ಪ್ರೀತಿಯೊಳಗೆ ಭವಿಷ್ಯವೂ ಅಡಗಿರಬೇಕು


Team Udayavani, Jul 20, 2018, 6:00 AM IST

x-15.jpg

ಪ್ರೀತಿ ಎಂಬುದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ ಎಂಬುದು ಸತ್ಯ. ಮನಸ್ಸುಗಳ ವಿಶಿಷ್ಟ ಆಕರ್ಷಣೆ, ಅಂದರೆ ಸೌಂದರ್ಯ, ನಡವಳಿಕೆ, ನಾಯಕತ್ವ ಗುಣ ಹಾಗೂ ಇನ್ನಿತರ ನಾನಾ ಚಲನವಲನಗಳಿಂದ ಮನಸ್ಸಿಗೆ ಖುಷಿ ಕೊಡುವಂಥ ಕೆಲವೊಂದು ಆಕರ್ಷಣೆಗಳಿಂದ ಮನಸ್ಸು ಪರಿವರ್ತನೆ ಹೊಂದಿ ವಯಸ್ಸಿನ ದೋಷದಿಂದಲೋ ಹುಡುಗ-ಹುಡುಗಿಯರ ನಡುವೆ ಪ್ರೀತಿ ಉದ್ಭವವಾಗುತ್ತದೆ.

ಕಾಲೇಜು ಮೆಟ್ಟಿಲೇರಿದ ನಂತರ ಹುಡುಗ-ಹುಡುಗಿಯರ ಮನಸ್ಸುಗಳು ತಲ್ಲಣಗೊಳ್ಳುತ್ತದೆ. ಕೆಲವರು, ಯಾರಿಗಾದರೂ ನನ್ನ ಮೇಲೆ ಪ್ರೀತಿ ಇದೆಯೋ ಅಥವಾ ನನಗೆ ಮಾತ್ರ ಆತನಲ್ಲಿ ಪ್ರೀತಿ ಇದೆಯೋ ಎಂಬಂತೆ, ಉತ್ತರ ಇಲ್ಲದ ಸಂಶಯ ಅವರನ್ನು ಕಾಡುತ್ತಲೇ ಇರುತ್ತದೆ. ಕೆಲವು ಹುಡುಗಿಯರಿಗೆ ಹುಡುಗರ ನಡವಳಿಕೆಗಳು ಖುಷಿ ಎಂದು ಅನಿಸಿದರೆ ಅವರನ್ನು ನೋಡುವ, ಮಾತನಾಡುವ ಹಂಬಲ ಅವರಲ್ಲಿ ಇರುತ್ತದೆ. ಆದರೆ, ಯಾರಲ್ಲೂ ಹೇಳಿಕೊಳ್ಳುವುದಿಲ್ಲ. ಹುಡುಗರು ಪಕ್ಕನೆ ತಮ್ಮ ಗೆಳೆಯರೊಡನೆ ಇಂತಹ ವಿಷಯವನ್ನು ಹೇಳಿಯೇ ಬಿಡುತ್ತಾರೆ. ಅದೇನು ಆತುರವೋ ಅಥವಾ ಮನಸ್ಸನ್ನು ಹಿಡಿದಿಟ್ಟುಕೊಳ್ಳಲಾಗದೆಯೋ ಎರಡು ಮನಸ್ಸುಗಳು ಒಂದಾಗಿ ಪ್ರೀತಿ ಎಂಬ ಬಲೆಗೆ ಬಿದ್ದುಬಿಡುತ್ತಾರೆ.

ಮನಸ್ಸುಗಳು ಒಂದಾಗಿ, ಪ್ರೇಮಾಂಕುರ ಆದ ಸ್ವಲ್ಪ ದಿನಗಳ ನಂತರ ಪ್ರೀತಿ ಹೆಚ್ಚಾಗಿ ಇಬ್ಬರಿಗೂ ಒಂದು ದಿನವೂ ಬಿಟ್ಟಿರಲಾಗದಷ್ಟು ಪ್ರೀತಿ ಉಂಟಾಗ‌ುತ್ತದೆ. ನೀನಿಲ್ಲದೆ ನಾನಿಲ್ಲ ಎಂಬ ಭಾವನೆಯೂ ಬರುತ್ತದೆ. ಆದರೆ, ಅವರಿಗೆ ಅಲ್ಲಿ ಎದುರಾಗುವ ಮುಖ್ಯ ಸಮಸ್ಯೆ ಎಂದರೆ, ಮನೆಯಲ್ಲಿ ಏನನ್ನುತ್ತಾರೋ ಎಂಬ ಭಯ. ಅನ್ಯಧರ್ಮ, ಅನ್ಯಜಾತಿ ಆದರೆ, ಸಮಾಜದವರು, ಮನೆಯವರು ನಮ್ಮ ಪ್ರೀತಿಯನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂಬ ಚಿಂತೆ. ಎಲ್ಲವೂ ಆಕಸ್ಮಿಕವಾಗಿ ಮನಸ್ಸಿನ ಇಚ್ಛೆಗೆ ಅನುಗುಣವಾಗಿ ನಡೆದುಹೋಗಿರುತ್ತದೆ. ಇನ್ನು ಕೆಲವು ಹುಡುಗರಿಗೆ, ಹುಡುಗಿಯ ಮನೆಯವರು ತನ್ನನ್ನು ಒಪ್ಪಿಕೊಳ್ಳಬಹುದೆ ಅಥವಾ ಆಸ್ತಿ-ಅಂತಸ್ತನ್ನು ಗಮನಿಸುತ್ತಾರೋ, ತಮಗೆ ಉದ್ಯೋಗ ಸಿಕ್ಕದೇ ಹೋದಲ್ಲಿ ನಿರಾಕರಿಸಬಹುದೆ, ಎಂಬ ಆಲೋಚನೆಗಳು ತಲೆಯಲ್ಲಿ ಸುತ್ತುತ್ತವೆ. ಇದು ಸಹಜ. ಹೆಚ್ಚಿನವರಿಗೆ ಮನೆಯಲ್ಲಿ ನಮ್ಮ ಪ್ರೀತಿಯ ವಿಷಯವನ್ನು ಪ್ರಸ್ತಾಪಿಸುವುದು ಹೇಗೆ? ಇದು ಅಸಾಧ್ಯವಾದ ಮಾತು ಎಂಬ ಆಲೋಚನೆಗಳು ಕಾಡುತ್ತವೆ.

ಪ್ರೀತಿ-ಪ್ರೇಮದ ಬಲೆಗೆ ಬೀಳುವ ಮೊದಲು ಎಲ್ಲರೂ ತಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕಾಗುತ್ತದೆ. ಓದುತ್ತಿರುವಾಗಲೇ ಉದ್ಯೋಗದ ಕಡೆಗೂ ಗಮನಹರಿಸಬೇಕು. ಏನಾದರೂ ಸಾಧನೆ ಮಾಡಬೇಕು, ಓದುತ್ತಿರುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ನಡೆಸಬೇಕು. ಓದು ಮುಗಿದ ತಕ್ಷಣ ಯಾವುದಾದರೂ ಸರಿ, ಉದ್ಯೋಗ ಸಿಕ್ಕಿದರೆ ಅದಕ್ಕೆ ಹೋಗಿಬಿಡಬೇಕು. ಹೀಗೆ, ಮಾಡುವುದರಿಂದ ಭವಿಷ್ಯದ ಕನಸು ನನಸಾಗಲು ಸಾಧ್ಯ. ಜತೆಗೆ ತಾವು ಬಯಸಿದವರೂ ಕೂಡ ಸಿಗುತ್ತಾರೆ.

ಇಂದಿನ ಸಮಾಜದಲ್ಲಿ ಓದು ಮುಗಿದ ತತ್‌ಕ್ಷಣ ಹುಡುಗಿಯನ್ನು ಅವಳು ಪ್ರೀತಿ ಮಾಡಿದ್ದಾಳೆ ಎಂಬ ಕಾರಣಕ್ಕಾಗಿ ಯಾವನಾದರೂ ಒಬ್ಬ ಸಾಮಾನ್ಯ ಹುಡುಗನಿಗೆ ಕೊಡಲು ಒಪ್ಪುವುದಿಲ್ಲ. ಹುಡುಗನ ಗುಣನಡತೆ, ಉದ್ಯೋಗ ಎಲ್ಲವನ್ನೂ ನೋಡುತ್ತಾರೆ. ಆದ್ದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೀತಿ-ಪ್ರೇಮದ ಮೊದಲು ವಾಸ್ತವ ಬದುಕಿನ‌ ಅರಿವು ಇರಬೇಕಾಗುತ್ತದೆ. ಪ್ರೀತಿ ಮಾಡುವುದು ತಪ್ಪೇನೂ ಅಲ್ಲ, ಆದರೆ, ಪ್ರೀತಿಸಿದ್ದೇ ಆದರೆ, ಮುಂದೆ ಜೊತೆಯಾಗಿ ಬಾಳುವ ಗಟ್ಟಿ ನಿರ್ಧಾರವೂ ಅಷ್ಟೇ ಮುಖ್ಯ.

ಶ್ರೀಕಾಂತ್‌, ತೃತೀಯ ಬಿ.ಕಾಂ. ವಿವೇಕಾನಂದ ಪದವಿಪೂರ್ವ ಕಾಲೇಜು, ಪುತ್ತೂರು.

ಟಾಪ್ ನ್ಯೂಸ್

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.