CONNECT WITH US  

ಅಪ್ಪು ಈಗ "ಅಂಜನಿಪುತ್ರ': ಭರ್ಜರಿ ಟ್ರೈಲರ್ ವೀಕ್ಷಿಸಿ

ಪುನೀತ್‌ ರಾಜಕುಮಾರ್‌ ಅಭಿನಯದ "ಅಂಜನಿಪುತ್ರ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಭರ್ಜರಿ ಹವಾ ಸೃಷ್ಟಿಸಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ ಟ್ರೈಲರ್ ಅನ್ನು ಮೂರು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಆಕ್ಷನ್‌ ಪ್ರಿಯರಲ್ಲಿ ಟ್ರೈಲರ್ ಕುತೂಹಲ ಹುಟ್ಟುಹಾಕಿದೆ. ಈ ಚಿತ್ರವನ್ನು ಎಂ.ಎನ್‌.ಕುಮಾರ್‌ ನಿರ್ಮಿಸಿದ್ದು, ಹರ್ಷ ನಿರ್ದೇಶಿಸಿದ್ದಾರೆ. ತಮಿಳಿನ ಪೂಜೈ ಚಿತ್ರದ ರಿಮೇಕ್‌ ಆಗಿರುವ ಚಿತ್ರದಲ್ಲಿ ಪುನೀತ್‌ಗೆ ತಾಯಿಯಾಗಿ ರಮ್ಯಾ ಕೃಷ್ಣ, ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ರವಿಶಂಕರ್‌ ಸೇರಿ ಹಲವು ಕಲಾವಿದರ ಅಭಿನಯವಿದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ. ಚಿತ್ರದ ಆಕ್ಷನ್‌ ಟ್ರೈಲರ್ ವೀಕ್ಷಿಸಿ.

Back to Top