“ಬಕಾಸುರ’ನ ಅವತಾರದಲ್ಲಿ ಕ್ರೇಜಿಸ್ಟಾರ್: ವಿಭಿನ್ನ ಟ್ರೈಲರ್ ವೀಕ್ಷಿಸಿ
Team Udayavani, Mar 8, 2018, 4:01 PM IST
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ “ಬಕಾಸುರ’ ಚಿತ್ರದ ಟ್ರೈಲರ್ ಸೋಮವಾರ ಬಿಡುಗಡೆಯಾಗಿದ್ದು, ಯಶ್ ಅವರ ಧ್ವನಿಯೊಂದಿಗೆ ಟ್ರೈಲರ್ ತೆರೆದುಕೊಳ್ಳುತ್ತದೆ. “ಜಗತ್ತಲ್ಲಿ ದುಡ್ಡಿಗಾಗಿ ಏನೇನೋ ಮಾಡುತ್ತಾರೆ, ಆದರೆ, ಈತ ಮಾತ್ರ ದುಡ್ಡಿಗಾಗಿ ಏನ್ ಬೇಕಾದ್ರೂ ಮಾಡ್ತಾನೆ …’ ಎಂಬ ಮಾತಿನೊಂದಿಗೆ “ಬಕಾಸುರ’ ಚಿತ್ರದ ಪಾತ್ರ ಪರಿಚಯ ಮಾಡುತ್ತಾರೆ. ಚಿತ್ರದಲ್ಲಿ ರವಿಚಂದ್ರನ್, ರೋಹಿತ್, ಕಾವ್ಯಾ ಸೇರಿದಂತೆ ಅನೇಕರು ನಟಿಸಿದ್ದಾರೆ. ರವಿಚಂದ್ರನ್ ಇಲ್ಲಿ ನೆಗೆಟಿವ್ ಶೇಡ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಓಕೆ, ಚಿತ್ರದಲ್ಲಿ ಹಣದ ಹಿಂದೆ ಬೀಳುವ ವ್ಯಕ್ತಿ ಏನೆಲ್ಲಾ ಮಾಡುತ್ತಾನೆ, ಆತನ ಜೀವನದಲ್ಲಿ ನಡೆಯುವ ರೋಚಕ ಘಟನೆಗಳೇನೂ ಎಂಬುದರ ಸುತ್ತ ಸಿನಿಮಾ ಸಾಗುತ್ತದೆಯಂತೆ. ಅದೇ ಕಾರಣಕ್ಕೆ “ಬಕಾಸುರ’ ಚಿತ್ರಕ್ಕೆ “ಫಾರ್ ಮನಿ’ ಎಂಬ ಟ್ಯಾಗ್ಲೈನ್ ಇದೆ. ಚಿತ್ರದ ವಿಭಿನ್ನ ಟ್ರೈಲರ್ ವೀಕ್ಷಿಸಿ.