CONNECT WITH US  

ಹೊಸ ಕಥೆ ಹೇಳೋಕೆ ಬಂದ "ಕವಿ': ಬೊಂಬಾಟ್ ಟೀಸರ್ ವೀಕ್ಷಿಸಿ

"ಕವಿ' ಎಂಬ ಚಿತ್ರ ಈ ವಾರ ತೆರೆಕಾಣುತ್ತಿದ್ದು, ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಪುನೀತ್‌ ಗೌಡ ನಾಯಕರಾಗಿ ಪರಿಚಯವಾಗುತ್ತಿದ್ದಾರೆ. ಎಸ್‌.ತ್ಯಾಗರಾಜ ಅವರ ನಿರ್ದೇಶನವಿದೆ. ನಿರ್ಮಾಣವನ್ನು ಪುನೀತ್‌ ಮಾಡಿದ್ದಾರೆ. ಈಗಾಗಲೇ ಸಂಗೀತ ನಿರ್ದೇಶಕರಾಗಿ ಸಾಕಷ್ಟು ಸಿನಿಮಾಗಳಿಗೆ ಮ್ಯೂಸಿಕ್‌ ಕಂಪೋಸ್‌ ಮಾಡಿರುವವರು ತ್ಯಾಗರಾಜ್‌. ಕವಿ ಚಿತ್ರದ ಮೂಲಕ ಮೊದಲ ಬಾರಿಗೆ ತ್ಯಾಗರಾಜ್‌ ಚಿತ್ರನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಈ ಚಿತ್ರಕ್ಕೆ ಶರತ್‌ಕುಮಾರ್‌, ಕಾರ್ತಿಕ್‌ ಶರ್ಮ ಛಾಯಾಗ್ರಹಣ, ಧನು ಆರ್‌. ಸಂಭಾಷಣೆ, ಮಧುಸೂದನ್‌, ಪ್ರೇಮ್‌ಋಷಿ, ಎಂ.ಎಸ್‌. ತ್ಯಾಗರಾಜ್‌ ಸಾಹಿತ್ಯ, ಸಿ.ರವಿಚಂದ್ರನ್‌ ಸಂಕಲನ, ಜಯಪ್ರಕಾಶ್‌ ನ್ಯತ್ಯ ನಿರ್ದೇಶನ, ಪುನೀತ್‌ಗೌಡ, ಶೋಭಿತಾ ಶಿವಣ್ಣ, ಸ್ನೇಹ, ಉಮೇಶ್‌, ರಾಕ್‌ಲೈನ್‌ ಸುಧಾಕರ್‌, ಮಹೇಶ್‌ ಇನ್ನು ಮುಂತಾದವರ ತಾರಾಬಳಗವಿದೆ. ಚಿತ್ರದ ಬೊಂಬಾಟ್ ಟೀಸರ್ ವೀಕ್ಷಿಸಿ.

Back to Top