“ಬೀರ್ಬಲ್’ ಆದ ಶ್ರೀನಿ: ಬೊಂಬಾಟ್ ಥ್ರಿಲ್ಲರ್ ವೀಕ್ಷಿಸಿ
Team Udayavani, Dec 18, 2018, 3:02 PM IST
ಆರ್ಜೆ ಶ್ರೀನಿ ನಿರ್ದೇಶನದ “ಬೀರ್ಬಲ್’ ಟ್ರಯಾಲಜಿಯ “ಫೈಂಡಿಂಗ್ ವಜ್ರಮುನಿ’ ಚಿತ್ರ ಜನವರಿ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಇದೀಗ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಶ್ರೀನಿಯ ನೆಚ್ಚಿನ ಗುರು ರಿಯಲ್ ಸ್ಟಾರ್ ಉಪೇಂದ್ರ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. “ಟೋಪಿವಾಲ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಶ್ರೀನಿ. ಆ ನಂತರ “ಶ್ರೀನಿವಾಸ ಕಲ್ಯಾಣ’ ಚಿತ್ರದ ಮೂಲಕ ನಾಯಕ ನಟನಾದರು. ಈಗ “ಬೀರ್ಬಲ್’ ಟ್ರಯಾಲಜಿಗೂ ಶ್ರೀನಿ ನಾಯಕನಾಗಿದ್ದು, ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ. ಅಲ್ಲದೇ ಬಿಗ್ಬಾಸ್ ಮನೆಯಲ್ಲಿರುವ ಕವಿತಾ ಗೌಡ ಕೂಡ ಚಿತ್ರದಲ್ಲೊಂದು ಮುಖ್ಯ ಪಾತ್ರ ಮಾಡಿದ್ದಾರೆ. ಇನ್ನು “ಬೀರ್ಬಲ್’ ಟ್ರಯಾಲಜಿಯ ಮೊದಲ ಹಂತವಾಗಿ “ಫೈಂಡಿಂಗ್ ವಜ್ರಮುನಿ’ ಬಿಡುಗಡೆಗೆ ಸಜ್ಜಾಗಿದ್ದು, ಟ್ರೈಲರ್ಗೆ ಸಿನಿಪ್ರಿಯರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ನಡಿ ಟಿ.ಆರ್. ಚಂದ್ರಶೇಖರ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಅವರು “ಜಾನ್ ಸೀನ’ ಮತ್ತು “ಚಮಕ್’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದು ಅವರ ಬ್ಯಾನರ್ನ ಮೂರನೆಯ ಚಿತ್ರ. ಚಿತ್ರದ ಥ್ರಿಲ್ಲರ್ ಟ್ರೈಲರ್ ವೀಕ್ಷಿಸಿ.