CONNECT WITH US  

"ಅಮ್ಮ… ನನ್ನೀ ಜನುಮ… ನಿನ್ನ ವರದಾನವಮ್ಮ': ಎಮೋಷನಲ್ ಸಾಂಗ್ ವೀಕ್ಷಿಸಿ

ಚಿರಂಜೀವಿ ಸರ್ಜಾ ನಟಿಸಿರುವ ದ್ವಾರಕೀಶ್‌ ಚಿತ್ರದಡಿ ನಿರ್ಮಾಣವಾಗುತ್ತಿರುವ 51ನೇ ಚಿತ್ರವಾದ "ಅಮ್ಮಾ ಐ ಲವ್‌ ಯೂ' ಚಿತ್ರದ ಟೀಸರ್ ವಿಶ್ವ ಅಮ್ಮಂದಿರ ದಿನದಂದು ಬಿಡುಗಡೆಯಾಗಿ, ತಾಯಿಯ ಮಹತ್ವ, ಆಕೆಯ ಮೇಲೆ ಎಲ್ಲರೂ ಎಷ್ಟು ಅವಲಂಬಿತವಾಗಿದ್ದೇವೆ ಎಂಬ ಸಾರವನ್ನು ಟೀಸರ್‍ನಲ್ಲಿ ನೋಡಿದ ನೆನಪು ಮಾಸುವ ಮುನ್ನವೇ, ಇದೀಗ ಚಿತ್ರತಂಡ ಚಿತ್ರದ "ಅಮ್ಮ… ನನ್ನೀ ಜನುಮ… ನಿನ್ನ ವರದಾನವಮ್ಮ' ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಮತ್ತೊಮ್ಮೆ ನೋಡುಗರನ್ನು ಭಾವುಕರನ್ನಾಗಿಸಿದೆ. ಅಲ್ಲದೇ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಸುನೀಲ್ ಕಶ್ಯಪ್ ದನಿಯಲ್ಲಿ, ಗುರುಕಿರಣ್ ಸಂಗೀತದಲ್ಲಿ ಹಾಡು ಮೂಡಿಬಂದಿದೆ. ಇನ್ನು ಚಿತ್ರದಲ್ಲಿ ಚಿರು ತಾಯಿ ಪಾತ್ರದಲ್ಲಿ ಬಹುಭಾಷಾ ನಟಿ ಸಿತಾರಾ ಅಭಿನಯಿಸಿದ್ದು, ಚಿರುಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಅಲ್ಲದೇ ರವಿಕಾಳೆ ಸೇರಿದಂತೆ ಬಹಳಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರವು ತಮಿಳಿನ "ಪಿಚ್ಚೈಕಾರನ್' ರಿಮೇಕ್. ಎಲ್ಲಾ ತಾಯಂದಿರಿಗೂ ಈ ಚಿತ್ರವನ್ನು ಅರ್ಪಿಸಲಾಗಿದ್ದು, ತಾಯಿಯ ಮಹತ್ವ ಸಾರಿ ಭಾವುಕರನ್ನಾಗಿಸುವ ಹಾಡನ್ನು ವೀಕ್ಷಿಸಿ.

Back to Top