ಇದು ನಿನ್ನ ಜತೆ ಕಳೆದ ಖುಷಿಯ ಕ್ಷಣಗಳಿಗಾಗಿ ಫ್ರೆಂಡ್‌!


Team Udayavani, May 18, 2018, 6:00 AM IST

k-14.jpg

ಕೆಲವರು ತಂಪಾದ ಗಾಳಿಯಲ್ಲಿ  ನವಿರಾದ ಗಂಧದ ಹಾಗೆ ಬಾಳಿನಲ್ಲಿ ಬರುತ್ತಾರೆ. ಮುಂದೊಂದು ದಿನ ಆ ಗಾಳಿ ಮತ್ತೆ ಬೀಸುತ್ತದೋ ಇಲ್ಲವೋ ಎಂಬುದು ಬಹು ದೊಡ್ಡ ಕುತೂಹಲವಾಗಿರುತ್ತದೆ. ಆದರೆ, ಆ ಮಧುರ ಗಂಧದ ನೆನಪು ಜೀವನವಿಡೀ ನೆನಪಿಸುತ್ತವೆ. ನನ್ನತ್ತ ಸುಳಿದ ಗಾಳಿಯಲ್ಲಿದ್ದದ್ದು ನೀನೇ ಕಣೋ !

ಅಂದು ಕಾಲೇಜಿಗೆ ಬರುವಾಗ ನೀನು ನನ್ನ ಪಕ್ಕ ಕೂರದಿದ್ದರೆ ಇಷ್ಟೆಲ್ಲಾ ಆಗುತ್ತಲೇ ಇರಲಿಲ್ಲವೇನೋ. ನಾನು ಮನೆಯಿಂದ ಹಾಸ್ಟೆಲ್‌ಗೆ ಬರುತ್ತಿದ್ದೆ. ಕೈಯಲ್ಲಿ ಮಣಭಾರದ ಲಗೇಜು. ಪಿಟಿಪಿಟಿ ಮಳೆ ಬೇರೆ. ಅಂತೂ ಇಂತೂ ಜ್ಯೋತಿ ಸ್ಟಾಪ್‌ಗೆ ಬಂದು ನಿಂತಿದ್ದೆ. ಪಕ್ಕ ನೀನೂ ನನ್ನ ಥರಾನೇ ಲಗೇಜಿನೊಂದಿಗೆ ನಿಂತಿದ್ದೆ. ಅಲ್ಲಿ ತುಂಬಾ ಕಾಲೇಜು ಹುಡುಗರಿದ್ದರೂ ನೀನು ಎಲ್ಲರಂತಿರಲಿಲ್ಲ. ಆಚೆಈಚೆ ನೋಡುತ್ತ ನಿನ್ನ ಮುಖ ನೋಡಿಬಿಟ್ಟೆ. ಆ ಕ್ಷಣವೇ ನಿನ್ನ ಮುಖದಲ್ಲಿ ಮೂಡಿದ ಮುಗುಳ್ನಗು ನೋಡಿ ಖುಷಿಯಾಗಿಬಿಟ್ಟಿತು. ನಂಗೇನು ಗೊತ್ತಿತ್ತು, ಆ ಖುಷಿ ಎಂದೂ ಮರೆಯಾಗಲ್ಲ ಅಂತ. ನಗುವಿನ ನಂತರ ಮಾತುಕತೆ ಆರಂಭವಾಗುವುದು ಇದ್ದದ್ದೇ. ಹಾಗೇ ಹರಟುತ್ತಾ ಇಬ್ಬರೂ ಹೊರಟಿದ್ದು ಉಡುಪಿಗೆ ಎಂದು ತಿಳಿಯಿತು. ಬಸ್ಸು ಬಂದೊಡನೆ ನೀನು ನನ್ನ ಲಗೇಜು ಎತ್ತಿಕೊಂಡು ಓಡಿಬಿಟ್ಟೆ. ನಾನು ದಂಗಾಗಿ ನೋಡಿದರೆ ಅದನ್ನು ಬಸ್ಸಿನೊಳಗಿಟ್ಟು ನಕ್ಕು ಕರೆದೆ ನೀನು. 

ಮಧ್ಯಾಹ್ನ ಹೊತ್ತು ಬೇರೆ. ನಿನ್ನ ಪಕ್ಕ ಇರದೆ ಬೇರೆ ಸೀಟಿನಲ್ಲಿ ಇದ್ದಿದ್ದರೆ ನಾನಂತೂ ಗಾಢ ನಿದ್ರೆಯಲ್ಲಿ ಮುಳುಗಿರುತ್ತಿ¨ªೆ. ಆದರೆ ನೀನು ಇದ್ದೆ ಅಲ್ವಾ. ಆ ಎಕ್ಸ್‌ ಪ್ರಸ್‌ನ ಕಿಟಕಿಯಿಂದ ಬೀಸುತ್ತಿದ್ದ ಗಾಳಿಗೆ ಹಾರುತ್ತಿದ್ದ ಮುಂಗುರುಳನ್ನು ನೋಡಿ “ನೀವು ಹುಡುಗಿಯರಿಗೆ ಯಾವಾಗಲೂ ಇದೇ ಹೆವಿ ಡ್ನೂಟಿ’ ಎಂದು ನೀ ನಕ್ಕಿ¨ªೆ. ಫಿಟ್‌ ಜೀನ್ಸ್‌, ಕೆಂಪು ಟೀಶರ್ಟಿನೊಂದಿಗೆ ಗ್ಲಾಸ್‌ ಹಾಕಿದ್ದ ನಿನ್ನನ್ನು ನೋಡಿದರೆ ಪುಸ್ತಕ ಓದುವ ಅಭಿರುಚಿ ಇದ್ದಂತೆ ಕಾಣುತ್ತಿರಲಿಲ್ಲ. ಆದರೆ, ನೀನು ಬ್ಯಾಗಿನಿಂದ ಚೇತನ್‌ ಭಗತ್‌ನ ಪುಸ್ತಕ ಹೊರತೆಗೆದಾಗ ನನ್ನನ್ನು ನಾನೇ ನಂಬಲಾಗಲಿಲ್ಲ. ಅದರೊಳಗಿದ್ದ ಪುಟ ಹೊಳೆವ ಹಳದಿ ಗುಲಾಬಿಗಳ ಬಕ್‌ಮಾರ್ಕ್‌, ನೀನು ನಮ್ಮ ಗೆಳೆತನದ ನೆನಪಿಗಾಗಿ ಕೊಟ್ಟಿದ್ದು, ಇನ್ನೂ ನನ್ನ ಟೆಕ್ಸ್ಟ್ ಬುಕ್ಕುಗಳ ಒಳಗೆ ಇರುತ್ತದೆ. ಅದನ್ನು ನೋಡಿದಾಗ ತಪ್ಪದೆ ನಿನ್ನ ನೆನಪಾಗುತ್ತದೆ.

ಸೇತುವೆ ಬರುವವರೆಗೆ ನಾವಿಬ್ಬರೂ ಒಂದೊಂದು ಪುಸ್ತಕದಲ್ಲಿ ಮುಳುಗಿ¨ªೆವು. ಸೇತುವೆಯ ಮೇಲೆ ಬಸ್ಸಿನ ಸ್ಪೀಡು ಹೆಚ್ಚಾದಾಗ ಬಸಬಸನೆ ಬಂದ ಗಾಳಿಗೆ ನಾವಿಬ್ಬರೂ ಕಿಟಕಿಯ ಗಾಜನ್ನು ಪೂರ್ತಿ ತೆಗೆದು ತಲೆ ಒಡ್ಡಿದ್ದು, ತಿಂದ ಲೇಸಿನ ಕೊನೆಯ ಪೀಸಿಗಾಗಿ ಕಿತ್ತಾಡಿದ್ದು, ಎರಡೇ ಗಂಟೆಗಳಲ್ಲಿ ವರ್ಷಗಟ್ಟಲೆ ಜತೆಗಿದ್ದವರ ತರ ಆಗಿಬಿಟ್ಟಿತ್ತು.

ನಮ್ಮ ಪಕ್ಕ ಕುಳಿತಿದ್ದ ಆಂಟಿ ತಮ್ಮ ಬಸ್ಸನಲ್ಲಿ ಹೊಸ ಪ್ರೇಮಕತೆ ಶುರುವಾಯಿತು ಅಂದುಕೊಂಡಿದ್ದರು. ಅವರು ಕದ್ದು ಕದ್ದು ನಮ್ಮ ಮಾತುಗಳನ್ನು ಆಲಿಸುತ್ತಿದ್ದುದನ್ನು ನೋಡಿ ನಾವು ಬೇಕೆಂದೇ ಹುಚ್ಚುಹುಚ್ಚಾಗಿ ಆಡಿದ್ದೆವು. ಅವರು ಇಳಿದುಹೋದ ಮೇಲಂತೂ ನಾವು ನಕ್ಕಿದ್ದ ಕ್ಕೆ ಪಾರವೇ ಇರಲಿಲ್ಲ. 

ಇನ್ನೂ ಅರ್ಧ ಗಂಟೆ ಬಾಕಿಯಿತ್ತು. ನೀನು ಕೈಯಲ್ಲಿ ಹಿಡಿದ ರೆಡ್ಮಿ ಮೊಬೈಲ್‌ ನನಗೆ ನೆನಪಾದದ್ದು ನಾನು ಮೊಬೈಲ್‌ ಬಿಟ್ಟು ಬಂದ ವಿಷಯ. ಇಯರ್‌ಫೋನು ಸಿಕ್ಕಿಸಿಕೊಳ್ಳುತ್ತಿದ್ದಾಗ ಈಚೆ ನೋಡಿ “ಬೇಕಾ’ ಎಂದು ಕೇಳಿದಾಗ ನನಗೆ ಸಂಕೋಚವಾಗಿತ್ತು. ಅದನ್ನು ಅರ್ಥಮಾಡಿಕೊಂಡು ನೀನು ನಕ್ಕು ನನ್ನ ಕೈಗೆ ಕೊಟ್ಟುಬಿಟ್ಟೆ. ಹಾಡು ಕೇಳುತ್ತ ಯಾವಾಗ ನಿನ್ನ ಹೆಗಲಮೇಲೆ ನಿದ್ದೆಹೋದೆನೋ ಗೊತ್ತಿಲ್ಲ. ಎಲ್ಲೋ ನಡುವಲ್ಲಿ ನೀನು ಮತ್ತೆ ಅದನ್ನು ಇಸ್ಕೊಂಡದ್ದು ಅಷ್ಟೇ ನೆನಪು. ನಂತರ ಉಡುಪಿ ಬಸ್‌ಸ್ಟಾಂಡ್‌ ನಂತರವೇ ಎಚ್ಚರವಾಗಿದ್ದು. ಎದ್ದು ನೋಡಿದರೆ ನೀನಿರಲಿಲ್ಲ.  ಇಳಿದಿರಬೇಕು. ನಿದ್ರೆಯಿಂದ ಎಬ್ಬಿಸಿ “ಬಾಯ್‌’ ಆದರೂ ಮಾಡಬಹುದಿತ್ತು. ಅಷ್ಟರಲ್ಲಿ ನನ್ನ ಸ್ಟಾಪ್‌ ಬಂತು. ಬ್ಯಾಗ್‌ ಹಾಕಿಕೊಳ್ಳೋಣವೆಂದು ಹೊರಟರೆ ಬ್ಯಾಗಿನಲ್ಲಿ ಒಂದು ಸ್ಟೈಲೀ ಇತ್ತು. ಒಂದು ವಾಕ್ಯದೊಂದಿಗೆ : ಇದು ನಿನ್ನ ಜತೆ ಕಳೆದ ಖುಷಿಯ ಕ್ಷಣಗಳಿಗಾಗಿ ಫ್ರೆಂಡ್‌. ಅದನ್ನು ನೋಡಿದಾಗಲೆಲ್ಲಾ ಅದೇ ತರ ಮುಖದಲ್ಲಿ ಒಂದು ಫ್ರೆಂಡ್ಲಿ ಸ್ಟೈಲ್‌ ಮೂಡುತ್ತದೆ.
 
ಅಪರ್ಣಾ ಬಿ. ವಿ . ತೃತೀಯ ಬಿಎಸ್ಸಿ,  ಎಂಜಿಎಂ ಕಾಲೇಜು, ಉಡುಪಿ

ಟಾಪ್ ನ್ಯೂಸ್

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.