ಆರಂಭಕ್ಕೂ-ಅಂತ್ಯಕ್ಕೂ ಅಂತರ ಇಟ್ಟವರ “ಸಿ3′: ಬೊಂಬಾಟ್ ಟ್ರೈಲರ್ ವೀಕ್ಷಿಸಿ
Team Udayavani, Mar 23, 2018, 5:57 PM IST
ಕಿರುತೆರೆಯ “ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಖ್ಯಾತಿಯ ವಿಜಯಕುಮಾರ್ ಹಾಗೂ “ಪ್ಯಾಟೆ ಹುಡ್ಗಿರ ಹಳ್ಳಿ ಲೈಫ್’ ರಿಯಾಲಿಟಿ ಶೋ ಖ್ಯಾತಿಯ ಐಶ್ವರ್ಯ ನಾಯಕ-ನಾಯಕಿಯಾಗಿ ನಟಿಸಿರುವ “ಸಿ3′ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿದ್ದು, ಹಾರರ್ ಫೀಲಿಂಗ್ ಮತ್ತು ಚಿತ್ರ ವಿಚಿತ್ರ ಘಟನೆಗಳು ಟ್ರೈಲರ್’ನಲ್ಲಿ ಕಂಡುಬರುತ್ತದೆ. ಇನ್ನು ಕೃಷ್ಣಕುಮಾರ್ ಬಿ. ಹೊಂಗನೂರು ಎಂಬುವವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ನಾಯಕ ನಾಯಕಿ ಬಿಟ್ಟರೆ ಬೇರೆ ಯಾವುದೇ ಪಾತ್ರಗಳಿಲ್ಲ! ಇಡೀ ಚಿತ್ರದ ಕಥೆ ನಡೆಯುವುದು ಒಂದೇ ರಾತ್ರಿ ಹಾಗೂ ಒಂದೇ ತಾಣದಲ್ಲಿ. ಇವರಿಬ್ಬರ ಸುತ್ತವೇ “ಸಿ3′ ಸಿನಿಮಾ ಮೂಡಿಬಂದಿದ್ದು, “ತರ್ಕಕ್ಕೆ ನಿಲುಕದ್ದು’ ಎಂಬ ಟ್ಯಾಗ್ಲೈನ್ ಇದೆ. ಒಂದು ದಿನ ರಾತ್ರಿ ಕಚೇರಿಯಲ್ಲೇ ನಾಯಕ ಇರಬೇಕಾದ ಸಂದರ್ಭ ಒದಗಿ ಬರುತ್ತದೆ. ಆ ಸಂಧರ್ಭದಲ್ಲಿ ಕೆಲವು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ. ಆ ವೇಳೆ ನಾಯಕ ಅಲ್ಲಿಂದ ಹೇಗೆ ಪಾರಾಗಿ ಹೊರ ಬರುತ್ತಾನೆ, ಕೊನೆಗೆ ಏನಾಗುತ್ತಾನೆ ಎಂಬುದೇ ಒನ್ಲೈನ್. ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ.