CONNECT WITH US  

"ಕೆಜಿಎಫ್'ನಲ್ಲಿ ಯಶ್ ರಗಡ್ ಎಂಟ್ರಿ: ಮಾಸ್ ಟ್ರೈಲರ್ ವೀಕ್ಷಿಸಿ

ದೇಶಾದ್ಯಂತ ಭಾರಿ ಸದ್ದು ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ "ಕೆಜಿಎಫ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಮಾಸ್ ಅ್ಯಂಡ್ ರಗಡ್ ಲುಕ್‍ನಲ್ಲಿ ಯಶ್ ಮಿಂಚಿದ್ದಾರೆ. ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರ ಸದ್ಯ ಬಾಲಿವುಡ್ ಸಿನಿಮಾಗಳಿಗೂ ಠಕ್ಕರ್ ಕೊಡೋವರೆಗೆ ಸಿದ್ಧವಾಗಿದೆ. ಹೌದು! ಕನ್ನಡ, ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗಿರುವ ಈ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದಲ್ಲೇ ಅತೀ ದೊಡ್ಡ ಬಜೆಟ್ ಸಿನಿಮಾ ಆಗಿರುವ "ಕೆಜಿಎಫ್', ಇದೇ ಡಿಸೆಂಬರ್ 21ರಂದು ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. 80ರ ದಶಕದ ಕಾಲಘಟ್ಟದ ಕಥೆಯಲ್ಲಿ ಪಾತ್ರಕ್ಕಾಗಿ ಒಂದೂವರೆ ವರ್ಷ ಗಡ್ಡ, ಕೂದಲು ಬಿಟ್ಟು ರಫ್ ಅಂಡ್ ಟಫ್ ಲುಕ್​ನಲ್ಲಿ ಯಶ್​​​ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯ ಕೂಡ ಈ ಚಿತ್ರದಲ್ಲಿ ಸಖತ್ ಡಿಫರೆಂಟ್ ಆಗಿದೆ ಎನ್ನಲಾಗುತ್ತಿದೆ. ಇನ್ನು ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಭುವನ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಯಶ್ ಎದುರಿಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಇನ್ನುಳಿದಂತೆ ಅನಂತ್ ನಾಗ್, ಮಾಳವಿಕಾ, ಟಿ.ಎಸ್.ನಾಗಾಭರಣ, ಬಿ,ಸುರೇಶ್, ಅಯ್ಯಪ್ಪ, ನೀನಾಸಂ ಅಶ್ವಥ್, ಅಚ್ಯುತ್ ಕುಮಾರ್, ರಾಮ್, ಅವಿನಾಶ್, ಲಕ್ಕಿ, ಹರೀಶ್ ರಾಯ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ಕನ್ನಡ ಹಾಗೂ ಮಲಯಾಳಂನಲ್ಲಿ ವಿತರಣೆ ಮಾಡಲಾಗುತ್ತಿದ್ದು, ತಮಿಳಿನಲ್ಲಿ ನಟ ವಿಶಾಲ್ ತಮ್ಮ ವಿಶಾಲ್​ ಫಿಲ್ಮ್ ಫ್ಯಾಕ್ಟರಿ ಮೂಲಕ ವಿತರಿಸಲಿದ್ದಾರೆ. ಹಿಂದಿಯಲ್ಲಿ ಫರ್ಹಾನ್ ಆಖ್ತರ್ ಹಾಗೂ ರಿತೇಶ್ ಸಿಧ್ವಾನಿ ತಮ್ಮ ಎಕ್ಸೆಲ್ ಎಂಟರ್​ಟೈನ್​ ಮೆಂಟ್ ಹಾಗೂ ತೆಲುಗಿನಲ್ಲಿ ಪ್ರಸಿದ್ಧ ವಾರಾಹಿ ಚಲನಚಿತ್ರಂ ಸಂಸ್ಥೆ ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿದೆ. ಚಿತ್ರದ ಮಾಸ್ ಟ್ರೈಲರ್ ವೀಕ್ಷಿಸಿ.

Back to Top