“ಆ್ಯಪಲ್ ಕೇಕ್’ನ ಲವ್ಸ್ಟೋರಿ: ಸೂಪರ್ ಟ್ರೈಲರ್ ವೀಕ್ಷಿಸಿ
Team Udayavani, Oct 15, 2018, 5:19 PM IST
“ಆ್ಯಪಲ್ ಕೇಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಮಾಸ್ಟರ್ ಮೈಂಡ್ ಇಂಕ್ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಅರವಿಂದ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರಂಜಿತ್ಗೌಡ ಈ ಚಿತ್ರದ ನಿರ್ದೇಶಕರು. ಇದು ಇವರಿಗೆ ಮೊದಲ ಚಿತ್ರ. ಈ ಹಿಂದೆ “ಮದರಂಗಿ’ ಮತ್ತು ” ವಾಸ್ಕೋಡಗಾಮ’ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿದ್ದ ರಂಜಿತ್ಗೌಡ, ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ. ಬೆಂಗಳೂರು, ಮಂಗಳೂರು, ಹಾವೇರಿ, ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ವಿಜಯ್ ಶಂಕರ್, ಅರವಿಂದ್, ರಂಜಿತ್, ಕೃಷ್ಣ, ಶುಭಾ ರಕ್ಷಾ, ಚೈತ್ರಾ ಶೆಟ್ಟಿ, ರಂಗಸ್ವಾಮಿ, ಹರಿಚಂದ್ರ, ಆಂಜನಪ್ಪ, ಜ್ಯೋತಿ ಮೂರೂರು, ವಿಶಾಲ್,ಬಳ್ಳಾರಿ ಮಂಜು, ಶೈಲೇಶ್ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್ ಕಶ್ಯಪ್ ಸಂಗೀತವಿದೆ. ಎ.ಆರ್. ನಿರಂಜನ್ಬಾಬು ಛಾಯಾಗ್ರಹಣವಿದೆ. ವಿ ನಾಗೇಂದ್ರ ಪ್ರಸಾದ್, ಪ್ರಮೋದ್ ಆಚಾರ್ ಸಾಹಿತ್ಯ ರಚಿಸಿದ್ದಾರೆ. ವೇದಿಕ್ ವೀರ ಸಂಕಲನ ಮಾಡಿದರೆ, ಜಾಗ್ವಾರ್ ಸಣ್ಣಪ್ಪ ಸಾಹಸವಿದೆ. ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಚಿತ್ರದ ಸೂಪರ್ ಟ್ರೈಲರ್ ವೀಕ್ಷಿಸಿ.