ಶಿಲೆಗಳು ಸಂಗೀತವಾ ಹಾಡಿದ ಹಂಪಿಯಲ್ಲಿ


Team Udayavani, Feb 9, 2018, 8:15 AM IST

14.jpg

ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಶಾಲಾ-ಕಾಲೇಜುಗಳಿಂದ ಪ್ರವಾಸ ಹೋಗುವುದೆಂದರೆ ಹೊಸತೇನಲ್ಲ. ಪ್ರವಾಸ ಹೋಗುವಾಗಿನ ಮೋಜು-ಉತ್ಸಾಹ ವಿಶೇಷವಾದದ್ದೇ. ಆದ್ದರಿಂದ ನಾವೂ ಪ್ರವಾಸ ಹೋಗುವುದಕ್ಕಾಗಿ ಉತ್ಸುಕರಾದೆವು. ಪ್ರವಾಸಕ್ಕೆಂದು ನಾವು ಆಯ್ಕೆ ಮಾಡಿದ್ದು ಒಂದು ಕಾಲದಲ್ಲಿ ದಕ್ಷಿಣಭಾರತದಲ್ಲಿ ಅಖಂಡವಾಗಿ ಮೆರೆದು ಕನ್ನಡನಾಡಿನ ಕನ್ನಡಿಗರ ಕಲೆ-ಸಂಸ್ಕೃತಿಗಳಿಗೆ ವಿಶ್ವಮನ್ನಣೆಯನ್ನು ದೊರಕಿಸಿಕೊಟ್ಟ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಹಂಪಿ. ವಿಜಯನಗರ ಸಾಮ್ರಾಜ್ಯ ಎಂದು ಕೇಳಿದಾಗ ನೆನಪಿಗೆ ಬರುವುದೇ ಕೃಷ್ಣದೇವರಾಯ, ತೆನಾಲಿರಾಮಕೃಷ್ಣ-ಹರಿಹರಬುಕ್ಕ ಮೊದಲಾದ ಮಹಾಪುರುಷರು. ವಿಜಯನಗರ ಸಾಮ್ರಾಜ್ಯವನ್ನು ನೋಡುವ ಹಂಬಲ ನಮ್ಮೆಲ್ಲರ ಮನದಲ್ಲಿ ಮನೆಮಾಡಿತು.ಅದರಂತೆಯೇ ಮೂರು ದಿವಸಗಳ ಲೆಕ್ಕಾಚಾರದಲ್ಲಿ ಸಂಜೆ ಹೊತ್ತಿಗೆ ನಮ್ಮ ಯಾನವು ಪ್ರಾರಂಭವಾಯಿತು. 

ಹೊಸಪೇಟೆಯ ಹೊಸ ಅನುಭವ
ಮುಂಜಾನೆಯ ಹೊತ್ತು. ಆಗಾಗಲೇ ಮೂಡಣದಲ್ಲಿ ರವಿಯ ಜನನವಾಗುತ್ತಿತ್ತು. ಅರುಣನ ಎಳೆ ಕಿರಣಗಳು ಸುತ್ತಲೂ ಪಸರಿಸತೊಡಗಿತ್ತು. ಸ್ವೆಟರ್‌ ಧರಿಸಿದ್ದರೂ ಚಳಿಗೇನೂ ಕಮ್ಮಿ ಇರಲಿಲ್ಲ. ಮುಂಜಾವಿನ ಹೊತ್ತಲ್ಲಿ ಬಸ್ಸಲ್ಲಿ ಸಂಚರಿಸುವುದು ಹೊಸ ಅನುಭವವಾಗಿತ್ತಾದರೂ ಅರುಣೋದಯದ ಸೊಬಗನ್ನು ಆಸ್ವಾದಿಸುತ್ತಾ, ಆಯಾಸ ಪರಿಹರಿಸಿ ಎಚ್ಚೆತ್ತ ಪ್ರಕೃತಿಯು ರವಿಯನ್ನು ಬರಮಾಡಿಕೊಂಡು ಹೊಸ ದಿನಕ್ಕೆ ಸಿದ್ಧತೆ ನಡೆಸುವ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುವುದು ಒಂದು ರಮ್ಯ ಅನುಭವವಾಗಿತ್ತು. ನಾವು ಮುಂದೆ ಚಲಿಸಿದಂತೆ ಸುತ್ತಮುತ್ತಲಿದ್ದ ಗುಡ್ಡಗಳೂ ನಮ್ಮೊಂದಿಗೆ ಚಲಿಸುವಂತೆ ಭಾಸವಾಗುತ್ತಿತ್ತು ರಸ್ತೆಯ ಇಕ್ಕೆಲಗಳಲ್ಲಿ ಕೃಷಿ ಮಾಡಿದ್ದ ಸೂರ್ಯಕಾಂತಿ ಹೂಗಳು ಸೂರ್ಯನೇ ಕವಲುಗಳಾಗಿ ಒಡೆದು ಬಂದು ಹಸಿರು ಗಿಡಗಳ ಮೇಲೆ ಕುಳಿತು ನಗುತ್ತಿರುವಂತೆ ತೋರುತ್ತಿದ್ದವು. ತಣ್ಣನೆ ಬೀಸಿದ ತಂಗಾಳಿಯಿಂದ ಬಾಗುತ್ತಿದ್ದ ಹೂಗಳು ತಲೆಯಲ್ಲಾಡಿಸಿ ನಮ್ಮನ್ನು ಕನ್ನಡ ನಾಡಿಗೆ ಸ್ವಾಗತಿಸಿದಂತೆ ಭಾಸವಾಯಿತು. ಅಷ್ಟರಲ್ಲಿ ಹೊಸಪೇಟೆ ತಲುಪಿತು ಎಂದು ತಿಳಿದಾಗ ನಮ್ಮೆಲ್ಲರ ಮುಖದಲ್ಲಿ ಕಿರುನಗೆ ಅರಳಿತು. ನಾವು ತಂಗುವ ವಸತಿಯನ್ನು ಮುಂಗಡವಾಗಿಯೇ ಬುಕ್ಕಿಂಗ್‌ ಮಾಡಲಾಗಿತ್ತು.

ಲಾಡಿjಗೆ ತೆರಳಿದ ನಾವು ಬೇಗ ಬೇಗನೇ ರೆಡಿಯಾಗಿ ಹಂಪಿಗೆ ತೆರಳಲು ಹಪಹಪಿಸುತ್ತಿ¨ªೆವು. ಲಾಡಿjನ ಪಕ್ಕದಲ್ಲಿ ಹೂಕಟ್ಟುತ್ತಿದ್ದ ವ್ಯಕ್ತಿ “ನಿಮುª ಯಾವೂರು?’ ಎಂದಾಗ “ನಾವು ಕೇರಳದ ಕಾಸರಗೋಡಿನವರು’ ಎಂದೆವು. ಅದನ್ನು ಕೇಳಿದ ಆತ ಆಶ್ಚರ್ಯಚಕಿತನಾಗಿ, “ಮತ್ತೆ ಕನ್ನಡ ಮಾತಾಡ್ತಿದ್ದೀರಲ್ಲ’ ಎಂದಾಗ “ನಮುª ಗಡಿನಾಡು. ನಾವೂ ಕನ್ನಡಾಂಬೆಯ ಮಕ್ಕಳೇ’ ಎಂದು ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದೆವು. ಗಡಿನಾಡಿನ ಕನ್ನಡವನ್ನು ಉಸಿರಾಡುವ ಭಾಷಾ ಅಲ್ಪಸಂಖ್ಯಾಕರ ಬಗ್ಗೆ ಅವರಿಗೆ ತಿಳಿದಿಲ್ಲ ಎಂದು ತೋರಿತು. ಹೊಸಪೇಟೆಯಲ್ಲಿ ಹೆಚ್ಚಾಗಿ ಸರ್ಕಾರಿ ಬಸ್ಸುಗಳೇ ಓಡಾಡುತ್ತಿದ್ದವು. ನೋಡನೋಡುತ್ತಿದ್ದಂತೆ ಹೆಂಗಸೊಬ್ಬರು ಬುಲೆಟ್‌ ಓಡಿಸುತ್ತ ಹೋದದ್ದು ವಿಶೇಷ ಅನುಭವವಾಗಿತ್ತು, ಹಾಗೆಯೇ ಕಾರು-ಬಸ್ಸುಗಳ ಭರಾಟೆಯ ನಡುವೆಯೂ ಸೈಕಲ್‌ ಮತ್ತು ಎತ್ತಿನಗಾಡಿಗಳಂತಹ ಇಂಧನರಹಿತ ವಾಹನಗಳು ನುಗ್ಗುತ್ತಿದ್ದವು. ಹೊಸಪೇಟೆಯ ಅನುಭವಗಳನ್ನು ತನ್ನದಾಗಿಸಿದ ಮನಸ್ಸು ಹಂಪಿಯ ಕಡೆಗೆ ವಾಲಿತು. 

ಹಂಪಿಯಲ್ಲಿ ಕ್ಷಣ
ಹಂಪಿಯು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಐತಿಹಾಸಿಕ ಪ್ರೇಕ್ಷಣೀಯ ಸ್ಥಳ ಹೊಸಪೇಟೆಯಿಂದ ಹಂಪಿಗೆ ಕಡ್ಡಿರಾಂಪುರ ಮತ್ತು ಕಮಲಾಪುರ ಮಾರ್ಗವಾಗಿ ಹೋಗಬಹುದು. ದಾರಿಯಂತೂ ಸುತ್ತಿಬಳಸಿದ್ದಾಗಿತ್ತು. ದೂರದಲ್ಲಿ ಒಂದರ ಮೇಲೊಂದರಂತೆ ವ್ಯವಸ್ಥಿತವಾಗಿದ್ದ ಬೃಹದಾಕಾರದ ಬಂಡೆಗಲ್ಲುಗಳ ಸಮೂಹವು ವಿಚಿತ್ರವಾಗಿದ್ದು ಮುಗಿಲನ್ನು ಚುಂಬಿಸುವಂತೆ ತೋರುತ್ತಿತ್ತು. ಮಟ ಮಟ ಮಧ್ಯಾಹ್ನದ ಸಮಯ ಉರಿಬಿಸಿಲಿಗೆ ನಾವು ಕಂಡದ್ದು ಬಂಡೆಗಲ್ಲುಗಳನ್ನು ಮಾತ್ರ. ಅಲ್ಲಿಂದ ಮಾರ್ಗದರ್ಶಿಗಳ ನೇತೃತ್ವದಲ್ಲಿ ನಮ್ಮ ಯಾನವು ಉಗ್ರನರಸಿಂಹನತ್ತ ಸಾಗಿತು.  ಹಂಪಿಯಲ್ಲಿರುವ ಎಲ್ಲ ಮೂರ್ತಿಗಳಿಗಿಂತಲೂ ಬೃಹದಾಕಾರದ ಮೂರ್ತಿ ಇದಾಗಿತ್ತು. ಇದು ಸಾವಿರದ ಐನ್ನೂರಇಪ್ಪತ್ತೆಂಟರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಓರ್ವ ಬ್ರಾಹ್ಮಣನಿಂದ ನಿರ್ಮಿಸಲ್ಪಟ್ಟಿತು. ತೊಡೆಯ ಮೇಲೆ ಲಕ್ಷ್ಮೀಯ ವಿಗ್ರಹವಿದ್ದು ವಿಜಯನಗರದ ಕೊನೆಯ ಯುದ್ಧದಲ್ಲಿ ಮುಸ್ಲಿಂಮರ ದಾಳಿಗೆ ತುತ್ತಾಗಿ ವಿಕೃತಗೊಂಡಿದೆ. ನರಸಿಂಹನ ಹಿಂದೆ ಬೃಹದಾಕಾರದ ಪ್ರಭಾವಳಿ, ತಲೆಯ ಹಿಂದೆ ಹೆಡೆಬಿಚ್ಚಿದ ಸರ್ಪವಿದ್ದು ವಿಗ್ರಹದ ಅನೇಕ ಭಾಗಗಳು ಭಗ್ನಗೊಂಡಿದೆ.ಉಗ್ರನರಸಿಂಹನ ಮೂರ್ತಿಯ ಪಕ್ಕದಲ್ಲಿಯೇ ಒಂದು ಮಂಟಪದಲ್ಲಿ ಕರಿಯ ಕಲ್ಲಿನಿಂದ ನಿರ್ಮಿಸಲಾದ ಲಿಂಗವಿದೆ. ಈ ಲಿಂಗವನ್ನು ಬಡವಿಲಿಂಗ ಎಂಬುದಾಗಿ ಕರೆಯುತ್ತಾರೆ. ಇದರ ಅರ್ಧಭಾಗ ವರ್ಷದ ಮುನ್ನೂರರುವತ್ತೈದು ದಿನಗಳೂ ಕೂಡಾ ನೀರಿನಿಂದ ಆವೃತವಾಗಿರುತ್ತದೆ.

ನಮ್ಮೊಂದಿಗೆ ಕೆಲವು ಸೆಲ್ಫಿ ಹುಚ್ಚರಿದ್ದರು. ಮಟ ಮಟ ಮಧ್ಯಾಹ್ನ ಉರಿಬಿಸಿಲನ್ನೂ ಲೆಕ್ಕಿಸದೆ ಸೆಲ್ಫಿ ತೆಗೆಯುತ್ತಿದ್ದುದರಿಂದ ನಡೆದಾಟವು ನಿಧಾನವಾಗುತ್ತಿತ್ತು. ನಂತರ ನಾವು ಕಂಡದ್ದು ಸಾಸಿವೆಕಾಳು ಗಣಪನ ಬೃಹದಾಕಾರದ ಮೂರ್ತಿಯನ್ನು. ಹಿಂದೆ ಸಾಸಿವೆ ವ್ಯಾಪಾರಕ್ಕೆಂದು ವಿಜಯನಗರಕ್ಕೆ ಬಂದಂತಹ ವ್ಯಾಪಾರಿಯೊಬ್ಬ ತಾನು ಗಳಿಸಿದ ಲಾಭದ ಹಣದಿಂದ ಈ ಗಣಪತಿಯ ಮೂರ್ತಿಯನ್ನು ನಿರ್ಮಿಸಿರುವುದಾಗಿ ನಮ್ಮೊಂದಿಗಿದ್ದ ಗೈಡ್‌ ವಿವರಿಸಿದರು. ಅನಂತರ ವಿಶಾಲವಾದ ಕಮಲಾಪುರ ಕೆರೆ ದಾಟಿ ಕಮಲಮಹಲ್‌ನತ್ತ ಹೆಜ್ಜೆ ಹಾಕಿದಾಗ ನಾವು ಕಂಡದ್ದು ಮಹಾನವಮಿ ದಿಬ್ಬ ಎಂದು ಕರೆಯಲ್ಪಡುವ ಕಲ್ಲಿನ ವೇದಿಕೆಯನ್ನು. ಶ್ರೀಕೃಷ್ಣದೇವರಾಯನು ಒರಿಸ್ಸಾವನ್ನು ಗೆದ್ದ ನಂತರ ಅದರ ಸವಿನೆನಪಿಗಾಗಿ ಇದನ್ನು ಕಟ್ಟಿಸಿದನೆಂದು ತಿಳಿದು ಬರುತ್ತದೆ. ನವರಾತ್ರಿ ಉತ್ಸವದ ಒಂಭತ್ತು ದಿವಸಗಳ ಕಾಲವೂ ಈ ದಿಬ್ಬದಲ್ಲಿ ಅನೇಕ ತರದ ನೃತ್ಯ ವೈವಿಧ್ಯ, ನಾಟಕ ಮೊದಲಾದಂಥ‌ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದುವಂತೆ. ಮುಂದೆ ನಾವು ವೀಕ್ಷಿಸಿದ್ದೇ ಕಮಲಮಹಲ್‌. ಕಮಲಮಹಲನ್ನು ಲೋಟಸ್‌ ಮಹಲ್‌ ಎಂದೂ, ಚಿತ್ರಾಂಗಿಣಿ ಮಹಲ್‌ ಎಂಬುದಾಗಿಯೂ ಕರೆಯುತ್ತಾರೆ. ತಳಭಾಗವು ಹಿಂದೂ ಶೈಲಿಯನ್ನೂ, ಮಧ್ಯಭಾಗ ಜೈನ ಧರ್ಮ ಶೈಲಿಯನ್ನೂ, ತುದಿಯು ಮುಸ್ಲಿಂ ಧರ್ಮ ಶಿಲ್ಪಕಲಾ ಶೈಲಿಯನ್ನೂ ಹೊಂದಿದ್ದು ನಮ್ಮೆಲ್ಲರ ಚಿತ್ತವನ್ನು ಆಕರ್ಷಿಸಿತು.ಇಂದಿಗೂ ಅಚ್ಚಳಿಯದೆ ಸುಭದ್ರವಾಗಿರುವಂತಹ ಹನ್ನೊಂದು ಕೊಠಡಿಗಳನ್ನೊಳಗೊಂಡ ಗಜಶಾಲೆಯು ಚಿತ್ತಾಕರ್ಷಕವಾಗಿದ್ದು ಪ್ರವಾಸಿಗರನ್ನು ಕೈಬೀಸಿ ತನ್ನೆಡೆಗೆ ಕರೆಯುತ್ತಿತ್ತು. 

ಇನ್ನೊಮ್ಮೆ ಬರುವೆ
ಮಧ್ಯಾಹ್ನದೂಟವನ್ನು ಮುಗಿಸಿದ ಮೇಲೆ ಬಸ್ಸು ವಿರೂಪಾಕ್ಷ ದೇವಾಲಯದತ್ತ ಹೊರಟಿತು. ವಿರೂಪಾಕ್ಷ ದೇವಾಲಯದಿಂದ ಒಂದು ಕಿ. ಮೀ. ದೂರದಲ್ಲಿ ಬಸ್ಸು ನಿಂತಿತು. ಅದರಿಂದಾಚೆ ಬಸ್ಸು ಹೋಗುವಂತಿರಲಿಲ್ಲ. ಕಾಲ್ನಡಿಗೆಯಲ್ಲಿ ಹೊರಟಿತು ನಮ್ಮ ಪಯಣ. ಅಲ್ಪಸ್ವಲ್ಪ ಆಯಾಸಪಟ್ಟು ಗೆಳತಿಯರೊಂದಿಗೆ ಹರಟೆ ಹೊಡೆಯುತ್ತ ನಡೆವಾಗಿನ ಖುಷಿಯೇ ಬೇರೆ. ಒಂದು ಕಿ.ಮೀ ನಡೆದದ್ದು ತಿಳಿಯಲೇ ಇಲ್ಲ. ಅಲ್ಲಿ ನಾವು ಕಂಡದ್ದು ಭವ್ಯವಾಗಿ ಎತ್ತರವಾಗಿ ಕಂಗೊಳಿಸುವ ಗೋಪುರ. ಈ ಗೋಪುರ ಹನ್ನೊಂದು ಅಂತಸ್ತುಗಳಿಂದ ಕೂಡಿದೆ. ವಿರೂಪಾಕ್ಷನನ್ನು ಪಂಪಾಪತಿ ಎಂದು ಕರೆಯುವುದು ವಾಡಿಕೆ.

ಹಂಪಿಯಲ್ಲಿರುವಂಥ ಎಲ್ಲ ದೇವಾಲಯಗಳಿಗಿಂತಲೂ ಪ್ರಸಿದ್ಧವೂ ಪ್ರಾಚೀನವೂ ಆದ ಈ ದೇವಾಲಯದ ಬಾಗಿಲು ಸೊಗಸಾದ ಕೆತ್ತನೆಯಿಂದ ಕೂಡಿದೆ. ಒಳ ಪ್ರವೇಶಿಸಿದಾಗ ಗರ್ಭಗುಡಿಯಲ್ಲಿ ಕಂಗೊಳಿಸುವುದೇ ವಿರೂಪಾಕ್ಷ ಮೂರ್ತಿ. ಅದೇ ರೀತಿ ಜಗದ್ವಿಖ್ಯಾತ ಶಿಲಾರಥವು ನಮ್ಮನ್ನು ತನ್ನೆಡೆಗೆ ಆಕರ್ಷಿಸಿತು. ಶಿಲಾರಥದಲ್ಲಿ ಸೈನಿಕರು, ಬೇಟೆಗಾರರು, ಸವಾರರು ಇವರ ಚಿತ್ರವನ್ನು ಬಿಡಿಸಲಾಗಿದೆ. ನಯನ ಮನೋಹರ ಶಿಲಾರಥವನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದೆವು.ಅಲ್ಲೇ ಬಳಿಯಲ್ಲಿದ್ದಂತಹ ನಾಟ್ಯಮಂಟಪದ ಕಲ್ಲಿನ ಕಂಬಗಳಿಗೆ ಕೈಯಿಂದ ಬಡಿದು ಮಾರ್ಗದರ್ಶಿಗಳು ವಿಧ ವಿಧವಾದ ಇಂಪಾದ ಸಂಗೀತನಾದವನ್ನು ಹೊರಡಿಸಿದಾಗ ಪುಳಕಿತರಾದ ನಾವು ಒಂದು ಕ್ಷಣ ಮೂಕವಿಸ್ಮಿತರಾದೆವು.

ಅಷ್ಟು ಹೊತ್ತಿಗಾಗಲೇ ದಿನಕರನು ಪಶ್ಚಿಮ ದಿಕ್ಕಿನ ಮನೆಯೊಳಗೆ ಮರೆಯಾಗಲು ಅಣಿಯಾಗುತ್ತಿದ್ದನು. ನಾವು ಹಿಂತಿರುಗಬೇಕಾದದ್ದು ಅನಿವಾರ್ಯವಾಗಿತ್ತು. ಮುಸ್ಸಂಜೆಯ ಹೊತ್ತಲ್ಲಿ ತಣ್ಣನೆಯ ತಂಗಾಳಿಯು ಬೀಸುತ್ತಿರಲು ನಾವು ಬಸ್ಸಿನ ಬಳಿ ತಲುಪಿದೆವು. ನಿಜಹೇಳಬೇಕೆಂದರೆ ಹಂಪಿಯಲ್ಲಿ ನೋಡತಕ್ಕಂತಹ ಸ್ಥಳಗಳು ಬಹಳಷ್ಟಿದ್ದರೂ ಸಮಯದ ಅಭಾವ ಆ ಭಾಗ್ಯವನ್ನು ನಮ್ಮಿಂದ ಕಿತ್ತುಕೊಂಡಿತು.
ವಿಜಯನಗರ ಸಾಮ್ರಾಜ್ಯದ ವೈಭವ ಒಂದು ಗಳಿಗೆಯಲ್ಲಿ ನೋಡಿಮುಗಿಸುವಂಥದ್ದಲ್ಲ. ಒಂದು ಕಾಲದಲ್ಲಿ ವಿಜಯನಗರದ ರಾಜಧಾನಿಯಾಗಿ ಮೆರೆದು ದೇಶ-ವಿದೇಶ ವ್ಯಾಪಾರಿಗಳಿಂದ ತುಂಬಿ ತುಳುಕಿದ ಆ ಮಹಾನಗರ ಇಂದು ಬರಡಾದುದನ್ನು  ಕಂಡು ಮನಸ್ಸಿಗೆ ಬೇಸರವಾಯಿತು. ಇತಿಹಾಸದ ಸುಗಂಧವನ್ನು ಬೀರುತ್ತಿರುವ ಹಂಪಿಯ ಪವಿತ್ರ ಮಣ್ಣನ್ನು ಬಿಟ್ಟು ಬಸ್ಸು ನಮ್ಮನ್ನು ಹೊತ್ತು ಮುಂದೆ ಸಾಗಿತು. ನಾನೊಮ್ಮೆ ಹಿಂತಿರುಗಿ ನೋಡಿದೆ. ದೂರದಲ್ಲಿ ಬಂಡೆಕಲ್ಲುಗಳ ಸಾಲು ದಿಬ್ಬಣ ಹೊರಟಂತೆ ಶೋಭಿಸುತ್ತಿತ್ತು. ನಾನು ಮನದಲ್ಲೇ, ಇನ್ನೊಮ್ಮೆ ಬರುವೆ ಈ ಹಂಪಿಯನ್ನು ಸಂಪೂರ್ಣವಾಗಿ ಕಂಡು ಅದರ ಹಿಂದಿನ ಇತಿಹಾಸವನ್ನು ಅರಿಯಲು ಎಂದು ಹೇಳಿ ಹಂಪಿಗೆ ವಿದಾಯ ಹೇಳಿದೆನು.                                                                                                                                    
ತೇಜಶ್ರೀ ಪ್ರಥಮ ಪತ್ರಿಕೋದ್ಯಮ,  ವಿ.ವಿ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.