ಈ ಯುಗದ “ಇದಂ ಪ್ರೇಮಂ ಜೀವನಂ’: ಸೂಪರ್ ಡೈಲಾಗ್ ಪ್ರೋಮೋ ವೀಕ್ಷಿಸಿ
Team Udayavani, Mar 12, 2018, 4:49 PM IST
ಅಪ್ಪ-ಅಮ್ಮ ಫಸ್ಟ್, ಪ್ರೀತಿ-ಪ್ರೇಮ ನೆಕ್ಸ್ಟ್ ಎಂಬ ಸಾರಾಂಶ ಇರುವ “ಇದಂ ಪ್ರೇಮಂ ಜೀವನಂ’ ಚಿತ್ರದ ಡೈಲಾಗ್ ಪ್ರೋಮೋ ಬಿಡುಗಡೆಯಾಗಿದ್ದು, ಹೊಸ ರೀತಿಯ ಡೈಲಾಗ್ಗಳಿಂದ ಕೂಡಿದ್ದು, ಚಿತ್ರದ ನಾಯಕನಾಗಿ ಸನತ್ ಹಾಗೂ ನಾಯಕಿಯಾಗಿ ಶನಾಯ ಮತ್ತು ಸಿರಿ ರಾಜು ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರವನ್ನು ರಾಘವಾಂಕ ಪ್ರಭು ನಿರ್ದೇಶಿಸಿದರೆ, ಗೋಕುಲ್ ಮತ್ತು ನವೀನ್ ಚಿತ್ರದ ನಿರ್ಮಾಪಕರು. ಉಳಿದಂತೆ ಅವಿನಾಶ್, ಮಾಳವಿಕ, ಭಾವನಾ ಪ್ರೀತಂ, ದೀಪು, ರಾಮು, ಭರತ್, ನಾಗಾರ್ಜುನ್ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಕ್ಯಾಮೆರಾ ಕೈ ಚಳಕ, ಕುಮಾರ್ ಸಂಕಲನ ಮಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ. ಚಿತ್ರದ ಸೂಪರ್ ಡೈಲಾಗ್ ಪ್ರೋಮೋ ವೀಕ್ಷಿಸಿ.