“ಆ್ಯಂಗ್ರಿ ಯಂಗ್ ಮ್ಯಾನ್ ಲುಕ್ನಲ್ಲಿ ಅಂಬಿ’: ಸ್ಪೆಷಲ್ ಟೀಸರ್ ವೀಕ್ಷಿಸಿ
Team Udayavani, Jun 2, 2018, 5:20 PM IST
ಸುದೀಪ್ ಅವರ ಬ್ಯಾನರ್ನಲ್ಲಿ ತಯಾರಾಗಿರುವ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಸ್ಪೆಷಲ್ ಟೀಸರ್ ಬಿಡುಗಡೆಯಾಗಿದ್ದು, ಅಂಬರೀಶ್ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಟ್ಟಿದೆ ಚಿತ್ರತಂಡ. ಇನ್ನು ಟೀಸರ್ನಲ್ಲಿ ಅಂಬರೀಶ್ ಆ್ಯಂಗ್ರಿ ಯಂಗ್ ಮ್ಯಾನ್ ಲುಕ್ನಲ್ಲಿ ಮಿಂಚಿದ್ದು, ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದ್ದು, ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ. ಅಲ್ಲದೇ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶಿಸುತ್ತಿದ್ದು, ಸುದೀಪ್ ಜೊತೆ ಸಹಾಯಕರಾಗಿದ್ದ ಅವರಿಗೆ ಇದು ಮೊದಲ ಸಿನಿಮಾ. ಚಿತ್ರಕ್ಕೆ ಸುದೀಪ್ ಅವರ ಚಿತ್ರಕಥೆ ಇದೆ. ಜಾಕ್ ಮಂಜು ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಅಂಬರೀಶ್ ಜೋಡಿಯಾಗಿ ಸುಹಾಸಿನಿ ನಟಿಸುತ್ತಿದ್ದಾರೆ. ಅಂದಹಾಗೆ, “ಅಂಬಿ ನಿಂಗೆ ವಯಸ್ಸಾಯ್ತೋ’ ತಮಿಳಿನ “ಪಾ ಪಾಂಡಿ’ ಚಿತ್ರದ ರೀಮೇಕ್. ಅಲ್ಲಿ ರಾಜ್ಕಿರಣ್ ಮಾಡಿದ ಪಾತ್ರವನ್ನು ಇಲ್ಲಿ ಅಂಬರೀಶ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಂಬರೀಶ್ ಅವರ ಯೌವ್ವನದ ದಿನಗಳ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಜೆಬಿನ್ ಜಾಕೋಬ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದ ಸ್ಪೆಷಲ್ ಟೀಸರ್ ವೀಕ್ಷಿಸಿ.