ಸಮಸ್ಯೆ ಯಾರಿಗಿಲ್ಲ ಹೇಳಿ !

Team Udayavani, Nov 30, 2018, 6:00 AM IST

13.jpg

ಈ ಭೂಮಿ ಮೇಲಿರೋ ಪ್ರತಿಯೊಂದು ಜೀವಿಯೂ ತನ್ನದೇ ಆದ ಸಮಸ್ಯೆಯನ್ನು ದಿನನಿತ್ಯ ಎದುರಿಸುತ್ತಿರುತ್ತದೆ. ಅಂತಹುದರಲ್ಲಿ ಮನುಷ್ಯನಿಗೆ ಸಮಸ್ಯೆ ಬರುವುದು ಆಶ್ಚರ್ಯವಲ್ಲ. ಸಮಸ್ಯೆ ಬಂದಾಗ ಅದನ್ನು ಎದುರಿಸುವುದೇ ಎಲ್ಲಾ ಸಮಸ್ಯೆಗಳ ಮೊದಲ ಪರಿಹಾರ. ಆದರೆ, ಈಗಿನ ಜನಾಂಗದವರಿಗೆ ಎಲ್ಲ ಸಮಸ್ಯೆಗಳಿಗೂ ಸಾವೊಂದೇ ಪರಿಹಾರವಾಗಿಬಿಟ್ಟಿದೆ. ಇದು ನನ್ನ ಪ್ರಕಾರ ಅಕ್ಷರಶಃ ತಪ್ಪು. ಕೋಟಿಗಟ್ಟಲೆ ಹಣವನ್ನು ಬ್ಯಾಂಕ್‌ನಲ್ಲಿ ಇಡುವ ಶ್ರೀಮಂತನಿಂದ ಹಿಡಿದು ಒಂದು ಹೊತ್ತಿನ ಊಟಕ್ಕೂ ಕಷ್ಟಪಡೋ ಕೂಲಿ ಕಾರ್ಮಿಕನಿಗೂ ಸಮಸ್ಯೆಯಿರುತ್ತದೆ. 

ನಾನು ಮೊದಲೇ ಹೇಳಿದ ಹಾಗೆ ಸಮಸ್ಯೆಯೇ ಸಾಧನೆಯ ಮೊದಲ ಮೆಟ್ಟಿಲು. ಇವತ್ತು ಒಬ್ಬ ಮನುಷ್ಯ ದೊಡ್ಡ ವ್ಯಕ್ತಿಯಾಗಿ ಹೊರಹೊಮ್ಮಿದನೆಂದರೆ ಅದಕ್ಕೆ ಕಾರಣ ಅವನ ಸಮಸ್ಯೆಯೇ. ಇದಕ್ಕೆ ಮಾದರಿಯಾಗಿ ನಮ್ಮ ನೆಚ್ಚಿನ ವಿಜ್ಞಾನಿ ಅಬ್ದುಲ್‌ ಕಲಾಂರನ್ನು ತೆಗೆದುಕೊಳ್ಳೋಣ. ಕಲಾಂ ಅವರ ಬಗ್ಗೆ ತಿಳಿದಿರುತ್ತೀರಿ. ಆದರೆ, ಮತ್ತೆ ವಿವರಿಸಬೇಕಿದೆ. ಕಲಾಂರವರು ಒಂದು ಬಡ ಕುಟುಂಬದಿಂದ ಬಂದಂತಹ ವ್ಯಕ್ತಿ. ಕಿತ್ತು ತಿನ್ನುವ ಬಡತನವಿದ್ದರೂ ಅದನ್ನೆಲ್ಲ ಲೆಕ್ಕಿಸದೆ ಪೇಪರ್‌ ಮಾರಿಯಾದರೂ ವಿದ್ಯಾಭ್ಯಾಸವನ್ನು ಪೂರೈಸಿ ಕೊನೆಗೊಂದು ದಿನ ಭಾರತ ದೇಶ ಕಂಡ ಭಾರತದ ಕನಸುಗಾರರಾದರು. ಒಂದು ವೇಳೆ ಅವರನ್ನು ಆವರಿಸಿದ್ದ ಕಿತ್ತು ತಿನ್ನುವ ಬಡತನದಿಂದ ವಿದ್ಯಾಭ್ಯಾಸವನ್ನು ಬಿಟ್ಟು ಕೂಲಿ ಕೆಲಸಕ್ಕೊ ಅಥವಾ ವ್ಯಾಪಾರವನ್ನು ಮಾಡಿಕೊಂಡಿರುತ್ತಿದ್ದರೆ  ಇವತ್ತು ಅವರ ಹೆಸರು ಭಾರತೀಯರ ಮನದಲ್ಲಿ ಅಜರಾಮರವಾಗಿ ಉಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ತಾನು  ನನ್ನ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಛಲ ತೊಟ್ಟಿದ್ದರಿಂದ ವಿಜ್ಞಾನಿಯಾಗಿ ಹೊರಹೊಮ್ಮಿದರು. ಅದಕ್ಕೇ ಹೇಳಿದ್ದು  ಸಮಸ್ಯೆಗಳೇ ಸಾಧನೆಯ ಮೊದಲ ಮೆಟ್ಟಿಲು ಅಂತ. ಜೀವನವಿಡೀ ಸುಖದಲ್ಲಿದ್ದರೆ ಅದು ನಿಜವಾದ ಜೀವನ ಅಲ್ಲ. ಯಾವಾಗ ಸಮಸ್ಯೆಗಳು ಎದುರಾಗಿ ಅದಕ್ಕೆ ಪರಿಹಾರವನ್ನು ಹುಡುಕಿ ಮುಂದೆ ಸಾಗುತ್ತೇವೆಯೋ ಅದು ನಿಜವಾದ ಜೀವನವಾಗಿರುತ್ತದೆ. 

ಕೆಲವೊಮ್ಮೆ ಸಮಸ್ಯೆ ಬರುವುದಕ್ಕಿಂತ ಮೊದಲು ಪರಿಹಾರ ಬಂದಿರುತ್ತದೆ. ಅದನ್ನು ನಾವು ಗುರುತಿಸಬೇಕು. ಎಲ್ಲ ಸಮಸ್ಯೆಗೆ ಸಾವೇ ಪರಿಹಾರವಲ್ಲ. ಸಮಸ್ಯೆ ಬರುವುದು ಸಾಧನೆಗೆ ಮೆಟ್ಟಿಲಾಗಿಯೇ ಹೊರತು ತೊಂದರೆಯಾಗಿ ಅಲ್ಲ. ಅದನ್ನು ಮೊದಲು ಮನಗೊಳ್ಳಬೇಕಿದೆ.

ಇಫಾಜ್‌
ಪತ್ರಿಕೋದ್ಯಮ ವಿಭಾಗ, ಎಪಿಎಂ ಸರಕಾರಿ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.