CONNECT WITH US  

"ಭೈರವ ಗೀತಾ'ದ ಕ್ರೈಮ್‌ ಲವ್‌ಸ್ಟೋರಿ: ಭಯಾನಕ ಟ್ರೈಲರ್ ವೀಕ್ಷಿಸಿ

ಧನಂಜಯ್‌ ಖುಷಿಯಾಗಿದ್ದಾರೆ. ಮತ್ತೂಮ್ಮೆ ಅವರ ನಟನೆಗೆ, ಗೆಟಪ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. "ಟಗರು' ಚಿತ್ರದ ಡಾಲಿ ಪಾತ್ರದ ಮೂಲಕ ಹವಾ ಎಬ್ಬಿಸಿದ ಧನಂಜಯ್‌ಗೆ ಆ ಚಿತ್ರದಿಂದ ದೊಡ್ಡ ಬ್ರೇಕ್‌ ಸಿಕ್ಕಿದ್ದು ಸುಳ್ಳಲ್ಲ. ಅದರ ಬೆನ್ನಲ್ಲೇ ಧನಂಜಯ್‌ ಒಪ್ಪಿಕೊಂಡ ಸಿನಿಮಾ "ಭೈರವ ಗೀತಾ'. ರಾಮ್‌ಗೋಪಾಲ್‌ ವರ್ಮಾ ಅವರ ಶಿಷ್ಯ ಸಿದ್ಧಾರ್ಥ್ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗುತ್ತಿರುವ ಈ ಚಿತ್ರ ಫ‌ಸ್ಟ್‌ಲುಕ್‌ನಲ್ಲೇ ಸದ್ದು ಮಾಡಿತ್ತು. ಈಗ ಈ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಟ್ರೈಲರ್‌ ಬಿಡುಗಡೆಯಾಗಿದ್ದು, ಕನ್ನಡ ವರ್ಶನ್‌ ಅನ್ನು ಶಿವರಾಜಕುಮಾರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಚಿತ್ರದಲ್ಲಿ ಧನಂಜಯ್‌ ಮತ್ತೂಮ್ಮೆ ರಗಡ್‌ ಆಗಿ ಕಾಣಿಸಿಕೊಂಡಿದ್ದು, ಟ್ರೈಲರ್‌ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರ ರಾಶಿ ಕಂಬೈನ್ಸ್‌ ಹಾಗೂ ಕಂಪೆನಿ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿದೆ. ಹೆಸರಿಗೆ ತಕ್ಕಂತೆ ಇದೊಂದು ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿಯಾಗಿದ್ದು, ಪ್ರೀತಿಗಾಗಿ ಕ್ರೈಮ್‌ನತ್ತ ವಾಲುವ ಪ್ರೇಮಿಯೊಬ್ಬನ ಕಥೆಯನ್ನು ಹೊಂದಿದೆ. ಈ ನಡುವೆಯೇ ಸೂರಿ ನಿರ್ದೇಶನದ "ಪಾಪ್‌ಕಾರ್ನ್ ಮಂಕಿ ಟೈಗರ್‌' ಚಿತ್ರದಲ್ಲೂ ಧನಂಜಯ್‌ ನಾಯಕರಾಗಿ ನಟಿಸುತ್ತಿದ್ದಾರೆ. ಚಿತ್ರದ ಭಯಾನಕ ಟ್ರೈಲರ್ ವೀಕ್ಷಿಸಿ.

Back to Top