CONNECT WITH US  

ಬದಲಾಗುತ್ತಿರುವ ಉದ್ಯೋಗ ಲೋಕ !

ಸಾಂದರ್ಭಿಕ ಚಿತ್ರ.

ಯುವಜನಾಂಗದಲ್ಲಿ ಶಿಕ್ಷಣದ ಜ್ಞಾನ ಸಾಕಷ್ಟಿದ್ದರೂ, ಕೌಶಲದ ಕೊರತೆಯಿಂದ ಕೆಲವೊಂದು ಸಂದರ್ಭದಲ್ಲಿ ಉದ್ಯೋಗ ಸೌಲಭ್ಯ ಕೈತಪ್ಪಿ ಹೋಗುತ್ತಿವೆ. ಅಲ್ಲದೆ, ಸಮಾಜದಲ್ಲಿ ಕಂಡುಬರುವ ಲಂಚಬಾಕತನ ಮುಗ್ಧ ಜನರನ್ನು ಉದ್ಯೋಗದಿಂದ ವಂಚಿತರನ್ನಾಗಿ ಮಾಡುತ್ತಿದೆ.

ಹರಕು ಅಂಗಿ, ಕೆದರಿದ ತಲೆಗೂದಲು, ಚಪ್ಪಲಿಲ್ಲದ ಸವೆದ ಪಾದ, ಒರಟಾದ ಮುಖ, ನೋಡುವಾಗಲೇ ಭಯವಾಗುವುದು ಸಹಜ. ಸಮಾಜ ಅಂತಹ ವ್ಯಕ್ತಿಯನ್ನು ಕಾಣುವ ಬಗೆಯೇ ಬೇರೆ. ಈಗಂತೂ ತಾಂತ್ರಿಕ ಯುಗದಲ್ಲಿ ನಿರುದ್ಯೋಗಿಗಳ ಪಟ್ಟಿ ಹೆಚ್ಚಿದೆ. ಕೆಲಸ ಮಾಡಲು, ಬೇಡುವ ಪರಿಸ್ಥಿತಿ ಬಂದೊದಗಿದೆ. ಇನ್ನು ಕೆಲವು ಜನರು ಬೇಡುವುದನ್ನೇ ತಮ್ಮ ಕಸುಬು ಎಂದು ಜೀವನ ಸಾಗಿಸುತ್ತಿದ್ದಾರೆ. ಅಮೆರಿಕದಂಥ ದೇಶಗಳಲ್ಲಿ ಜನರನ್ನು ಬಡತನ ರೇಖೆಯಿಂದ ಮುಕ್ತರನ್ನಾಗಿಸಲು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಇನ್ನೂ ಕೋಟಿಗಟ್ಟಲೆ ಜನರನ್ನು ತನ್ನ ಒಡಲಲ್ಲಿ ಇರಿಸಿಕೊಂಡಿರುವ ಭಾರತ ದೇಶ ಬಡತನ ಮುಕ್ತವಾಗಲು ಸಾಧ್ಯವೆ? ಸಾಧ್ಯ. ಯಾವಾಗ ಎಂದರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಂಡಾಗ. 

ಸರ್ಕಾರದ ಯೋಜನೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತ, ಜನರ ಬೇಡಿಕೆಗಳನ್ನು ಸುಲಲಿತವಾಗಿ ಈಡೇರಿಸುತ್ತಾ, ಉದ್ಯೋಗಾಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ.  ಹಾಗಾಗಿ, ಅದೆಷ್ಟೋ ಜನರು ಭಿûಾಟನೆಯ ನೆಪದಲ್ಲಿ ಸಾಮಾನ್ಯ ಜನರಿಗೆ ಮೋಸ ಮಾಡಿ, ಕನಿಕರ ಬರುವಂತೆ ನಾಟಕವಾಡಿ ಹಣವನ್ನು ಪಡೆದುಕೊಂಡು ಯಾರದೋ ಕೈ ಕೆಳಗೆ ಆಟವಾಡುವ ಗೊಂಬೆಗಳಾಗಿ ಬಿಡುತ್ತಾರೆ.

ಸಮಸ್ಯೆಗಳಿರದ ಮನುಷ್ಯ ಈ ಜಗತ್ತÇÉೇ ಇರಲಾರನು ಹಾಗೆಯೇ, ಕಷ್ಟಗಳು ಬಂದಾಗ ಅದನ್ನು ಎದುರಿಸಿ ನಿಂತು ಹೋರಾಡಬೇಕೇ ಹೊರತು, ಮರೆಯಲ್ಲಿ ನಿಂತು ಸುಲಭದ ಹಾದಿಯತ್ತ ಹೋಗುವುದಲ್ಲ. ದುಡಿತದಲ್ಲಿ ಮೈ ಕೆಸರಾದರೂ ಪರವಾಗಿಲ್ಲ, ನಾವು ಹಾಕಿದ ಶ್ರಮ ವ್ಯರ್ಥವಾಗದಿದ್ದರೆ ಸಾಕು. ಅದಕ್ಕಾಗಿ, ಹಲವು ಬಾರಿ ಯೋಚಿಸಿ ಚಿಂತನೆ ನಡೆಸಬೇಕು. ಭಿಕ್ಷೆ ಎಂದರೆ ಕಳಂಕವಲ್ಲ ಆದರೆ ಅದುವೇ ಜೀವನಕ್ಕೆ ಕಳಂಕವಾಗದಂತೆ ನೋಡಿಕೊಳ್ಳಬೇಕು. 

ಭಾರತದ ಮಹಾನ್‌ ಭಿಕ್ಷುಕ ಎಂದೇ ಹೆಸರುವಾಸಿಯಾದ ಮದನ ಮೋಹನ ಮಾಳವೀಯ ಇವರು, ಒಂದು ದಿವಸ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಒಬ್ಬ ಸಾತಿಯಲ್ಲಿ ಕಬೀರನ ದೋಹೆಗಳನ್ನು ಹೇಳಲು ಇಚ್ಛಿಸುತ್ತಾರೆ. ಆಗ ಆ ಸಾಹಿತಿ ಹೇಳಿದ ದೋಹೆಗೆ ಮನಸೋತ ಮಾಳವೀಯ ಇವರು, ಪ್ರಾಣ ಹೋದರೂ ಪರವಾಗಿಲ್ಲ, ಇನ್ನೊಬ್ಬರ ಮುಂದೆ ಕೈಯೊಡ್ಡಿ ನಿಲ್ಲಬಾರದು. ಭಿಕ್ಷೆ ಮಹಾಪಾಪ. ಆದರೆ, ಪರಮಾರ್ಥಕ್ಕಾಗಿ ಬೇರೆಯವರಲ್ಲಿ ಬೇಡುವಂತಹ ಪರಿಸ್ಥಿತಿ ಬಂದೊದಗಿದರೂ ಅದಕ್ಕಾಗಿ ನಾಚಿಕೆಯಿಂದ ತಲೆತಗ್ಗಿಸುವುದು ತಪ್ಪಲ್ಲ. ಏಕೆಂದರೆ, ಒಳ್ಳೆಯ ಕೆಲಸಕ್ಕಾಗಿ ಭಿಕ್ಷೆ ತಪ್ಪಲ್ಲ ಎಂಬ ಮಾತು ಅವರ ಮನದಲ್ಲಿ ಬಹಳ ಗಾಢವಾಗಿ ಆಲೋಚಿಸುವಂತೆ ಮಾಡುತ್ತದೆ. ಇದೇ ವ್ಯಕ್ತಿ ಹಗಲಿರುಳು ಶ್ರಮಿಸಿ ಶ್ರದ್ಧೆಯಿಂದ ಕೆಲಸ ಮಾಡಿದ ಈ ವ್ಯಕ್ತಿಯ ಜೀವನ ಇದೀಗ ಇತಿಹಾಸದ ಪುಟಗಳಲ್ಲಿ ನಾವಿಂದು ಓದುವ ಮಟ್ಟಿಗೆ ಬೆಳೆದಿರುತ್ತಾರೆ. ಹೀಗೆಯೇ, ಕೆಲವೊಂದು ತಿರುವುಗಳು ನಮ್ಮ ಬದುಕನ್ನೇ ಬದಲಾಯಿಸಬಹುದು ಅದಕ್ಕಾಗಿ, ಕಾಯಬೇಕು, ದುಡಿಯಬೇಕು.

- ಲಿಖೀತಾ ಗುಡ್ಡೆಮನೆ
ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ,

ವಿವೇಕಾನಂದ ಕಾಲೇಜು, ಪುತ್ತೂರು


Trending videos

Back to Top