ಒಂದು ವರ್ಷದ ಸುಂದರ ಪಯಣ!


Team Udayavani, Aug 24, 2018, 6:00 AM IST

college-life-55.jpg

ನನ್ನ ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಬಂದ ತಕ್ಷಣ ನನ್ನ ತಂದೆಯವರು “ನೀನು ಯಾವ ಕಾಲೇಜಿಗೆ ಹೋಗುತ್ತಿಯಾ?’ ಎಂದು ಕೇಳದೆ “ನೀನು ಗೋವಿಂದದಾಸ ಕಾಲೇಜಿಗೆ ಹೋಗು’ ಎಂದು ಆದೇಶಿಸಿದ್ದರು. ನಾನು ಯಾವ ಕಾಲೇಜು ಹೋಗುವುದು ಎಂದಾಗ ಮೊದಲಿಗೆ ನೆನಪಾದದ್ದೇ ಈ ಕಾಲೇಜು. 

ಅಪ್ಪ ಸೂಚಿಸಿದ್ದೂ ಅದೇ ಕಾಲೇಜು. ಹತ್ತಿರವಿರುವ ಕಾಲೇಜಿಗೇ ಹೋಗುವುದು ಒಳ್ಳೆಯದೆಂದೆನಿಸಿ ಒಪ್ಪಿಕೊಂಡೆ. ಮೇ ತಿಂಗಳಲ್ಲಿ ಪ್ರವೇಶಾತಿ ಸಹ ಆಯಿತು. ಜೂನ್‌ 9ರಂದು ಕಾಲೇಜಿಗೆ ಬರಲು ಹೇಳಿದ್ದರು. ಅಂದು ಕಾಲೇಜಿಗೆ ಹೋದೆ. ಗೆಳತಿ ಶಿವರಂಜನಿಗೆ ಹಿಂದಿನ ದಿನವೇ ಫೋನ್‌ ಮಾಡಿ, ನನಗಾಗಿ ಕಾಯುವಂತೆ ತಿಳಿಸಿದ್ದೆ. ಆಕೆ ಅದನ್ನು ಚಾಚೂತಪ್ಪದೆ ಪಾಲಿಸಿದ್ದಳು. ನನಗೋಸ್ಕರ ಕಾಲೇಜಿನ ಗೇಟಿನ ಹತ್ತಿರ ಆಕೆ ಕಾಯುತ್ತಿದ್ದದ್ದನ್ನು ನೋಡಿ ನಿಧಾನವಾಗಿದ್ದ ನನ್ನ ಕಾಲುಗಳ ವೇಗ ಹೆಚ್ಚಾಯಿತು. ಆನಂತರ ನಾವಿಬ್ಬರೂ ಕಾಲೇಜಿನ ಒಳಬಂದೆವು. ಅಲ್ಲಿ ನಮಗೆ ಕಾಲೇಜಿನ ಬಗ್ಗೆ ಒಂದಷ್ಟು ವಿಷಯಗಳನ್ನು ತಿಳಿಸಿದ ಬಳಿಕ ನಾವು ಯಾವ ಸೆಕ್ಷನ್‌ ಸೇರಬೇಕೆಂದೂ ಹೇಳಿ ನಮ್ಮನ್ನು ಹೊರಬಿಟ್ಟರು.

ಮರುದಿನ ಎಲ್ಲರೂ ಸಮವಸ್ತ್ರ ಧರಿಸಿ ಬಂದಿದ್ದರು. ಗೆಳತಿ ಚಿರಶ್ರೀಯ ದರ್ಶನವೂ ಆಯಿತು. ಕ್ಲಾಸ್‌ಗೆ ಹೋಗಿ ನಾನು ಎಲ್ಲಿ ಕೂರಲಿ ಎಂದು ಅವಳಲ್ಲಿ ಕೇಳಿದಾಗ, “ಎಲ್ಲಿ ಬೇಕೋ ಅಲ್ಲಿ ಕೂರು’ ಎಂದು ಆಕೆಯ ಉತ್ತರ. ನಾನು ಅವಳ ಪಕ್ಕದಲ್ಲೇ ನನ್ನ ಬ್ಯಾಗ್‌ ಇಳಿಸಿ ಕುಳಿತೆ. ಎದುರಿನ ಬೆಂಚ್‌ನಲ್ಲಿ ಗೆಳತಿ ವಿಶಾಲಾಳೂ ಇದ್ದಳು. ಅವಳಲ್ಲಿ ಮಾತನಾಡಬೇಕು ಎಂದು ಕ್ಲಾಸ್‌ನಿಂದ ಹೊರಬಂದೆವು. ಅಷ್ಟರಲ್ಲಿ ಗಂಟೆಯ ಶಬ್ದ ಕಿವಿಗೆ ಬಿತ್ತು. ಎಲ್ಲರೂ ನಮ್ಮ ನಮ್ಮ ಜಾಗವನ್ನು ಅಲಂಕರಿಸಿದೆವು. 

ಮೊದಲ ದಿನ ನಗುಮುಖ ಇಟ್ಟುಕೊಂಡು ಬಂದದ್ದು ಸದಾ ನಗುಮುಖದ ಗಾಯತ್ರಿ ಮೇಡಂ. ಅಂದಿನ ಕ್ಲಾಸ್‌ಗಳೆಲ್ಲ ಮುಗಿದು ಸಂತೋಷದಿಂದಲೇ ಮನೆ ಸೇರಿದೆ. ಕೆಲವು ದಿನಗಳ ಬಳಿಕ ನಮ್ಮ ಕಾಲೇಜಿನಲ್ಲಿ ಮತದಾನ ನಡೆಯಿತು. ಇಲೆಕ್ಷನ್‌ಗೆ ಆಕಾಶ್‌ ಮತ್ತು ಅನ್ವಿತಾ ನಿಂತಿದ್ದರು. ಇವರಿಬ್ಬರೂ “ವೋಟ್‌ ಫಾರ್‌ ಅನ್ವಿತಾ, ವೋಟ್‌ ಫಾರ್‌ ಆಕಾಶ್‌’ ಎಂದು ಗುಂಪು ಮಾಡಿಕೊಂಡು ಕಾಲೇಜಿನ ಕ್ಯಾಂಪಸ್‌ನಲ್ಲಿ  ಓಡಾಡುತ್ತಾ ಮತಕ್ಕಾಗಿ ಯಾಚಿಸುತ್ತಿದ್ದರು. ಕಡೆಗೂ ಮತದಾನ ಮುಗಿಯಿತು. 

ಮತ್ತೆ ನಮ್ಮ ದಿನನಿತ್ಯದ ಚಟುವಟಿಕೆಗಳು ಎಂದಿನಂತೆ ಶುರುವಾದವು. ನನ್ನ ಸ್ನೇಹಿತರ ಬಳಗವೂ ದಿನೇದಿನೇ ಹೆಚ್ಚಾಗುತ್ತಾ ಹೋಯಿತು. ನಿಧಿ, ಜೀವಿತಾ, ರಚನಾ ಎಲ್ಲರೂ ನನಗೆ ತುಂಬಾ ಹತ್ತಿರವಾದರು. ನಾವು ಯಾವುದೇ ಸ್ಪರ್ಧೆಯಿದ್ದರೂ ಒಟ್ಟಿಗೆ ಭಾಗವಹಿಸುತ್ತಿದ್ದೆವು. ಎಲ್ಲರೂ ಸೇರಿ ತಮಾಷೆ ಮಾಡುತ್ತಿದ್ದೆವು. ಅವರೊಂದಿಗೆ ಕಳೆದ ಒಂದೊಂದು ಕ್ಷಣಗಳೂ ಅತಿ ಮಧುರ! ಹೀಗೆ ಒಂದು ವರ್ಷ ಹೇಗೆ ಕಳೆಯಿತು ಎಂದೇ ತಿಳಿಯಲಿಲ್ಲ. ವಾರ್ಷಿಕ ಪರೀಕ್ಷೆಯೂ ಆಯಿತು.  ಇನ್ನು ಮುಂದೆ ನಾವೇ ಸೀನಿಯರ್ ! ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆಲ್ಲ ಬೈ ಬೈ ಹೇಳಿ ಅವರ ಸ್ಥಾನ ತುಂಬಿದ್ದೆವು. ಈ ಒಂದು ವರ್ಷದ ಸುಂದರ ಪಯಣ ಮರೆಯಲಾಗದ ಒಂದು ಸುಮಧುರ ನೆನಪು.

– ಅಪೇಕ್ಷಾ ಶೆಟ್ಟಿ
ದ್ವಿತೀಯ ಪಿಯುಸಿ
ಗೋವಿಂದದಾಸ ಪ.ಪೂ. ಕಾಲೇಜು, ಸುರತ್ಕಲ್‌

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.