CONNECT WITH US  

50ನೇ ದಿನಕ್ಕೆ ಮತ್ತೊಂದು "ಚಮಕ್‌': ಸೂಪರ್ ಟ್ರೈಲರ್ ವೀಕ್ಷಿಸಿ

ಸುನಿ ನಿರ್ದೇಶನದ, ಗಣೇಶ್‌ ನಾಯಕರಾಗಿ ನಟಿಸಿರುವ "ಚಮಕ್‌' ಚಿತ್ರ ಈಗಾಗಲೇ 50 ದಿನಗಳನ್ನು ಪೂರೈಸಿದೆ, ಅಲ್ಲದೇ ಈ ಹಿಂದೆ ಚಿತ್ರದ ಫಸ್ಟ್ ಟೀಸರ್ ಬಿಡುಗಡೆಯಾಗಿ ಟ್ರೈಲರ್ ನಲ್ಲಿ ಮೊದಲ ರಾತ್ರಿಯ (ಫಸ್ಟ್ ನೈಟ್) ಹಸಿ-ಬಿಸಿಯ ದೃಶ್ಯಗಳು ಮಾಮೂಲಿನಂತೆ ಇರದೇ ಇರುವುದು ನೋಡುಗರಲ್ಲಿ ಕುತೂಹಲ ಕೆರಳಿಸಿ, ಚಿತ್ರದ ನಿರೀಕ್ಷೆ ಹೆಚ್ಚಿಸಿತ್ತು, ಈಗ ಅದೇ ಮಾದರಿಯಲ್ಲಿ ಚಿತ್ರವು 50 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಮತ್ತೊಂದು ಟೀಸರ್ ನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಸದ್ದು ಮಾಡಿದೆ. ಇನ್ನು ಈ ಚಿತ್ರವನ್ನು ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. "ಚಮಕ್‌'ನಲ್ಲಿ ಗಣೇಶ್‌ ಜೊತೆಗೆ ಮಗಳು ಚಾರಿತ್ರ್ಯ ಕೂಡಾ ನಟಿಸಿದ್ದಾರೆ. ಚಾರಿತ್ರ್ಯ ಇಲ್ಲೂ ಗಣೇಶ್‌ ಮಗಳಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅಪ್ಪ-ಮಗಳ ಭಾವನಾತ್ಮಕ ಸನ್ನಿವೇಶಗಳಿದ್ದು, ಆ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ. ಚಿತ್ರದ ಸೂಪರ್ ಟ್ರೈಲರ್ ವೀಕ್ಷಿಸಿ.

Back to Top