CONNECT WITH US  

"ಜನ ಗಣ ಮನ': ಖಡಕ್ ಪೊಲೀಸ್ ಲುಕ್ ನಲ್ಲಿ ಆಯೇಷಾ

ಆಯೇಷಾ ಹಬೀಬ್ ಹಾಗು ರವಿಕಾಳೆ ಅಭಿನಯದ "ಜನ ಗಣ ಮನ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಖಡಕ್ ಪೊಲೀಸ್ ಲುಕ್ ನಲ್ಲಿ ಆಯೇಷಾ ಮಿಂಚಿದ್ದಾರೆ. ಇನ್ನು ಚಿತ್ರವು ವಿ.ಐ.ಪಿ. ಸಿನೆಮಾಸ್‌, ಸಾಂಬಶಿವಾರೆಡ್ಡಿ ನಿರ್ಮಾಣದಲ್ಲಿ ಮೂಡಿಬಂದಿದೆ. ಅಲ್ಲದೇ ಚಿತ್ರಕ್ಕೆ ಕಥೆ ಕೋರಾ ನಾಗೇಶ್ವರ ರಾವ್‌ ಬರೆದರೆ, ಗೌರಿವೆಂಕಟೇಶ್‌ ಕ್ಯಾಮೆರಾ ಕೈಚಳಕವಿದೆ, ಹಾಗು ಗೌತಮ್‌ ಶ್ರೀವತ್ಸ ಸಂಗೀತ, ಡಿಫ‌ರೆಂಟ್‌ ಡ್ಯಾನಿ, ಚಂದ್ರು ಸಾಹಸ, ಹೈಟ್‌ ಮಂಜು ನೃತ್ಯ, ಶಶಿಕಾಂತ್ ನಿರ್ದೇಶನ ಚಿತ್ರಕ್ಕಿದೆ. ತಾರಾಗಣದಲ್ಲಿ ರಾಮಕೃಷ್ಣ, ಕಾವೇರಪ್ಪ, ಮಾನಸ್ವಿ, ಕಾಮನ, ರಘುನಾಥ್‌ ಯಾದವ್‌, ಎ.ಕೆ.ರಾಮು, ಸೌಂದರ್ಯ, ಸೌಮ್ಯ ಮುಂತಾದವರಿದ್ದಾರೆ. ಚಿತ್ರದ ಖಡಕ್ ಟ್ರೈಲರ್ ವೀಕ್ಷಿಸಿ.

Back to Top