ಹೊಸತನದ “ಅಮ್ಮಚ್ಚಿಯೆಂಬ ನೆನಪು’: ಸೆಂಟಿಮೆಂಟ್ ಟ್ರೈಲರ್ ವೀಕ್ಷಿಸಿ
Team Udayavani, Oct 30, 2018, 3:37 PM IST
ಲೇಖಕಿ ವೈದೇಹಿ ಕಥೆಗಳನ್ನು ಆಧರಿಸಿರೋ “ಅಮ್ಮಚ್ಚಿಯೆಂಬ ನೆನಪು’ ಚಿತ್ರ ಸ್ಯಾಂಡಲ್ವುಡ್ನಲ್ಲಿ ಒಂದಲ್ಲ ಒಂದು ವಿಷಯಕ್ಕೆ ಗಮನ ಸೆಳೆಯುತ್ತಿದೆ. ಕಾದಂಬರಿ ಆಧಾರಿತವಾಗಿರೋ “ಅಮ್ಮಚ್ಚಿಯೆಂಬ ನೆನಪು’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅಮ್ಮಚ್ಚಿ ಪಾತ್ರದಲ್ಲಿ ವೈಜಯಂತಿ ಅಭಿನಯಿಸಿದ್ದು, ಖಳ ನಟನಾಗಿ “ಒಂದು ಮೊಟ್ಟೆಯ ಕಥೆ’ ಚಿತ್ರದ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಚಿತ್ರವನ್ನು ಪ್ರಕಾಶ್ ಪಿ ಶೆಟ್ಟಿ, ಗೀತಾ ಸುರತ್ಕಲ್, ವಂದನಾ ಇನಾಂದಾರ್, ಗೌರಮ್ಮ, ಕಲಾಕದಂಬ ಆರ್ಟ್ ಸೆಂಟರ್ ಅವರು ನಿರ್ಮಿಸಿದ್ದಾರೆ. ವೈದೇಹಿ ಅವರ ಕಥೆ, ಸಾಹಿತ್ಯ ಹಾಗೂ ಸಂಭಾಷಣೆಯಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ವೈಜಯಂತಿ ಅಡಿಗ, ಡಾ.ರಾಧಾಕೃಷ್ಣ ಉರಾಲ್, ದಿಯಾ ಪಲಕಲ್, ದೀಪಿಕಾ ಪಿ ಆರಾಧ್ಯ, ಶೃಂಗೇರಿ ರಾಮಣ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ. ಇನ್ನು ನಾಟಕಗಾರ್ತಿ ಚಂಪಾ ಪಿ ಶೆಟ್ಟಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ನವೆಂಬರ್ 1ರಂದು ಚಿತ್ರ ತೆರೆ ಕಾಣಲಿದೆ. ಚಿತ್ರದ ಸೆಂಟಿಮೆಂಟ್ ಟ್ರೈಲರ್ ವೀಕ್ಷಿಸಿ.