CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮೊದಲ ರಾತ್ರಿಯಲ್ಲೇ "ಚಮಕ್‌': ಫಸ್ಟ್ ನೈಟ್ ಟ್ರೈಲರ್ ವೀಕ್ಷಿಸಿ

ಸುನಿ ನಿರ್ದೇಶನದ, ಗಣೇಶ್‌ ನಾಯಕರಾಗಿ ನಟಿಸಿರುವ "ಚಮಕ್‌' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟ್ರೈಲರ್ ನಲ್ಲಿ ಮೊದಲ ರಾತ್ರಿಯ (ಫಸ್ಟ್ ನೈಟ್) ಹಸಿ-ಬಿಸಿಯ ದೃಶ್ಯಗಳು ಮಾಮೂಲಿನಂತೆ ಇರದೇ ಇರುವುದು ನೋಡುಗರಲ್ಲಿ ಕುತೂಹಲ ಕೆರಳಿಸಿ, ಚಿತ್ರದ ನಿರೀಕ್ಷೆ ಹೆಚ್ಚಿಸಿದೆ. ಅಲ್ಲದೇ ಟ್ರೈಲರ್ ಬಿಡುಗಡೆಯಾದ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇನ್ನು ಈ ಚಿತ್ರವನ್ನು ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಗಣೇಶ್‌ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದುವರೆಗೂ ಹೆಚ್ಚಾಗಿ ಲವ್ವರ್‌ ಬಾಯ್‌ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ಗಣೇಶ್‌, ಇದೇ ಮೊದಲ ಬಾರಿಗೆ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಇನ್ನು, "ಚಮಕ್‌'ನಲ್ಲಿ ಗಣೇಶ್‌ ಜೊತೆಗೆ ಮಗಳು ಚಾರಿತ್ರ್ಯ ಕೂಡಾ ನಟಿಸಿದ್ದಾರೆ. ಚಾರಿತ್ರ್ಯ ಇಲ್ಲೂ ಗಣೇಶ್‌ ಮಗಳಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅಪ್ಪ-ಮಗಳ ಭಾವನಾತ್ಮಕ ಸನ್ನಿವೇಶಗಳಿದ್ದು, ಆ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ. ಚಿತ್ರದ ಫಸ್ಟ್ ನೈಟ್ ಟ್ರೈಲರ್ ವೀಕ್ಷಿಸಿ.

Back to Top