CONNECT WITH US  

ಯೂಟ್ಯೂಬ್‌ನಲ್ಲಿ "ಏನಮ್ಮಿ ಏನಮ್ಮಿ' ಸದ್ದು: ಬ್ಯೂಟಿಫುಲ್ ಸಾಂಗ್ ವೀಕ್ಷಿಸಿ

ಸತೀಶ್‌ ನೀನಾಸಂ, ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ "ಅಯೋಗ್ಯ' ಚಿತ್ರ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದರೆ, ಇತ್ತ ಚಿತ್ರದ "ಏನಮ್ಮಿ ಏನಮ್ಮಿ' ಒರಿಜಿನಲ್ ವಿಡೀಯೋ ಸಾಂಗ್ ಬಿಡುಗಡೆಯಾಗಿದೆ. ಸದ್ಯ ಯೂಟ್ಯೂಬ್‌ನಲ್ಲಿ ಈ ಹಾಡು ಧೂಳೆಬ್ಬಿಸುತ್ತಿದ್ದು ಟ್ರೆಂಡಿಂಗ್‌ನಲ್ಲಿದೆ. ಈಗಾಗಲೇ ಚಿತ್ರ ಕೂಡಾ ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿ ಮುನ್ನುಗ್ಗುತ್ತಿದ್ದು, ಇದೇ ಸಂತಸದಲ್ಲಿ ಚಿತ್ರತಂಡ "ಏನಮ್ಮಿ ಏನಮ್ಮಿ' ಹಾಡಿನ ವಿಡಿಯೋ ಕೂಡಾ ಬಿಡುಗಡೆ ಮಾಡಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ "ಏನಮ್ಮಿ ಏನಮ್ಮಿ' ಹಾಡು ಎಲ್ಲರ ಬಾಯಲ್ಲೂ ತೇಲಿಬರ್ತಿತ್ತು. ಈ ಹಾಡಿಗೆ ಮನಸೋತು ಅದೆಷ್ಟೋ ಮಂದಿ ಡಬ್ ಸ್ಮ್ಯಾಶ್ ಮಾಡಿದ್ದರು. ಆದರೆ ಸದ್ಯ ಹಾಡಿನ ವಿಡಿಯೋ ಕೂಡಾ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಮೂರೇ ದಿನಕ್ಕೆ ಯೂಟ್ಯೂಬ್ ನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ. ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿರೋ ಬೆನ್ನಲ್ಲೇ ಯೂಟ್ಯೂಬ್‌ನಲ್ಲೂ ಹಾಡು ಕೂಡಾ ಟ್ರೆಂಡಿಗ್​ನಲ್ಲಿರೋದಕ್ಕೆ ಸಿನಿಮಾ ತಂಡ ಸಂತಸ ವ್ಯಕ್ತಪಡಿಸಿದೆ. ಇನ್ನು ಈ ಹಾಡಿಗೆ ಭರ್ಜರಿ ಚೇತನ್‌ ಸಾಹಿತ್ಯ ಬರೆದಿದ್ದು, ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆ, ವಿಜಯ್ ಪ್ರಕಾಶ್​ ಹಾಗೂ ಪಲಕ್​ ಮುಚ್ಚಲ್​ ಕಂಠಸಿರಿಯಲ್ಲಿ ಮೂಡಿಬಂದಿದೆ. ಚಿತ್ರಕ್ಕೆ ಯೋಗರಾಜ್‌ ಭಟ್‌ ಶಿಷ್ಯ ಮಹೇಶ್‌ ಕುಮಾರ್‌ ಕಥೆ ಬರೆದು ನಿರ್ದೇಶಿಸಿದರೆ, ಟಿ.ಆರ್‌. ಚಂದ್ರಶೇಖರ್‌ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೇ ಶರತ್ ಚಕ್ರವರ್ತಿ ಸಂಭಾಷಣೆ, ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದ್ದು, ಪ್ರೀತಮ್‌ ತೆಗ್ಗಿನಮನೆ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌. ಪೇಟೆ, ಸರಿತ, ರವಿಶಂಕರ್‌, ರಂಗಾಯಣ ರಘು, ತಬಲಾ ನಾಣಿ, ಸಾಧು ಕೋಕಿಲ, ಬುಲೆಟ್‌ ಪ್ರಕಾಶ್‌, ಕುರಿ ಪ್ರತಾಪ್‌ ಸೇರಿದಂತೆ ನಟಿಸಿದ್ದಾರೆ. ಚಿತ್ರದ ಬ್ಯೂಟಿಫುಲ್ ಸಾಂಗ್ ವೀಕ್ಷಿಸಿ.

Back to Top