CONNECT WITH US  

"ಟಾಪ್ ಟು ಬಾಟಮ್ ಗಾಂಚಾಲಿ' ಅಂದ್ರು ಚಂದನ್ ಶೆಟ್ಟಿ

ಕನ್ನಡ ರಾಪರ್ ಚಂದನ್ ಶೆಟ್ಟಿಯ "ಟಕಿಲ' ರಾಪ್ ಸಾಂಗ್ ದಾಖಲೆಯ ಬೆನ್ನಲ್ಲೇ ಇದೀಗ "ಟಾಪ್ ಟು ಬಾಟಮ್ ಗಾಂಚಾಲಿ' ಎಂಬ ಹೊಸ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಇದುವೆರೆಗೆ 46 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಹಾಡಿಗೆ ಸಂಗೀತ ಸಾಹಿತ್ಯವನ್ನು ಚಂದನ್ ಶೆಟ್ಟಿ ಅವರೇ ನೀಡಿದ್ದಾರೆ. ಈ ಹಿಂದಿನಂತೆ ಇಲ್ಲಿಯೂ ಚಂದನ್ ಮ್ಯೂಸಿಕ್ ಮತ್ತು ಲಿರಿಕ್ಸ್ ಗಮನ ಸೆಳೆಯುತ್ತದೆ. "ಟಕಿಲ', "ಪಕ್ಕಾ ಚಾಕ್ಲೇಟ್ ಗರ್ಲ್..' ಹಾಡಿನ ಬಳಿಕ ಚಂದನ್ "ಟಾಪ್ ಟು ಬಾಟಮ್ ಗಾಂಚಾಲಿ' ಲಿರಿಕಲ್ ವಿಡಿಯೋ ಹಾಡನ್ನು ಮಾಡಿದ್ದಾರೆ. ಸೂಪರ್ ಕನ್ನಡ ರಾಪ್ ಸಾಂಗ್ ವೀಕ್ಷಿಸಿ.

Back to Top