ನಾವು ಮಂಜೇಶ್ವರಕ್ಕೆ ಹೋದೆವು!

Team Udayavani, Oct 12, 2018, 6:00 AM IST

z-13.jpg

ನಾವು ಶನಿವಾರದಂದು ಮಂಜೇಶ್ವರಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಅಂದು ನಾವು 36 ಮಂದಿ ವಿದ್ಯಾರ್ಥಿಗಳು ಮತ್ತು ಇಬ್ಬರು ಅಧ್ಯಾಪಕರು ಇದ್ದೆವು. ಎಂಟು ಗಂಟೆಗೆ ನಾವು ಉಜಿರೆಯಿಂದ ಹೊರಟೆವು. ಉಜಿರೆಯಿಂದ ಮಂಗಳೂರಿಗೆ ಎರಡೂವರೆ ಗಂಟೆ ಬೇಕಿತ್ತು. ನಾವು ಬಸ್ಸಿನಲ್ಲಿ ಹಾಡುವುದು, ಕುಣಿಯುವುದು- ಹೀಗೆ ಸಮಯವನ್ನು ಕಳೆಯುತ್ತ 11 ಗಂಟೆಗೆ ಮಂಗಳೂರಿಗೆ ತಲುಪಿದೆವು. ಬಸ್ಸಿನಿಂದ ಇಳಿದು ಸ್ವಲ್ಪ ನಡೆದು ನಾವು 70 ಕ್ಕಿಂತ ಹೆಚ್ಚು ವರ್ಷ ಇತಿಹಾಸವಿರುವ ಗ್ರಂಥಾಲಯಕ್ಕೆ ಹೋದೆವು. ಬಹಳ ಸುಂದರವಾದ ಗ್ರಂಥಾಲಯವಾಗಿತ್ತು ಅದು. ಅಲ್ಲಿ ಇದ್ದ ಅಧ್ಯಾಪಕರ‌ ಪರಿಚಯವಾಯಿತು. ಅವರು ಕಿಟೆಲ್‌ ನಿಘಂಟು ಬಗ್ಗೆ ಮಾಹಿತಿ ನೀಡಿದರು. ಹಿಂದಿನ ಕಾಲದಲ್ಲಿ ಕಲ್ಲಿನ ಬರಹ ಮತ್ತು ತಾಳೆಗರಿ ಬರಹ ಹೆಚ್ಚಾಗಿ ಕಂಡುಬರುತ್ತಿತು. ಕಲ್ಲಿನಲ್ಲಿ ಬರೆದು ಅದನ್ನು ಅಚ್ಚು ಮಾಡುತ್ತಿದ್ದರು. ಹೆಚ್ಚಾಗಿ ಚಿತ್ರಗಳ ಬಳಕೆ ಮಾಡುತ್ತಿದ್ದುದರಿಂದ ಇದಕ್ಕೆ ವಿಚಿತ್ರ ವರ್ತಮಾನ ಸಂಘವೆಂದು ಕರೆಯುತ್ತಾರೆ. ಅಲ್ಲಿ ಮಂಗಳೂರು ಸಮಾಚಾರ್‌ ವೃತ್ತಪತ್ರಿಕೆ ನೋಡಿದೆವು. ವೃತ್ತಪತ್ರಿಕೆಯು ವಾರಕ್ಕೊಮ್ಮೆ ಬರುವ ಪತ್ರಿಕೆಯಾಗಿತ್ತು. ಹೀಗೆ ಒಂದು ಗಂಟೆ ಅಲ್ಲಿ ಕಳೆದದ್ದೇ ಗೊತ್ತಾಗಲಿಲ್ಲ. 

ಮಂಜೇಶ್ವರದ ಬಸ್ಸು ಹಿಡಿದು ಬಸ್ಸಿನಿಂದ ಇಳಿದು ಗೋವಿಂದ ಪೈಯವರ ಮನೆಗೆ 10 ನಿಮಿಷದ ಮಾರ್ಗವಿತ್ತು. ಪೈಯವರ ಮನೆಗೆ ತೆರಳಿದ್ದೆವು. ಬಹಳ ಸುಂದರವಾದ ಮನೆಯಾಗಿತ್ತು.  ಅಲ್ಲಿ ಕೂಡ ಒಬ್ಬರು ಸರ್‌ ಅವರ ಪರಿಚಯವಾಯಿತು. ಆ ಮನೆಯ ಒಳಗೆ ಪೈಯವರ ಮೂರ್ತಿ ಇತ್ತು. ಇವರನ್ನು ಕನ್ನಡದ ಮೊದಲ ರಾಷ್ಟ್ರಕವಿ ಎಂದು ಕರೆಯುತ್ತಾರೆ. ಇವರಿಗೆ 22 ಭಾಷೆಗಳು ಬರುತ್ತಿದ್ದವು. ಚಿಕ್ಕ ವಯಸ್ಸಿನಲ್ಲಿ ಕವನಗಳನ್ನು ಬರೆದು ಪ್ರಶಸ್ತಿಗೆ ಪಾತ್ರರಾಗಿದ್ದರು. 

ಇವರ ಮನೆಯಲ್ಲಿ ಬರೆದ ಪುಸ್ತಕಗಳ ಕಾಣಲು ಸಿಗುವುದಿಲ್ಲ. ಯಾಕೆಂದರೆ, ಆ ಪುಸ್ತಕಗಳನ್ನು ಉಡುಪಿಯ ಸಂಶೋಧನಾ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿತ್ತು. ಅಲ್ಲಿ ಇಂತಹ ಕೆಲವೊಂದು ಮಾಹಿತಿಯನ್ನು ಪಡೆದು ನಂತರ ಮನೆಯ ಒಳಗೆ ಹೋದೆವು. ಒಂದು ಕೊಣೆಯಲ್ಲಿ ಯಕ್ಷಗಾನದ ಸಾಮಗ್ರಿಗಳನ್ನು ನೋಡಿದೆವು. ಅದನ್ನು ನೋಡುತ್ತ ನೋಡುತ್ತ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಕೊನೆಗೆ ಒಂದು ಗ್ರೂಪ್‌ ಫೊಟೊ ತೆಗೆದೆವು. ಇಲ್ಲಿ ನಾವು ಪಡೆದ ಅಮೂಲ್ಯವಾದ ಮಾಹಿತಿ ಹಾಗೂ ಕಳೆದ ಸಮಯದಿಂದ ಪೈಯವರು ಎಷ್ಟು ದೊಡ್ಡ ವಿದ್ವಾಂಸರೆಂದು ತಿಳಿದುಕೊಳ್ಳುವಂತಾಯಿತು. ಇದೊಂದು ಒಳ್ಳೆಯ ಅನುಭವ.
                                            
ನಿತೀಶ್‌ ಚಾರ್ಮಾಡಿ
ಎಸ್‌.ಡಿ.ಎಂ. ಕಾಲೇಜು, ಉಜಿರೆ

ಟಾಪ್ ನ್ಯೂಸ್

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.