Gವನ ಯಜ್ಞ ಭರ್ಜರಿ ಟ್ರೈಲರ್ ಬಿಡುಗಡೆ ; ಹೆಚ್ಚಿದ ಕುತೂಹಲ
Team Udayavani, Sep 21, 2018, 10:37 AM IST
ಶಿವು ಸರಳೇಬೆಟ್ಟು ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ Gವನ ಯಜ್ಞ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲು ಸಿದ್ಧವಾಗಿದೆ. ಚಿತ್ರದ ಭರ್ಜರಿ ಟ್ರೈಲರ್ ಶುಕ್ರವಾರ ಬಿಡುಗಡೆಯಾಗಿದ್ದು, ಚಿತ್ರದ ಕುರಿತಾಗಿ ಕುತೂಹಲ ಮೂಡಿಸಿದೆ.
ಚಿತ್ರದಲ್ಲಿ ಬೆಳ್ಳಿತೆರೆ ಮತ್ತು ಕಿರುತೆರೆಯ 40ಕ್ಕೂ ಹೆಚ್ಚು ಕಲಾವಿದರು ಬಣ್ಣ ಹಚ್ಚಿದ್ದಾರೆ. ಆಶ್ಲೇ ಮೈಕಲ್ ಸಂಗೀತ ಸಂಯೋಜಿಸಿರುವ ಜೀವನ ಯಜ್ಞ ಚಿತ್ರದಲ್ಲಿ 9 ವಿಭಿನ್ನ ಹಾಡುಗಳಿದ್ದು, ಗಾಗಲೇ 5 ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ದೊರಕಿದೆ.
ವಿಜಯ್ ಪ್ರಕಾಶ್ ಹಾಡಿರುವ ಶಂಭೋ ಶಂಕರಾ, ಸದ್ದೇ ಇಲ್ಲದೇ, ಬಹಳ ದಿನಗಳ ನಂತರ, ವಿನಾಕಾರಣ ಹಾಡುಗಳು ಯೂಟ್ಯೂಬ್ ನಲ್ಲಿ ಸದ್ದು ಮಾಡತೊಡಗಿದೆ.
ಶೈನ್ ಶೆಟ್ಟಿ ,ಮನೋಜ್ ಪುತ್ತೂರು ,ಆದ್ಯ ಆರಾಧನ್, ಅನ್ವಿತಾ ಸಾಗರ್ ,ಸಂದೀಪ್ ಶೆಟ್ಟಿ ರಾಯೀ ,ಪ್ರವೀಣ್ ಮರ್ಕಮೆ ,ವಸಂತ್ ಮುನಿಯಾಲ್ ಮುಖ್ಯ ಭೂಮಿಕೆಯಲ್ಲಿ, ಹಿರಿಯ ನಟರಾದ ರಮೇಶ್ ಭಟ್ ,ಬಿ ಜಯಶ್ರೀ ,ಎಂ. ಕೆ. ಮಠ ಹಾಗೂ ಕರಾವಳಿಯ ಪ್ರಬುದ್ಧ ಕಲಾವಿದರ ದಂಡು ಚಿತ್ರದಲ್ಲಿದೆ.