ರ ಉಳಿಸಬಲ್ಲೆವು ಸರ್‌, ಇದಕ್ಕೆ ನಿಮ್ಮ ಅನುಮತಿ ಇದೆ ಎಂದು ಸಹಿ ಹಾಕಿ” ಎಂದಾಗ ಮನೆಯವರೆಲ್ಲ ತಬ್ಬಿಬ್ಟಾದರೂ ಸಹ ನಿನ್ನ ಜೀವ ಲೆಕ್ಕಿಸದೇ, “”ಬದುಕುಳಿದರೆ ನನ್ನ ಮಗುವೇ ಉಳಿಯಬೇಕು” ಎಂದು ನೇರವಾಗಿ ಹೇಳಿ ಅಪ್ಪನಿಗೆ ಧೈರ್ಯ ತುಂಬಿ ಸಹಿ ಮಾಡಿಸಿ ಆಪರೇಶನ್‌ ಥಿಯೇಟರ್‌ ಒಳಗೆ ಹೋದೆಯಲ್ಲ, ನಿನ್ನ ಹೇಗೆ ಪೂಜಿಸಲಿ ಅಮ್ಮ. ಹಾಗೋ ಹೀಗೋ ನಿನ್ನ ಕರುಳಿನಲ್ಲಿ ಸುತ್ತಿಕೊಂಡ ಕೊರಳನ್ನು ಬಿಡಿಸಿ ಇಕ್ಕಳದಲ್ಲಿ ತೆಗೆಯುವಾಗ ಮರಳಿ ಜಾರಿ ನಿನ್ನ ಹೊಟ್ಟೆಯ ಮೇಲೆ ಬಿ¨ªೆನಲ್ಲ ನಿನಗೆ ಅದೆಷ್ಟು ನೋವಾಗಿರಬೇಕಮ್ಮ! ಅದು ಹೇಗೆ ಸಹಿಸಿಕೊಂಡೆಯಮ್ಮ, ಅದನ್ಯಾಕೆ ಕಲ್ಪಿಸಿಕೊಳ್ಳಲೂ ನನ್ನ ಮೈ ಕಂಪಿಸುತ್ತದೆ, ಹೇಳಮ್ಮ ಯಾವ ಋಣವಿತ್ತೋ ಏನೋ ನಮ್ಮಿಬ್ಬರ ಮಧ್ಯೆ. ಅಂತೂ ಇಬ್ಬರೂ ಬದುಕುಳಿದೆವು. ಆದರೆ ನಂತರವೂ ನಿನ್ನ ಎದೆಹಾಲು ಮುಟ್ಟದೇ ನಿನಗೆ ಎದೆನೋವು ಬರುವ ಹಾಗೆ ಮಾಡಿ ಆ ನೋವಿನಿಂದ ಈಗಲೂ ನರಳುತ್ತಿದ್ದರೂ ಅದ್ಯಾವುದನ್ನೂ ನನಗೆ ತೋರಗೊಡದೆ ಮೇಲ್ನೋಟಕ್ಕೆ ನಗುತ್ತಿರುವೆಯಲ್ಲ ನಿನಗಿಂತ ಮಿಗಿಲೇನಿದೆಯಮ್ಮ? ನಿನ್ನನ್ನು ಯಾವುದಕ್ಕೆ ಹೋಲಿಸಲಿ?

    ಅಮ್ಮ ಮರುಜನ್ಮವೇನಾದರೂ ನನಗಿದ್ದರೆ ನನ್ನ ಮಗಳಾಗಿ ಜನಿಸಿ ಬಾ ಅಮ್ಮ. ಪೂರ್ತಿ ಅಲ್ಲದಿದ್ದರೂ ಸ್ವಲ್ಪ ಋಣವನ್ನಾದರೂ ತೀರಿಸಲು ಪ್ರಯತ್ನಿಸುತ್ತೇನೆ. ದೇವಾನುದೇವತೆಗಳಿಗಿಂತ ಮಿಗಿಲು ನನ್ನಮ್ಮ ಎಂದು ಗರ್ವದಿಂದ ಜಗತ್ತಿಗೇ ಕೇಳುವ ಹಾಗೆ ಕೂಗಿ ಹೇಳಲು ಬಯಸುತ್ತೇನಮ್ಮ. ಐ ಲವ್‌ ಯೂ ಅಮ್ಮ.

ಸಂಗೀತಾ ಜಿ.
ಕಂಪ್ಯೂಟರ್‌ ಸಾಯನ್ಸ್‌ ವಿಭಾಗ
ಕಾಮತ್‌ ಪಾಲಿಟೆಕ್ನಿಕ್‌, ಹೊಂಬಾಡಿ-ಮಂಡಾಡಿ, ಕುಂದಾಪುರ

ಟಾಪ್ ನ್ಯೂಸ್

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.