ಯೂತ್ಫುಲ್ “ಆದಿ ಪುರಾಣ’: ಡಬಲ್ ಮೀನಿಂಗ್ ಟ್ರೈಲರ್ ವೀಕ್ಷಿಸಿ
Team Udayavani, Sep 30, 2018, 3:40 PM IST
ಕಿಸ್ಸಿಂಗ್ ಪೋಸ್ಟರ್ ಗಳ ಮೂಲಕವೇ ಸದ್ದು ಮಾಡುತ್ತಿರುವ “ಆದಿ ಪುರಾಣ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಡಬಲ್ ಮೀನಿಂಗ್ ಡೈಲಾಗ್ಗಳ ಮೂಲಕ ಸಿನಿರಸಿಕರನ್ನು ಸೆಳೆದಿದೆ. ಅಲ್ಲದೇ ಮುಂದಿನ ತಿಂಗಳ 5 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಮೂಲಕ ಶಶಾಂಕ್ ನಾಯಕನಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ರಂಗಭೂಮಿಯ ಹಲವು ಚಟುವಟಿಕೆಗಳಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ನಾನಾ ರೀತಿಯ ತರಬೇತಿ ಪಡೆದುಕೊಂಡು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶಶಾಂಕ್ ನಾಯಕನಾದರೆ, ಅಹಲ್ಯಾ ಸುರೇಶ್ ಮತ್ತು ಮೋಕ್ಷಾ ಕುಶಾಲ್ ನಾಯಕಿಯರು. ರಂಗಾಯಣ ರಘು ಗಂಭೀರವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಸಂಕಲನಕಾರ ಮೋಹನ್ ಕಾಮಾಕ್ಷಿ ನಿರ್ದೇಶಿಸುತ್ತಿದ್ದು, ಕಥೆ ಸಹ ಅವರದ್ದೇ. “ಮೆಲೋಡಿ’ ಮತ್ತು “ಪ್ರೀತಿ ಕಿತಾಬು’ ಚಿತ್ರಗಳನ್ನು ನಿರ್ಮಿಸಿದ್ದ ಶಮಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿಕ್ರಮ್ ವಸಿಷ್ಠ ಮತ್ತು ಚಂದನ ವಸಿಷ್ಠ ಸಂಗೀತ ಸಂಯೋಜನೆ ಸೇರಿದಂತೆ ಮಹೇಂದ್ರ ರಾವ್ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದ ಡಬಲ್ ಮೀನಿಂಗ್ ಟ್ರೈಲರ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ