CONNECT WITH US  

"ಫಾರ್ಚೂನರ್‌'ಗೆ ಸಂಜಿತ್ ಹೆಗ್ಡೆ ಹಾಡು: ಸೂಪರ್ ಸಾಂಗ್ ವೀಕ್ಷಿಸಿ

ದಿಗಂತ್‌ ನಾಯಕರಾಗಿ ನಟಿಸಿರುವ "ಫಾರ್ಚೂನರ್‌' ಚಿತ್ರದ ಟೀಸರ್ ಬಿಡುಗಡೆಯಾಗಿ, ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಇದೀಗ ಚಿತ್ರತಂಡ ಚಿತ್ರದ "ಓ ದೇವಾ' ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದೆ. ಸಂಜಿತ್ ಹೆಗ್ಡೆ ಕಂಠದಲ್ಲಿ ಮೂಡಿಬಂದಿರುವ ಈ ಹಾಡಿಗೆ ಮನೋಜ್ ಸಾಹಿತ್ಯವನ್ನು ರಚಿಸಿದ್ದಾರೆ. ಇನ್ನು ಚಿತ್ರದ ಟೈಟಲ್‌ ಕೇಳಿದಾಗ ಇದು ಫಾರ್ಚೂನರ್‌ ಕಾರಿನ ಸುತ್ತ ಸುತ್ತುವ ಕಥೆಯೇ ಎಂಬ ಭಾವನೆ ಬರದೇ ಇರದು. ಆದರೆ, ಕಾರಿಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿನ ಕಥೆ ನಾಯಕನ ಬದುಕಿನ ಅದೃಷ್ಟದ ಸುತ್ತ ಸುತ್ತುತ್ತದೆ. ಮಂಜುನಾಥ್‌ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ರಾಜೇಶ್‌ ಗೊಲೋಚ, ದಿಲೀಪ್‌ ಗೊಲೋಚ, ಭರತ್‌ ಗೊಲೋಚ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ದಿಗಂತ್‌ ಶ್ರೀಮಂತ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದಿಗಂತ್‌ ಬಿಂದಾಸ್‌ ಸ್ಟೆಪ್‌ ಕೂಡಾ ಹಾಕಿದ್ದಾರೆ. ನಾಯಕಿ ಸೋನುಗೌಡಗೆ ಇಲ್ಲಿ ಬೋಲ್ಡ್‌ ಪಾತ್ರ ಸಿಕ್ಕಿದೆ. ನೆಗೆಟಿವ್‌ ಶೇಡ್‌ ಇರುವ ಪಾತ್ರವಾದರೂ ವಿಭಿನ್ನವಾಗಿದೆ. ಸ್ವಾತಿ ಶರ್ಮಾ ಈ ಸಿನಿಮಾದಲ್ಲಿ ಮತ್ತೂಬ್ಬ ನಾಯಕಿ. ಇಲ್ಲಿ ಅವರು ಉತ್ತರ ಕರ್ನಾಟಕದ ಹುಡುಗಿಯಾಗಿ ನಟಿಸಿದ್ದಾರೆ. ಉಳಿದಂತೆ ನವೀನ್‌ ಕೃಷ್ಣ, ರಾಜೇಶ್‌ ನಟರಂಗ, ಕಲ್ಯಾಣಿ ನಟಿಸಿದ್ದಾರೆ. ಚಿತ್ರಕ್ಕೆ ಎಂ.ಎಸ್‌.ನರಸಿಂಹಮೂರ್ತಿ ಸಂಭಾಷಣೆ, ಪೂರ್ಣಚಂದ್ರ ತೇಜಸ್ವಿ ಸಂಗೀತ, ಮಧುಸೂದನ್‌ ಛಾಯಾಗ್ರಹಣ, ಗುರುಸ್ವಾಮಿ ಸಂಕಲನವಿದೆ. ಚಿತ್ರದ ಸೂಪರ್ ಸಾಂಗ್ ವೀಕ್ಷಿಸಿ.

Back to Top